ನವದೆಹಲಿ(ಫೆ.13) ತಜಕಿಸ್ತಾನದಲ್ಲಿ ಸಂಭವಿಸಿದ 6.3 ರ ತೀವ್ರತೆಯ ಭೂಕಂಪನದ ಅನುಭವ ಭಾರತದಲ್ಲೂ ಆಗಿದೆ. ದೆಹಲಿ, ಪಂಜಾಬ್, ಕಾಶ್ಮೀರ ಸೇರಿದಂತೆ ಉತ್ತರ ಭಾರತದಲ್ಲೂ ಅನುಭವಾಗಿದೆ. ಪ್ರಬಲ ಭೂಕಂಪನ ಇದಾಗಿದ್ದು, ಹಲವರು ಮನೆಯಿಂದ ಹೊರಗೋಡಿ ಹೊರಬಂದಿದ್ದಾರೆ. ಇನ್ನು ಲೈವ್ ಮಾತುಕತೆಯಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲೈವ್‌ನಲ್ಲೇ ಭೂಕಂಪನ ಕುರಿತು ಹೇಳಿದ್ದಾರೆ.

BREAKING: ದೆಹಲಿ ಹಾಗೂ ಉತ್ತರ ಭಾರತದಲ್ಲಿ ಭೂಕಂಪ!.

ಚಿಕಾಗೋ ವಿಶ್ವವಿದ್ಯಾಲಯದ ಲೈವ್ ಮಾತುಕತೆಯಲ್ಲಿ ತನ್ನ ವಿಚಾರಧಾರೆ ಹಂಚಿಕೊಳ್ಳುತ್ತಿದ್ದ ವೇಳೆ ದೆಹಲಿಯಲ್ಲಿ ಭೂಕಂಪನದ ಅನುಭವವವಾಗಿದೆ. ಈ ಕುರಿತು ಲೈವ್‌ನಲ್ಲೇ ರಾಹುಲ್ ಗಾಂಧಿ ಹೇಳಿದ್ದಾರೆ. ಮಾತಿನ ನಡುವೆ ರಾಹುಲ್ ಗಾಂಧಿ, ಇಲ್ಲಿ ಭೂಕಂಪನವಾಗುತ್ತಿದೆ. ನನ್ನ ಕೋಣೆ ಕಂಪಿಸುತ್ತಿದೆ ಎಂದಿದ್ದಾರೆ.

 

ರಾಹುಲ್ ಮಾತನ್ನು ಚಿಕಾಗೋದಲ್ಲಿ ತಜ್ಞರು ಸೇರಿದಂತೆ ಲೈವ್‌ನಲ್ಲಿದ್ದ ಇತರ ವಿಶ್ಲೇಷಕರು ಈ ಕುರಿತು ನಕ್ಕು ಸುಮ್ಮನಾದರು. ಆದರೆ ಲೈವ್ ಮಾತುಕತೆ ಮುಗಿದ ಬಳಿಕವಷ್ಟೇ ರಾಹುಲ್ ಗಾಂಧಿ ಮಾತಿನ ಗಂಭೀರತೆ ಇತರರಿಗೆ ಅರಿವಾಗಿದೆ. ದೆಹಲಿಯಲ್ಲೂ ಭೂಮಿ ಕಂಪಿಸಿದೆ. ರಾಹುಲ್ ಗಾಂಧಿ ಲೈವ್‌ನಲ್ಲಿ ಹೇಳಿದ ಮಾತು ಇದೀಗ ವೈರಲ್ ಆಗಿದೆ.