ಮತ್ತೆ ಪಿವಿ ನರಸಿಂಹರಾವ್ ಕಡೆಗಣಿಸಿದ ಕಾಂಗ್ರೆಸ್; 100ನೇ ಜಯಂತಿಗೆ ರಾಹುಲ್ ಗಾಂಧಿ ಮೌನ!
- ದಿವಗಂತ ಪಿವಿ ನರಸಿಂಹರಾವ್ ಕಡೆಗಣಿಸಿದ ಕಾಂಗ್ರೆಸ್
- ಮಾಜಿ ಪ್ರಧಾನಿ ನರಸಿಂಹರಾವ್ 100 ಜಯಂತಿಗೆ ಕಾಂಗ್ರೆಸ್ ಮೌನ
- ರಾಹುಲ್ ಗಾಂಧಿ ನಡೆಗೆ , ನಾಯಕರ ಆಕ್ರೋಶ
ನವದೆಹಲಿ(ಜೂ.28): ನೆಹರು-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಕಾಂಗ್ರೆಸ್‌ನಿಂದ ಪ್ರಧಾನಿಯಾದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿದೆ ಅನ್ನೋ ಆರೋಪ ಹಿಂದಿನಿಂದಲೂ ಇದೆ. ಇದೀಗ ಮತ್ತೆ ಈ ಮಾತು ಸಾಬೀತಾಗಿದೆ. ಕಾರಣ ಲಸಿಕೆ, ಸೇರಿದಂತೆ ಪ್ರತಿ ವಿಚಾರಕ್ಕೆ ಟ್ವಿಟರ್ ಮೂಲಕ ಅಬ್ಬರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ದಿವಗಂತ ಪಿವಿ ನರಸಿಂಹ ರಾವ್ ಅವರ 100ನೇ ಜಯಂತಿ ಇದ್ದರೂ ಒಂದೇ ಒಂದು ಟ್ವೀಟ್ ಮಾಡಿಲ್ಲ.
ನರಸಿಂಹರಾವ್ ಸ್ಮರಿಸಿದ ಮೋದಿ, ನೆನಪು ಶೇರ್ ಮಾಡಿದ ರತ್ನಪ್ರಭಾ
ರಾಹುಲ್ ಗಾಂಧಿ ನಡೆ ಕುರಿತು ಬಿಜಿಪಿ ನಾಯಕ, ಮಿನಿಸ್ಟರ್ ಆಫ್ ಸ್ಟೇರ್ ಹೋಮ್ ಆಫೈರ್ಸ್ ಜಿ ಕಿಶನ್ ರೆಡ್ಡಿ ಈ ಕುರಿತು ಟ್ವೀಟ್ ಮೂಲಕ ಕಾಂಗ್ರೆಸ್ ದ್ವಂದ ನಿಲುವನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ತುಂಬಾ ಬ್ಯುಸಿಯಾಗಿದ್ದಾರೆ.. ಹೀಗಾಗಿ ಮಾಜಿ ಪ್ರಧಾನಿ, ದಿವಗಂತ ವಿವಿ ನರಸಿಂಹರಾವ್ 100ನೇ ಜಯಂತಿಗೆ ಗೌರವ ಸೂಚಿಸಲು ಮರೆತುಹೋಗಿದ್ದಾರೆ. ಪಿವಿ ನರಸಿಂಹರಾವ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಾಯಕನಾಗಿ, ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವನ ಪರ್ಯಂತ ಕಾಂಗ್ರೆಸ್ ಪಕ್ಷದ ಅತ್ಯುತ್ತಮ ನಾಯಕಾಗಿ ಗುರುತಿಸಿಕೊಂಡಿದ್ದ ನರಸಿಂಹ ರಾವ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಇಂತಹ ಅಸ್ಪೃಶ್ಯತೆಯ ಅಸಹ್ಯಕರ ಮತ್ತು ದುರದೃಷ್ಟಕರ ಎಂದು ಜಿ ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ, ದಿಟ್ಟ ನಾಯಕತ್ವ ಹಾಗೂ ದೂರದೃಷ್ಟಿಯಿಂದ ದೇಶ ಮುನ್ನಡೆಸಿದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಮೊದಲಿನಿಂದಲೂ ಕಡೆಗಣಿಸುತ್ತಲೇ ಬಂದಿದೆ ಅನ್ನೋ ಆರೋಪ ಹೊಸದೇನಲ್ಲ. 1991ರಿಂದ 1996ರ ತನಗ ದೇಶದ ಪ್ರಧಾನಿಯಾಗಿ ಭಾರತವನ್ನು ಅಭಿವೃದ್ಧಿ ಪಥದೆಡೆಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಲು ಯತ್ನಿಸಿದ್ದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಅತ್ಯಂತ ಹೀನಾವಾಗಿ ನಡೆಸಿಕೊಂಡಿತ್ತು.
2004, ಡಿಸೆಂಬರ್ 3 ರಂದು ನರಸಿಂಹ ರಾವ್ ನಿಧನರಾದರು. ಆದರೆ ಅವರ ಪಾರ್ಥೀವ ಶರೀರವನ್ನು ದೆಹಲಿಯ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಅವರ ಅಂತ್ಯಕ್ರಿಯೆಯನ್ನು ದಿಲ್ಲಿಯಲ್ಲಿ ನಡೆಸಬೇಕು. ಬಳಿಕ ಸ್ಮಾರಕ ನಿರ್ಮಿಸಬೇಕು ಅನ್ನೋ ಬೇಡಿಕೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿತು. ಕಾಂಗ್ರೆಸ್ ಬಳಿಕ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ರಾವ್ ಸ್ಮಾರಕ ನಿರ್ಮಾಣ ಮಾಡಲಿಲ್ಲ.
ಇದೀಗ ರಾವ್ ಅವರ 100ನೇ ಜಯಂತಿಗೆ ಕನಿಷ್ಠ ಒಂದು ಟ್ವೀಟ್ ಮಾಡಲು ರಾಹುಲ್ ಗಾಂಧಿಗೆ ಪುರುಸೋತ್ತಿಲ್ಲ ಅನ್ನೋದು ಆಕ್ರೋಶಕ್ಕೆ ಕಾರಣವಾಗಿದೆ.