'ಕನಸಿನ ಲೋಕದಲ್ಲಿರುವ ರಾಹುಲ್ ತಮ್ಮನ್ನು ತಾವು ರಾಜ ಅಂದುಕೊಂಡಿದ್ದಾರೆ'
ರಾಹುಲ್ ಗಾಂಧಿಯ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ಸ್ಮೃತಿ ಇರಾನಿ/ ಕಾಂಗ್ರೆಸ್ ಮಧ್ಯವರ್ತಿಗಳ ಪರವಾಗಿ ನಿಂತಿದೆ/ ರಾಹುಲ್ ಗಾಂಧಿ ಕನಸಿನ ಲೋಕದಲ್ಲಿ ಇದ್ದು ತಾವೊಬ್ಬ ರಾಜ ಎಂದು ಭಾವಿಸಿದಂತೆ ಇದೆ
ನವದೆಹಲಿ(ಅ. 07) ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ, ಅಭಿಯಾನಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೆಂಡ ಕಾರಿದ್ದಾರೆ. ಕಾಂಗ್ರೆಸ್ ಅಭಿಯಾನ ನಡೆಸುತ್ತಿರುವುದು ರೈತರ ಪರ ಅಲ್ಲ, ಮಧ್ಯವರ್ತಿಗಳ ಪರ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆಗೆ ತೀಲಾಂಜಲಿ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ, ಬಹುಷಃ ರಾಹುಲ್ ಕನಸಿನ ಲೋಕದಲ್ಲಿ ಬದುಕುತ್ತಿದ್ದಾರೆ.. ತಾವೊಬ್ಬ ರಾಜ ಎಂಧು ಭಾವಿಸಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಮ್ಮಿಕೊಂಡಿರುವ ಅಭಿಯಾನ ಮಧ್ಯವರ್ತಿಗಳ ಪರವಾಗಿದೆ. ಇಲ್ಲಿಯೂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಮೇಲೆ ಅವರ ರಾಜಕಾರಣ ನಿಂತಿದೆ. ರೈತರ ಹಿತ ಕಾಯುವುದು ಬೇಕಿಲ್ಲ ಎಂದಿದ್ದಾರೆ.
ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಅವಧಿಯಲ್ಲಿ ಭತ್ತದ ಸಂಗ್ರಹದ ಲೆಕ್ಕವನ್ನು ಇರಾನಿ ನೀಡಿದ್ದಾರೆ. 2013-14ರಲ್ಲಿ - ಯುಪಿಎ ಅಧಿಕಾರದಲ್ಲಿದ್ದಾಗ 40,000 ಕೋಟಿ ಖರ್ಚು ಮಾಡಲಾಗಿದ್ದು, ಇದು 2019-20ರಲ್ಲಿ ಎನ್ ಡಿಎ ಇದನ್ನು 1.4 ಲಕ್ಷ ಕೋಟಿ ರೂ. ಗೆ ಏರಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಗೆದ್ದರೆ ಕೃಷಿ ಕಾಯಿದೆ ಕಸದ ಬುಟ್ಟಿಗೆ
ಕಾಂಗ್ರೆಸ್ ವಿಫಲ ರೈತರನ್ನು ಮಾತ್ರವಲ್ಲ, ದೇಶದ ಸಂಪೂರ್ಣ ಕೃಷಿ ವ್ಯವಸ್ಥೆಯನ್ನೇ ಹಾಳು ಮಾಡಿದ್ದಕ್ಕೆ ಸಾವಿರ ಉದಾಹರಣೆಗಳಿವೆ. ಈ ವಿಚಾರದಲ್ಲಿ ರಾಜಕಾರಣ ಬಿಟ್ಟು ಅಭಿವೃದ್ಧಿಯೊಂದಿಗೆ ಹೆಜ್ಜೆ ಹಾಕಬೇಕು ಎಂದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ನಲ್ಲಿ ಯಾತ್ರೆ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದರು.