ನವದೆಹಲಿ(ಫೆ.27):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಫೋಟೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಫೋಟೋ ಜನರಿಗೆ ಅದೆಷ್ಟು ಇಷ್ಟವಾಗಿದೆ ಎಂದರೆ, ನೋಡುಗರು ರಾಹುಲ್‌ ಗಾಂಧಿಯ ಫಿಟ್ನೆಸ್‌ಗೆ ಮಾರು ಹೋಗಿದ್ದಾರೆ, ಅಲ್ಲದೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವೈರಲ್ ಆದ ಫೋಟೋದಲ್ಲಿ ರಾಹುಲ್ ಗಾಂಧಿಯ ಆಬ್ಸ್‌, ಬೈಸೆಪ್ಸ್ ಸ್ಪಷ್ಟವಾಗಿ ಕಂಡು ಬಂದಿದೆ. ಇದರಿಂದ ಅವರೆಷ್ಟು ಫಿಟ್ನೆಸ್‌ಗೆ ಮಹತ್ವ ನಿಡುತ್ತಾರೆಂಬುವುದೂ ಬಯಲಾಗಿದೆ. ಕಾಂಗ್ರೆಸ್‌ನ ಅನೇಕ ನಾಯಕರು ರಾಹುಲ್ ಗಾಂಧಿಯ ಈ ಫೋಟೋ ಶೇರ್ ಮಾಡುತ್ತಾ ಫಿಟ್ನೆಸ್‌ ಬಗ್ಗೆ ಹಾಡಿ ಹೊಗಳಿದ್ದಾರೆ.

ಇಷ್ಟೇ ಅಲ್ಲದೇ ರಾಹುಲ್ ಗಾಂಧಿಯನ್ನು ಅತ್ಯಂತ ಫಿಟ್ ನಾಯಕ ಎಂದು ಕರೆಯುತ್ತಿದ್ದಾರೆ. ಇನ್ನು ಈ ಫೋಟೋವನ್ನು ರಾಹುಲ್ ಗಾಂಧಿ ಏಕಾಏಕಿ ಮೀನುಗಾರರೊಂದಿಗೆ ಈಜಾಡಲು ಸಮುದ್ರಕ್ಕೆ ಧುಮುಕಿ, ಮೇಲೆ ಬಂದಾಗ ಕ್ಲಿಕ್ಕಿಸಿದ ಫೋಟೋ ಆಗಿದೆ. 

ಕಾಂಗ್ರೆಸ್‌ನ ಮಾಜಿ ಸಚಿವ ಹಾಗೂ ಸಂಸದ ರಾಜೀವ್ ಶುಕ್ಲಾ ಈ ಫೋಟೋ ಬಗ್ಗೆ ಕಮೆಂಟ್ ನಿಡುತ್ತಾ, ಈ ಫೋಟೋವನ್ನು ಗಮನವಿಟ್ಟು ನೋಡಿ ಎಂದಿದ್ದಾರೆ.