Asianet Suvarna News Asianet Suvarna News

ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಯುರೋಪ್‌ ಪ್ರವಾಸಕ್ಕೆ ಹೊರಟ ರಾಹುಲ್

ದೇಶದಲ್ಲಿ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌, ಒಂದು ವಾರಗಳ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ.

Rahul Gandhi 1 week Europe tour begins he will interacts with MPs, students during tour akb
Author
First Published Sep 7, 2023, 8:14 AM IST

ನವದೆಹಲಿ: ದೇಶದಲ್ಲಿ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌, ಒಂದು ವಾರಗಳ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ. ಸೆ.5ರ ಮಂಗಳವಾರ ನವದೆಹಲಿಯಿಂದ ತೆರಳಿರುವ ರಾಹುಲ್‌, ತಮ್ಮ ಪ್ರವಾಸದ ಅವಧಿಯಲ್ಲಿ ಯೂರೋಪ್‌ ಸಂಸದರು, ವಿದ್ಯಾರ್ಥಿಗಳು ಮತ್ತು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಇಂದು ಬ್ರಸೆಲ್ಸ್‌ನಲ್ಲಿ ಸಂಸದರೊಂದಿಗೆ ಮಾತುಕತೆ ನಡೆಸಲಿರುವ ರಾಹುಲ್‌, ಬಳಿಕ ಅಲ್ಲಿರುವ ಭಾರತೀಯರೊಂದಿಗೆ ಸಂಜೆ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಭಾರತೀಯ ಕೈಗಾರಿಕೋದ್ಯಮಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿರುವ ಅವರು, ಮಧ್ಯಾಹ್ನ 1.30ಕ್ಕೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಳಿಕ ಸೆ.8 ರಂದು ಫ್ರಾನ್ಸ್‌ನ ಪ್ಯಾರಿಸ್‌ಗೆ ತೆರಳಲಿರುವ ರಾಹುಲ್‌ (Rahul Gandhi), ಅಲ್ಲಿ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಬಳಿಕ ಫ್ರಾನ್ಸ್‌ (France) ಸಂಸದರೊಂದಿಗೆ ಮಾತುಕತೆ ನಡೆಸಿ, ಸೈನ್ಸಸ್‌ ಪೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸೆ.10 ರಂದು ನೆದರ್ಲೆಂಡ್‌ಗೆ ತೆರಳಿ, ಅಲ್ಲಿನ ಲೈಡೆನ್‌ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಓಸ್ಲೋಗೆ ಭೇಟಿ ನೀಡಲಿದ್ದಾರೆ. ನಂತರ ಸೆ.11ಕ್ಕೆ ನಾರ್ವೆಗೆ ತೆರಳಿ ಅಲ್ಲಿಯೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ 

ರಾಹುಲ್‌ಗಾಂಧಿ ಯಾತ್ರೆಗೆ 1 ವರ್ಷ ಹಿನ್ನೆಲೆ; ಇಂದು ಕಾಂಗ್ರೆಸ್‌ ಮತ್ತೆ ಪಾದಯಾತ್ರೆ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನಡೆಸಿದ ‘ಭಾರತ್‌ ಜೋಡೋ’ ಯಾತ್ರೆ ಆರಂಭವಾಗಿ ಸೆ.7ಕ್ಕೆ ಅಂದರೆ ಇಂದಿಗೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC President DK Shivakumar) ಅವರು, ಭಾರತ್‌ ಜೋಡೋ ಯಾತ್ರೆ(Bharat jodo yatre) ಆರಂಭವಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದು ಗಂಟೆ ಪಾದಯಾತ್ರೆ ಮಾಡಲು ಯೋಜಿಸಲಾಗಿದೆ. ಸೆ.7ರ ಸಂಜೆ 5ರಿಂದ 6 ಗಂಟೆಯವರೆಗೆ ಪಾದಯಾತ್ರೆ ಮಾಡಲಾಗುವುದು. ಆಯಾ ಜಿಲ್ಲೆಯ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಮುಖಂಡರು ಪಾದಯಾತ್ರೆಯ ಮಾರ್ಗ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
 

ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಭರವಸೆ ನೀಡಲ್ಲ: ರಾಹುಲ್ ಗಾಂಧಿ

Follow Us:
Download App:
  • android
  • ios