ನವದೆಹಲಿ(ಜು.27): ಭಾರತದ ಭೂ ಭಾಗ ಚೀನಾ ಆಕ್ರಮಿಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಜನರಿಗೆ ಸುಳ್ಳು ಹೇಳುತ್ತಿದೆ. ನನ್ನ ಜನತೆಗೆ ಸತ್ಯ ಹೇಳುತ್ತೇನೆ. ಇದರಿಂದ ನನ್ನ ರಾಜಕೀಯ ಭವಿಷ್ಯದ ಕುರಿತು ಚಿಂತೆ ಇಲ್ಲ ಎಂದಿದ್ದರು. ಇದೀಗ ರಾಹುಲ್ ಗಾಂಧಿ ಸತ್ಯಾನ್ವೇಷಣೆಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ರಾಜಕೀಯ ಭವಿಷ್ಯ ಆರಂಭದಲ್ಲೇ ಮುಗಿದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿಎಲ್‍ವಿ ನರಸಿಂಹರಾವ್ ಹೇಳಿದ್ದಾರೆ.

ನನ್ನ ಭವಿಷ್ಯದ ಚಿಂತೆಯಿಲ್ಲ, ಸುಳ್ಳು ಹೇಳಲ್ಲ; ಚೀನಾ ಅತಿಕ್ರಮಣ ಕುರಿತು ರಾಹುಲ್ ಗಾಂಧಿ ಆಕ್ರೋಶ!

ಈ ದೇಶದ ಜನತೆ ರಾಹುಲ್ ಗಾಂಧಿಯನ್ನು ನಾಯಕನಾಗಿ ಕಾಣಲಿಲ್ಲ. ಹೀಗಾಗಿ 2019ರಲ್ಲೇ ರಾಹುಲ್ ರಾಜಕೀಯ ಭವಿಷ್ಯ ಅಂತ್ಯವಾಗಿದೆ. ಸದ್ಯ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಬುಡ ಅಲುಗಾಡಿಸುತ್ತಿದ್ದಾರೆ ಎಂದು ನರಸಿಂಹರಾವ್ ಹೇಳಿದ್ದಾರೆ.

ಭಾರತ ಹಾಗೂ ಚೀನಾ ಗಡಿ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಸದ್ಯ ಗಡಿಯಲ್ಲಿ ಶಾಂತಿ ಸ್ಥಾಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆಸಿದೆ. ಇಷ್ಟೇ ಅಲ್ಲ ಚೀನಾಗೆ ಇತರ ರೀತಿಯಲ್ಲಿ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿದೆ ಎಂದು ನರಸಿಂಹರಾವ್ ಹೇಳಿದ್ದಾರೆ.