Narendra Modi ಸ್ಕಿನ್ ಹೊಳೆಯಲು ಕಾರಣ ಇದು, ವಿದ್ಯಾರ್ಥಿಗಳ ಬಳಿ ಗುಟ್ಟು ಬಿಚ್ಚಿಟ್ಟ ಪ್ರಧಾನಿ
pariksha pe charcha 2026 : ಪ್ರಧಾನಿ ನರೇಂದ್ರ ಮೋದಿ ಹೊಳೆಯುವ ಚರ್ಮಕ್ಕೆ ಕಾರಣ ಏನು? ಅವರು ಯಾವ ಆಹಾರ ಸೇವನೆ ಮಾಡ್ತಾರೆ? ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಪರೀಕ್ಷಾ ಪೆ ಚರ್ಚಾದಲ್ಲಿ ಮೋದಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಪರೀಕ್ಷಾ ಪೆ ಚರ್ಚಾ 2026
ಬೋರ್ಡ್ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮ "ಪರೀಕ್ಷಾ ಪೆ ಚರ್ಚಾ 2026" ನ ಎರಡನೇ ಕಂತು ಪ್ರಸಾರವಾಗಿದೆ. ಈ ಕಂತಿನಲ್ಲಿ, ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರಿಗೆ ಓದು, ವೃತ್ತಿ, ತಂತ್ರಜ್ಞಾನ ಮತ್ತು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಸಂವಾದದಲ್ಲಿ ವಿದ್ಯಾರ್ಥಿ ಒಬ್ಬರು, ಪ್ರಧಾನಿ ಮೋದಿಯವರ ಆಹಾರ ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅವರ ಹೊಳೆಯುವ ಚರ್ಮದ ರಹಸ್ಯವೇನು ಎಂಬುದಕ್ಕೆ ಮೋದಿ ಉತ್ತರ ನೀಡಿದ್ದಾರೆ.
Narendra Modiಹೊಳೆಯುವ ಚರ್ಮದ ರಹಸ್ಯ
75 ವರ್ಷವಾದ್ರೂ ನರೇಂದ್ರ ಮೋದಿ ಸ್ಕಿನ್ ಈಗ್ಲೂ ಹೊಳೆಯುತ್ತಿದೆ. ಅದು ಹೇಗೆ ಎನ್ನುವ ಪ್ರಶ್ನೆಗೆ ಪರೀಕ್ಷಾ ಪೆ ಚರ್ಚಾ ಸಮಯದಲ್ಲಿ ಮೋದಿ ಉತ್ತರ ನೀಡಿದ್ದಾರೆ. ನರೇಂದ್ರ ಮೋದಿ ಯಾವುದೇ ನಿರ್ದಿಷ್ಟ ಡಯಟ್ ಪದ್ಧತಿ ಫಾಲೋ ಮಾಡ್ತಿಲ್ಲ. ವಿವಿಧ ರಾಜ್ಯ, ದೇಶಕ್ಕೆ ಪ್ರಯಾಣ ಬೆಳೆಸೋದ್ರಿಂದ ಅಲ್ಲಿ ಸಿಗೋ ಆಹಾರವನ್ನೇ ಅವರು ತಿಂತಾರೆ. ಹಿಂದೆ ಅವರು ಅಡುಗೆ ತಯಾರಿಸಿ ತಿಂತಿದ್ರು. ಆ ಟೈಂನಲ್ಲಿ ಖಿಚ್ಡಿಯಂತಹ ಸಿಂಪಲ್ ಅಡುಗೆ ಮಾಡ್ತಿದ್ರು.
ಔಷಧಿಯಂತೆ ಆಹಾರ ಸೇವನೆ
ನರೇಂದ್ರ ಮೋದಿ ಆಹಾರವನ್ನು ಔಷಧಿಯಂತೆ ಭಾವಿಸಿದ್ದಾರೆ. ಆಹಾರವನ್ನು ಹೊಟ್ಟೆ ತುಂಬುವವರೆಗೆ ತಿನ್ನಬೇಕೆ ಅಥವಾ ಮನಸ್ಸಿಗೆ ತೃಪ್ತಿಯಾಗುವವರೆಗೆ ತಿನ್ನಬೇಕೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಕೆಲವು ಜನರು ಅತಿಯಾಗಿ ತಿನ್ನುತ್ತಾರೆ. ಅಷ್ಟು ಆಹಾರ ದೇಹಕ್ಕೆ ಅಗತ್ಯವಿಲ್ಲ ಎಂಬುದನ್ನು ಅವರು ಅರ್ಥ ಮಾಡ್ಕೊಳ್ಳೋದಿಲ್ಲ ಅಂತ ಮೋದಿ ಹೇಳಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಹಾಗೂ ಸರಿಯಾದ ರೀತಿಯಲ್ಲಿ ಉಸಿರಾಟ ಕ್ರಿಯೆ ದೇಹಕ್ಕೆ ಪ್ರಯೋಜನಕಾರಿ ಎಂದು ಮೋದಿ ಹೇಳಿದ್ದಾರೆ.
ಉತ್ತಮ ನಿದ್ರೆ
ಪರೀಕ್ಷಾ ಪೆ ಚರ್ಚೆಯಲ್ಲಿ ಮೋದಿ, ವಿದ್ಯಾರ್ಥಿಗಳಿಗೆ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುವಂತೆ ಸಲಹೆ ನೀಡಿದ್ದಾರೆ. ಉತ್ತಮ ನಿದ್ರೆ ಮನಸ್ಸನ್ನು ತಾಜಾವಾಗಿರಿಸುತ್ತದೆ. ಹೊಸ ಆಲೋಚನೆಗಳು ಬರಲು ಕಾರಣವಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ ನಗು, ಸಕಾರಾತ್ಮಕ ಆಲೋಚನೆ ಮತ್ತು ದೇಹಕ್ಕೆ ಸಮಯ ನೀಡೋದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಮೋದಿ ಹೇಳಿದ್ದಾರೆ.
ಬೆಳಗಿನ ಅಭ್ಯಾಸ
ನರೇಂದ್ರ ಮೋದಿ ಪ್ರಕಾರ, ಸೂರ್ಯೋದಯವನ್ನು ನೋಡುವಂತಹ ಸಣ್ಣ ಅಭ್ಯಾಸಗಳು ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸಗೊಳಿಸುತ್ತದೆಯಂತೆ. ಅಂದ್ರೆ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನ ಏಳುವ ಮಹತ್ವವನ್ನು ಮೋದಿ ಹೇಳಿದ್ದಾರೆ. ಬೆಳಿಗ್ಗೆ ಬೇಗ ಏಳೋದು ನಿತ್ಯದ ದಿನಚರಿ ಆಗ್ಬೇಕು ಎಂದು ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು ಹೇಳಿದ್ದಾರೆ.
ದೇಹ ಕೊನೆಯ ಆದ್ಯತೆ ಆಗ್ಬಾರದು
ಕೆಲ್ಸದಲ್ಲಿ ಅನೇಕರು ತಮ್ಮ ದೇಹವನ್ನು ಮರೆಯುತ್ತಾರೆ. ದೇಹಕ್ಕೆ ಕೊನೆಯ ಆದ್ಯತೆ ನೀಡುತ್ತಾರೆ. ಇದು ತಪ್ಪು. ಆರೋಗ್ಯಕರ ದೇಹವು ಮನಸ್ಸು ಮತ್ತು ಮೆದುಳನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಧ್ಯಯನದ ಜೊತೆಗೆ ತನ್ನನ್ನು ತಾನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಮೋದಿ ವಿವರಿಸಿದ್ದಾರೆ.
ಶಿಸ್ತಿನ ಜೀವನ
ಜೀವನದಲ್ಲಿ ಶಿಸ್ತು ಮತ್ತು ಪ್ರೇರಣೆ ಎರಡೂ ಅತ್ಯಗತ್ಯ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಶಿಸ್ತು ಇಲ್ಲದ ವ್ಯಕ್ತಿಗೆ ಎಷ್ಟೇ ಸ್ಫೂರ್ತಿ ಸಿಕ್ಕರೂ ಪ್ರಯೋಜನವಿಲ್ಲ. ಒಬ್ಬ ರೈತನಿಗೆ ಸ್ಫೂರ್ತಿ ಸಿಗಬಹುದು, ಆದರೆ ಶಿಸ್ತಿನ ಕೊರತೆಯಿದ್ದರೆ, ಒಬ್ಬರು ಹೆಚ್ಚು ಗಳಿಸಿದರೆ, ಇನ್ನೊಬ್ಬರು ಕಡಿಮೆ ಗಳಿಸುತ್ತಾರೆ. ಶಿಸ್ತು ಮತ್ತು ಸ್ಫೂರ್ತಿ ಸೇರಿಕೊಂಡರೆ ಎಲ್ಲವೂ ಚೆನ್ನಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

