Asianet Suvarna News Asianet Suvarna News

ವಿವಿಐಪಿ ಏರ್‌ಕ್ರಾಫ್ಟ್ ಯಾರಿಗೆ ಸೇರಿದ್ದು? ರಾಹುಲ್ ಕೊಟ್ಟ ಯುಪಿಎ ಅಂಕಿಅಂಶ!

ಯುಪಿಎ ಸರ್ಕಾರದ ಅವಧಿಯ ಅಂಶಗಳನ್ನು ತೆರೆದಿಟ್ಟ ರಾಹುಲ್/ ವಿವಿಐಪಿ ಏರ್ ಕ್ರಾಫ್ಟ್ ವಿಚಾರ ಮಾತನಾಡಿದ ಗಾಂಧಿ/ ಯುಪಿಎ ಸರ್ಕಾರದ ಅವಧಿಯಲ್ಲೇ ಎಲ್ಲ ಕೆಲಸ ಮಾಡಲಾಗಿತ್ತು

rahul gandhi brought up-issue-of-the-vvip-aircrafts-here-are-the-facts mah
Author
Bengaluru, First Published Oct 6, 2020, 9:08 PM IST

ನವದೆಹಲಿ(ಅ. 06)  ರಾಹುಲ್ ಗಾಂಧಿ ಮತ್ತೊಂದು ವಿಚಾರ ಇಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡಿದ್ದಾರೆ. ವಿವಿಐಪಿ ಏರ್ ಕ್ರಾಫ್ಟ್  ಯುಪಿಎ ಸರ್ಕಾರದ ಅವಧಿಯಲ್ಲೇ ಆರಂಭವಾಗಿದ್ದ ಯೋಜನೆ ಎಂದಿದ್ದು ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

ಪಂಜಾಬ್ ನಲ್ಲಿ ಮಾತನಾಡಿದ ಗಾಂಧಿ,   ಖರೀದಿಯನ್ನಷ್ಟೆ ಮಾಡಿಕೊಂಡು ಬಂದ ಮೋದಿ ಸರ್ಕಾರ ಇದಕ್ಕೂ ತನ್ನ ಲೇಬಲ್ ಹಾಕಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿಗೆ ಮಾತ್ರ ಈ ವಿಮಾನಗಳು ಸೀಮಿತವಲ್ಲ. ಉಳಿದ ವಿವಿಐಪಿಗಳು ಇದನ್ನು ಬಳಕೆ ಮಾಡಬಹುದು.  ಇವು ಭಾರತದ ವಾಯು ಸೇನೆಗೆ ಸೇರಿದ್ದು ಪ್ರಧಾನಿಗೆ ಅಲ್ಲ ಎಂದಿದ್ದಾರೆ.

ಚೀನಾ ನಮ್ಮ ಮೇಲೆ ನುಗ್ಗ್ಇ ಬರುವುದಕ್ಕೆ ಕಾರಣ ಕೊಟ್ಟ ರಾಹುಲ್

ಈ ವಿಮಾನಗಳನ್ನು ಬಳಕೆ ಮಾಡುವ ಚರ್ಚೆ 2011 ರಲ್ಲಿಯೇ ಆರಂಭವಾಗಿತ್ತು.   ಸಕ್ರೆಟರಿಗಳು ಮತ್ತು ಸಂಪುಟದ ಪ್ರಮುಖ ಸಚಿವರು ಸೇರಿ ತೀರ್ಮಾನ ತೆಗೆದುಕೊಂಡಿದ್ದರು ಎಂದು ಗಾಂಧಿ ಹೇಳಿದ್ದಾರೆ.

ಅದೆ ವರ್ಷ ಕ್ಯಾಬಿನೆಟ್ ಸಕ್ರೆಟರಿಯೇಟ್ ಜತೆ ಮಾತನಾಡಿ ಯಾವೆಲ್ಲ ಸಾಧ್ಯತೆಗಳು ಇವೆ ಎಂಬ ಮಾಹಿತಿ ಕಲೆಹಾಕಲಾಗಿತ್ತು.  ಹತ್ತಕ್ಕೂ ಅಧಿಕ ಸಾರಿ ಸಭೆ ಸೇರಿದ ಮಂತ್ರಿಮಂಡಳದ ಪ್ರಮುಖ ಸಚಿವರು ಬಳಕೆ, ತಾಂತ್ರಿಕ ನಿರ್ವಹಣೆ, ಮ್ಯಾನೇಜ್ ಮೆಂಟ್ ಕುರಿತಾಗಿ ಸಮಗ್ರ ಮಾಹಿತಿ ಕಲೆಹಾಕಿ ವರದಿ ಸಲ್ಲಿಸಿತ್ತು.

ಬೋಯಿಂಗ್ 777 ಅಥವಾ ಅದಕ್ಕಿಂತಲೂ ಹೊಸ ಮಾಡೆಲ್ ವಿಮಾನ ಖರೀದಿ ಮಾಡಬಹುದು ಎಂಬುದನ್ನು ಹೇಳಲಾಗಿತ್ತು. ಸಚಿವಾಲಯವು ಆಗಸ್ಟ್, 2013 ರಲ್ಲಿ ವಿಮಾನವನ್ನು ಭಾರತೀಯ ವಾಯುಪಡೆಗೆ ವರ್ಗಾಯಿಸಲು ಶಿಫಾರಸು ಮಾಡಿತು ಎಂದು ಹಿಂದಿನ ಘಟನೆಗಳನ್ನು ತೆರೆದಿಟ್ಟಿದ್ದಾರೆ. 

Follow Us:
Download App:
  • android
  • ios