Asianet Suvarna News Asianet Suvarna News
breaking news image

ಲೋಕಸಭಾ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸಂಸದ ರಾಹುಲ್ ಗಾಂಧಿಯವರನ್ನು (Rahul Gandhi)  ಕಾಂಗ್ರೆಸ್ ಆಯ್ಕೆ ಮಾಡಿದೆ. ಈ ಕುರಿತು ಹಂಗಾಮಿ ಸಭಾಪತಿಗಳಿಗೆ ಕಾಂಗ್ರೆಸ್ ಮಾಹಿತಿ ರವಾನಿಸಿದೆ.

Rahul Gandhi has been appointed as the LoP in the Lok Sabha mrq
Author
First Published Jun 25, 2024, 9:52 PM IST

ನವದೆಹಲಿ: ಲೋಕಸಭೆ ಸ್ಪೀಕರ್ ಆಯ್ಕೆಗೂ ಒಂದು ದಿನ ಮೊದಲೇ ಕಾಂಗ್ರೆಸ್ ತನ್ನ ನಾಯಕನ ಹೆಸರನ್ನು ಅಂತಿಮಗೊಳಿಸಿ ಘೋಷಣೆ ಮಾಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸಂಸದ ರಾಹುಲ್ ಗಾಂಧಿಯವರನ್ನು (Rahul Gandhi)  ಕಾಂಗ್ರೆಸ್ ಆಯ್ಕೆ ಮಾಡಿದೆ. ಈ ಕುರಿತು ಹಂಗಾಮಿ ಸಭಾಪತಿಗಳಿಗೆ ಕಾಂಗ್ರೆಸ್ ಮಾಹಿತಿ ರವಾನಿಸಿದೆ. ರಾಹುಲ್ ಗಾಂಧಿ ರಾಯಬರೇಲಿ ಕ್ಷೇತ್ರದ ಸಂಸದರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವ ವೇಳೆ ಸಂವಿಧಾನವನ್ನು ಸದನಕ್ಕೆ ತೋರಿಸಿದ್ದರು. ರಾಹುಲ್ ಗಾಂಧಿ ಮಾದರಿಯಲ್ಲಿಯೇ ಐಎನ್‌ಡಿಐಎ ಬ್ಲಾಕ್ ಸಂಸದರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸುವ ದೃಶ್ಯಗಳು ಕಂಡು ಬಂದವು. ರಾಯಬರೇಲಿ ಮತ್ತು ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಎರಡರಲ್ಲಿಯೂ ಗೆಲುವು ಸಾಧಿಸಿದ್ದರು.

ವಯನಾಡು ಕ್ಷೇತ್ರ ತ್ಯಜಿಸಿರುವ ರಾಹುಲ್ ಗಾಂಧಿ ರಾಯಬರೇಲಿ ಉಳಿಸಿಕೊಂಡಿದ್ದಾರೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರನ್ನು ಅಂತಿಮಗೊಳಿಸಲಾಗಿದೆ. ಕಳೆದ ಬಾರಿ ಅಧೀರ್ ರಂಜನ್ ಚೌಧರಿ ವಿರೋಧ ಪಕ್ಷದ ನಾಯಕರಾಗಿದ್ದರು. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. 

Latest Videos
Follow Us:
Download App:
  • android
  • ios