ಭಾರತ ಮತ್ತು ಫ್ರಾನ್ಸ್ ₹63,000 ಕೋಟಿ ಮೊತ್ತದ 26 ರಫೇಲ್ ಎಂ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ರಫೇಲ್ ಎಂ ನೌಕಾದಳದ ಆವೃತ್ತಿಯಾಗಿದ್ದು, ಸಮುದ್ರ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮೈಕಾ, ಮ್ಯಾಜಿಕ್, ಸೈಡ್‌ವೈಂಡರ್, ASRAAM, AMRAAM ನಂತಹ ಕ್ಷಿಪಣಿಗಳನ್ನು ಹೊತ್ತೊಯ್ಯುತ್ತದೆ.
ನವದೆಹಲಿ: ಭಾರತ ಮತ್ತು ಫ್ರಾನ್ಸ್ ಇಂದು 26 ರಫೇಲ್ ಎಂ ವಿಮಾನಗಳಿಗೆ ₹63,000 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ಭಾರತೀಯ ನೌಕಾದಳದ ಶಕ್ತಿ ಹೆಚ್ಚಲಿದೆ. ಎರಡು ಎಂಜಿನ್ ಮತ್ತು ಒಂದು ಸೀಟಿನ ರಫೇಲ್ ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್. ಇದು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದೂರದವರೆಗೆ ಹೊಡೆಯುವ ಕ್ಷಿಪಣಿಗಳನ್ನು ಹೊಂದಿದೆ.
ರಫೇಲ್ ವಿಮಾನವನ್ನು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿ ತಯಾರಿಸುತ್ತದೆ. ಇದರ ಎರಡು ಪ್ರಮುಖ ಆವೃತ್ತಿಗಳಿವೆ, ರಫೇಲ್ ಮತ್ತು ರಫೇಲ್ ಎಂ. ರಫೇಲ್ ಎಂ ನೌಕಾದಳದ ಆವೃತ್ತಿ. ಇದನ್ನು ವಿಶೇಷವಾಗಿ ಸಮುದ್ರ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಾಮಾನ್ಯ ರಫೇಲ್‌ಗಿಂತ ಭಾರವಾಗಿದೆ. ಇದರಲ್ಲಿ ಬಲಿಷ್ಠ ಲ್ಯಾಂಡಿಂಗ್ ಗೇರ್, ಟೈಲ್‌ಹೂಕ್ ಮತ್ತು ಮಡಿಸಬಹುದಾದ ರೆಕ್ಕೆಗಳಂತಹ ವೈಶಿಷ್ಟ್ಯಗಳಿವೆ.
ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!
ಈ ಶಸ್ತ್ರಾಸ್ತ್ರಗಳನ್ನು ಹೊಂದಿದೆ ರಫೇಲ್ ಫೈಟರ್ ಜೆಟ್
ರಫೇಲ್ ಎಂನಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಲು 13 ಹಾರ್ಡ್‌ಪಾಯಿಂಟ್‌ಗಳಿವೆ. ಈ ವಿಮಾನವು ಮೈಕಾ, ಮ್ಯಾಜಿಕ್, ಸೈಡ್‌ವೈಂಡರ್, ASRAAM ಮತ್ತು AMRAAM ನಂತಹ ಗಾಳಿಯಿಂದ ಗಾಳಿಗೆ ಹೊಡೆಯುವ ಕ್ಷಿಪಣಿಗಳನ್ನು ಹೊತ್ತೊಯ್ಯುತ್ತದೆ. ನೆಲದ ಮೇಲೆ ದಾಳಿ ಮಾಡಬೇಕಾದರೆ ಇದು ಅಪಾಚೆ, AS30L, ALARM, HARM, ಮ್ಯಾವರಿಕ್ PGM100 ಕ್ಷಿಪಣಿಗಳನ್ನು ಹೊಂದಿದೆ. ಸಮುದ್ರದಲ್ಲಿರುವ ಯುದ್ಧನೌಕೆಯನ್ನು ನಾಶಮಾಡಲು ಇದು ಎಕ್ಸೋಸೆಟ್/AM39, ಪೆಂಗ್ವಿನ್ 3 ಮತ್ತು ಹಾರ್ಪೂನ್ ಕ್ಷಿಪಣಿಗಳನ್ನು ಬಳಸುತ್ತದೆ.
ರಫೇಲ್‌ನಿಂದ ಪರಮಾಣು ಬಾಂಬ್‌ಗಳನ್ನು ಕೂಡ ಹಾಕಬಹುದು. ಇದು ASMP ಸ್ಟ್ಯಾಂಡ್-ಆಫ್ ಪರಮಾಣು ಕ್ಷಿಪಣಿಯನ್ನು ಹಾರಿಸಬಲ್ಲದು. ರಫೇಲ್ ಅನ್ನು MBDA ಸ್ಟಾರ್ಮ್ ಶ್ಯಾಡೋ ಅಥವಾ ಸ್ಕ್ಯಾಲ್ಪ್ EG ಸ್ಟ್ಯಾಂಡ್-ಆಫ್ ಕ್ರೂಸ್ ಕ್ಷಿಪಣಿಗಳಿಂದ ಸಜ್ಜುಗೊಳಿಸಬಹುದು. ಇದರ ವ್ಯಾಪ್ತಿ 550 ಕಿ.ಮೀ. ಗಾಳಿಯಲ್ಲಿ ದೂರದವರೆಗೆ ಹೊಡೆಯಲು ರಫೇಲ್ MBDA ಮೀಟಿಯರ್ BVRAAM ಕ್ಷಿಪಣಿಯನ್ನು ಹೊಂದಿದೆ. ಇದರ ವ್ಯಾಪ್ತಿ 100 ಕಿ.ಮೀ ಗಿಂತ ಹೆಚ್ಚು. ಇದರೊಂದಿಗೆ ರಫೇಲ್ ಹಲವು ಬಗೆಯ ಬಾಂಬ್‌ಗಳನ್ನು ಕೂಡ ಹಾಕಬಲ್ಲದು. ಇದರಲ್ಲಿ 30mm DEFA 791B ಫಿರಂಗಿ ಇದೆ. ಇದರಿಂದ ನಿಮಿಷಕ್ಕೆ 2,500 ಸುತ್ತುಗಳ ಗುಂಡು ಹಾರಿಸಬಹುದು.
3 ದಿನದಲ್ಲಿ 6 ಉಗ್ರರ ಮನೆ ಪುಡಿ: ಬೆಂಬಲಿಗರಿಗೂ ಶಾಕ್: ಮನೆ ಮನೆ ಹುಡುಕಾಟ ತೀವ್ರ
200 ಕಿ.ಮೀ ಗಿಂತ ದೂರದಲ್ಲಿ ಶತ್ರುವನ್ನು ಪತ್ತೆ ಮಾಡುತ್ತದೆ ರಫೇಲ್‌ನ ರಾಡಾರ್
ರಫೇಲ್‌ನಲ್ಲಿ ಥೇಲ್ಸ್‌ನ ಸ್ಪೆಕ್ಟ್ರಾ ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆ ಇದೆ. ಸ್ಪೆಕ್ಟ್ರಾದಲ್ಲಿ ಸಾಲಿಡ್ ಸ್ಟೇಟ್ ಟ್ರಾನ್ಸ್‌ಮಿಟರ್ ತಂತ್ರಜ್ಞಾನ, DAL ಲೇಸರ್ ಎಚ್ಚರಿಕೆ ರಿಸೀವರ್, ಕ್ಷಿಪಣಿ ಎಚ್ಚರಿಕೆ, ಪತ್ತೆ ವ್ಯವಸ್ಥೆ ಮತ್ತು ಜಾಮರ್ ಸೇರಿವೆ. ರಫೇಲ್‌ನಲ್ಲಿ RBE2 ಪ್ಯಾಸಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ರಾಡಾರ್ ಇದೆ. ಇದು 200 ಕಿ.ಮೀ ಗಿಂತ ಹೆಚ್ಚು ದೂರದಿಂದ ಶತ್ರುವನ್ನು ಪತ್ತೆ ಮಾಡುತ್ತದೆ. ಒಮ್ಮೆಗೆ 8 ಗುರಿಗಳನ್ನು ಪತ್ತೆ ಮಾಡಬಲ್ಲದು.
2222 ಕಿ.ಮೀ./ಗಂ. ರಫೇಲ್‌ನ ಗರಿಷ್ಠ ವೇಗ
ರಫೇಲ್‌ನ ಗರಿಷ್ಠ ವೇಗ 2222 ಕಿ.ಮೀ./ಗಂ. ಇದರಲ್ಲಿ ಎರಡು ಎಂಜಿನ್‌ಗಳಿವೆ. ರಫೇಲ್ 50,000 ಅಡಿ ಎತ್ತರಕ್ಕೆ ಹಾರಬಲ್ಲದು. ಇದು 9500 ಕೆ.ಜಿ. ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತು ಹಾರಬಲ್ಲದು.
ನೆರೆಯ ಪಾಕಿಸ್ತಾನ ಎದೆಯಲ್ಲಿ ನಡುಕ:
ಸದ್ಯ ಪೆಹಲ್ಗಾಮ್ ದುರಂತದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ಘಿಗ್ನ ವಾತಾವರಣ ಮನೆ ಮಾಡಿದೆ. ಈಗಾಗಲೇ ಭಾರತದ ಬಳಿ 36 ರಾಫೆಲ್ ಯುದ್ದ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಹೊಸದಾಗಿ ಅತ್ಯಾಧುನಿಕ ರಫೇಲ್ ಎಂ ಯುದ್ದ ವಿಮಾನಗಳು ಭಾರತದ ತೆಕ್ಕೆಗೆ ಸೇರಿಕೊಂಡರೆ, ಭಾರತದ ಬಳಿ ಒಟ್ಟು 62 ರಫೇಲ್ ಯುದ್ದ ವಿಮಾನಗಳು ಹೊಂದಿದಂತಾಗುತ್ತದೆ. ಪದೇ ಪದೇ ಭಾರತದ ಮೇಲೆ ಕಾಲು ಕೆರೆದುಕೊಂಡು ತಂಟೆ ಮಾಡುವ ಪಾಕಿಸ್ತಾನಕ್ಕೆ ಭಾರತದ ಈ ಒಪ್ಪಂದ ಎದೆಯಲ್ಲಿ ನಡುಕ ಹುಟ್ಟಿಸಿದರೂ ಅಚ್ಚರಿಯೇನಿಲ್ಲ.
