ಆರೋಗ್ಯ, ಸುರಕ್ಷಿತ ಬದುಕು ಎಲ್ಲರ ಹಕ್ಕು, ಎಲ್ಲರಿಗೂ ಲಸಿಕೆ ಅಭಿಯಾನ ಆರಂಭಿಸಿದ ಕಾಂಗ್ರೆಸ್!

ಕೊರೋನಾ ವೈರಸ್ 2ನೇ ಅಲೆಗೆ ಭಾರದ ಹೈರಾಣಾಗಿದೆ. ಇದರ ನಡುವೆ ಲಸಿಕೆ ಅಭಾವ ಎದುರಾಗಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2ನೇ ಬಾರಿಗೆ ಕೊರೋನಾ ಲಸಿಕೆ ದೇಶಕ್ಕ ನೀಡಿ ಎಂದಿದ್ದಾರೆ. ಕೇಂದ್ರಕ್ಕೆ ರಾಹುಲ್ ಗಾಂಧಿ ಸಲಹೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Rahul gandhi launch Social media campaign on demanding Covid vaccine for all citizens ckm

ನವದೆಹಲಿ(ಏ.12): ಕೊರೋನಾ ಲಸಿಕೆ ದೇಶಕ್ಕೆ ಅಗತ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಲಸಿಕೆ ರಫ್ತು ಮಾಡುವ ಬದಲು ದೇಶದ ಎಲ್ಲರಿಗೂ ಲಸಿಕೆ ನೀಡಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಆರಂಭಿಸಿರುವ ಎಲ್ಲರಿಗೂ ಲಸಿಕೆ ಅಭಿಯಾನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಪ್ರತಿಯೊಬ್ಬರಿಗೂ ಆರೋಗ್ಯವಾಗಿ ಹಾಗೂ ಸುರಕ್ಷಿತ ಜೀವನದ ಹಕ್ಕಿದೆ ಎಂದಿದ್ದಾರೆ.

ವಿದೇಶಕ್ಕೆ ಯಾಕೆ? ದೇಶದ ಎಲ್ಲರಿಗೂ ಲಸಿಕೆ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಪತ್ರ!

#SpeakUpForVaccinesForAll (ಎಲ್ಲರಿಗೂ ಲಸಿಕೆಗಾಗಿ ಧ್ವನಿ ಎತ್ತಿ) ಎಂಬ ಸಾಮಾಜಿಕ ಜಾಲತಾಣ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಹೀಗಾಗಿ ದೇಶದಲ್ಲಿ ಹಂತ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತದ ಪ್ರಜಾಪ್ರಭುತ್ವದಲ್ಲಿ ಏನಾಗುತ್ತಿದೆ? ಅಮೆರಿಕದ ಅಭಿಪ್ರಾಯ ಕೇಳಿದ ರಾಹುಲ್ ಗಾಂಧಿ!

ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತಾಗಬೇಕು. ಹೀಗಾದಲ್ಲಿ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ. ಈಗಾಗಲೇ ಭಾರತ ಈ ಹಿಂದಿನ ಗರಿಷ್ಠ ದಾಖಲೆಯನ್ನು ದಾಟಿದೆ. ಅಪಾಯದ ಮಟ್ಟ ಹೆಚ್ಚಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗಿದೆ. ಆಸ್ಪತ್ರೆಗಳು ಭರ್ತಿಯಾಗಿದೆ. ಸಾವಿರ ಸಮಸ್ಯೆಗಳ ನಡುವೆ ವಿದೇಶಕ್ಕೆ ಲಸಿಕೆ ರಫ್ತು ಮಾಡುವ ಅಗತ್ಯವಿಲ್ಲ. ಈ ಕುರಿತು ದೇಶದ ಜನ ಧ್ವನಿ ಎತ್ತಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios