ಹರಿಯಾಣ(ಡಿ.25): ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜೀವಂತ ಪೆಟ್ರೋಲ್‌ ಬಾಂಬ್'ಗಳಿದ್ದಂತೆ ಎಂದು ಹರಿಯಾಣ ಸಚಿವ ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೋದಲ್ಲಿ ಬಂದಲ್ಲಿ ಬೆಂಕಿ ಹಚ್ಚುವ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೀವಂತ ಪೆಟ್ರೋಲ್ ಬಾಂಬ್'ಗಳಿದ್ದಂತೆ ಎಂದು ಅನಿಲ್ ವಿಜ್ ಹರಿಹಾಯ್ದಿದ್ದಾರೆ.

CAAಗೆ ವಿರೋಧ: ಪದಕ ಸ್ವೀಕರಿಸಿ ಸ್ಟೇಜ್ ಮೇಲೆಯೇ CAA ಪ್ರತಿ ಹರಿದ ವಿದ್ಯಾರ್ಥಿನಿ!

ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ರಾಹುಲ್ ಹಾಗೂ ಪ್ರಿಯಾಂಕಾ ಮೀರಠ್'ಗೆ ತೆರಳಿದ್ದರು.

ಆದರೆ ಪೊಲೀಸರು ಇಬ್ಬರೂ ನಾಯಕರು ಮೀರಠ್ ಪ್ರವೇಶಿಸದಂತೆ ತಡೆದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪೌರತ್ವ ಕಾಯ್ದೆಗೆ ವಿರೋಧ: SP ಮುಂದೆಯೇ ನಾಲಿಗೆ ಹರಿಬಿಟ್ಟ ಪ್ರತಿಭಟನಾಕಾರರು

ಈ ಕುರಿತು ಟ್ವಿಟ್ ಮಾಡಿ ಅಸಮಾಧಾನ ಹೊರಹಾಕಿರುವ ಅನಿಲ್ ವಿಜ್, ಈ ಇಬ್ಬರೂ ನಾಯಕರು ಹೋದಲ್ಲಿ ಬಂದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.