ಕಿಡಿ ಹೊತ್ತಿಸಿದ ರಾಹುಲ್ 'ಚೆಡ್ಡಿ' ಹೇಳಿಕೆ: RSS ಬೈದ ರಾಹುಲ್‌ಗೆ ಇದೆಲ್ಲ ಬೇಕೆ?

ಆರ್‌ಎಸ್‌ಎಸ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ| ಆರ್‌ಎಸ್‌ಎಸ್‌ನ್ನು 'ಚೆಡ್ಡಿವಾಲಾಗಳು'ಎಂದು ಜರೆದ ರಾಹುಲ್| 'ಅಸ್ಸಾಂ ರಾಜ್ಯವನ್ನು ನಾಗಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಿಂದ ಆಳುವ ಪ್ರಯತ್ನ'| ಬಿಜೆಪಿ ಹೋದಲ್ಲೆಲ್ಲಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದ ರಾಹುಲ್ ಗಾಂಧಿ| ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಆರ್‌ಎಸ್‌ಎಸ್‌|

Rahul Gandhi Derogatory Statement Over RSS Spark Row

ಗುವಹಾಟಿ(ಡಿ.28): ಆರ್‌ಎಸ್‌ಎಸ್‌ ಕುರಿತು ಕೀಳು ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.  ಗುವಹಾಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್‌ನ್ನು ಉಲ್ಲೇಖಿಸಿ 'ಚೆಡ್ಡಿವಾಲಾಗಳು..'ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಸ್ಸಾಂ ರಾಜ್ಯವನ್ನು ನಾಗಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಿಂದ ಆಳುವ ಪ್ರಯತ್ನ ನಡೆಯುತ್ತಿದ್ದು, ಅಸ್ಸಾಂನ್ನು ಸ್ಥಳೀಯರೇ ಆಳಬೇಕೆ ಹೊರತು ಆರ್‌ಎಸ್‌ಎಸ್‌ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’!

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಮೂಲಕ ಕೇಂದ್ರ ಸರ್ಕಾರ ಅಸ್ಸಾಂನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದು, ಇದರ ವಿರುದ್ಧ ರಾಜ್ಯದ ಯುವ ಜನತೆ ಪ್ರತಿಭಟನೆಗಿಳಿದಿದ್ದಾರೆ ಎಂದು ರಾಹುಲ್ ಹೇಳಿದರು.

ರಾಹುಲ್, ಪ್ರಿಯಾಂಕಾ ಜೀವಂತ ಪೆಟ್ರೋಲ್ ಬಾಂಬ್ ಇದ್ದಂಗೆ: ಅನಿಲ್ ವಿಜ್!

ಬಿಜೆಪಿ ಹೋದಲ್ಲೆಲ್ಲಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ಶಾಂತವಾಗಿದ್ದ ಅಸ್ಸಾಂನ್ನು ಅಶಾಂತಿಯ ಗೂಡನ್ನಾಗಿ ಪರಿವರ್ತಿಸಲಾಗಿದೆ ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು.

ಆದರೆ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು 'ಚೆಡ್ಡಿವಾಲಾ'ಎಂದು ಕರೆದು ರಾಹುಲ್ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಆರ್‌ಎಸ್‌ಎಸ್‌, ಇದು ಸಭ್ಯತೆ ಇರುವವರು ಮಾತನಾಡುವ ಪರಿಯಲ್ಲ ಎಂದು ಹರಿಹಾಯ್ದಿದೆ.

Latest Videos
Follow Us:
Download App:
  • android
  • ios