ನವದೆಹಲಿ(ಜು.27): ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೂತನ ವಿಡಿಯೋ ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ. ನನ್ನ ಭವಿಷ್ಯ ಏನಾದರೂ ಚಿಂತೆ ಇಲ್ಲ, ಆದರೆ ನಾನು ಭಾರತದ ಗಡಿ ಪ್ರದೇಶದ ಕುರಿತು ಸುಳ್ಳು ಹೇಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

BJPಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ಹೊಸ ಆಂದೊಲನ ಆರಂಭಿಸಿದ ರಾಹುಲ್ ಗಾಂಧಿ!

ಚೀನಾ ಸೇನೆ ಭಾರತದ ಗಡಿ ಪ್ರದೇಶದೊಳಕ್ಕೆ ನುಗ್ಗಿದ ಕಾರಣಕ್ಕೆ ಭಾರತೀಯ ಯೋಧರು ಹೋರಾಟ ನಡೆಸಬೇಕಾಯಿತು. ಆದರೆ ಪ್ರಧಾನಿ ಮೋದಿ ಚೀನಾ ಸೇನೆ ಭಾರತ ಗಡಿ ಆಕ್ರಮಿಸಿಕೊಂಡಿಲ್ಲ ಎಂದು ತಪ್ಪು ಸಂದೇಶ ರವಾನಿಸಿದ್ದಾರೆ. ಇದು ದೇಶ ವಿರೋಧಿ. ಸತ್ಯವನ್ನು ಜನರ ಮುಂದಿಡುವುದು ದೇಶಭಕ್ತಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 

'ಟೈಗರ್ ಪರ್ವತದ ಮೇಲೆ ಧ್ವಜ ಹಾರಿಸಿ 21 ವರ್ಷ'  ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ.

ಭಾರತ ಹಾಗೂ ಇಲ್ಲಿನ ಜನರು ನನ್ನ ಮೊದಲ ಆದ್ಯತೆ. ಚೀನಾ ಭಾರತದ ಗಡಿ ಪ್ರದೇಶ ಅತಿಕ್ರಮಣ, 20 ಭಾರತೀಯ ಯೋಧರು ಹುತಾತ್ಮ ಸುದ್ದಿ ಕೇಳಿದಾಗ ನನ್ನ ರಕ್ತ ಕುದಿಯುತ್ತಿದೆ. ಇದು ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಇತರ ದೇಶವೊಂದು ನಮ್ಮ ಗಡಿ ಪ್ರದೇಶದೊಳಕ್ಕೆ ನುಗ್ಗುವುದು ಒಪ್ಪುವ ಅಥವಾ ಸಹಿಸುವ ಮಾತಲ್ಲ ಎಂದು ರಾಹುಲ್ ಹೇಳಿದ್ದಾರೆ.

ನಾನು ರಾಜಕೀಯ ವ್ಯಕ್ತಿ ಅನ್ನೋ ಕಾರಣಕ್ಕೆ ನಾನು ಜನರಿಗೆ ಸುಳ್ಳು ಹೇಳಬೇಕಾ? ಚೀನಾ ಆಕ್ರಮಣಗ ಸ್ಯಾಟಲೈಟ್ ಫೋಟೋ ಪರಿಶೀಲಿಸಿದ್ದೇನೆ. ಯೋಧರ ಜೊತೆ ಮಾತನಾಡಿದ್ದೇನೆ. ಚೀನಾ ಅತಿಕ್ರಮಣ ಸ್ಪಷ್ಟವಾಗಿದೆ. ನಾನೀನ ಕೇಂದ್ರ ಸರ್ಕಾರ ಹೇಳಿದಂತೆ ಚೀನಾ ಆಕ್ರಮಣ ಮಾಡಿಲ್ಲ ಎಂದು ಜನರಿಗೆ ಸುಳ್ಳು ಹೇಳಬೇಕಾ? ಇದು ನನ್ನಿಂದ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.