Asianet Suvarna News Asianet Suvarna News

ಮದುವೆಗೂ ಮುನ್ನವೇ ಎಲ್ಲರ ಮನಸ್ಸು ಗೆದ್ದ ಅಂಬಾನಿ ಸೊಸೆ ರಾಧಿಕಾ

ಇದೀಗ ವೈರಲ್ ಆದ ವಿಡಿಯೋದಲ್ಲಿ ರಾಧಿಕಾ ಮರ್ಚೆಂಟ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಅಂತೀರಾ? 

radhika merchant touch feet guest in mameru ceremony  mrq
Author
First Published Jul 4, 2024, 12:15 PM IST

ಮುಂಬೈ: ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಮುಂಬೈ ಸಿದ್ಧಗೊಳ್ಳುತ್ತಿದೆ. ಜೂನ್ 12ರಂದು ಅನಂತ್ ಹಾಗೂ ರಾಧಿಕಾ ಮದುವೆ ನಡೆಯಲಿದ್ದು, ದೇಶ-ವಿದೇಶದ ಗಣ್ಯರ ಆಗಮನ ಆಗುತ್ತಿದೆ. ಮದುವೆ ಮುನ್ನದ ಕಾರ್ಯಕ್ರಮಗಳು ಅಂಬಾನಿ ನಿವಾಸದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು,  ಪ್ರತಿದಿನ ಕುಟುಂಬಸ್ಥರು ಬಣ್ಣ ಬಣ್ಣದ ಡಿಸೈನರ್‌ ಡ್ರೆಸ್‌ಗಳನ್ನು ಧರಿಸಿ ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ರಾಧಿಕಾ ಮರ್ಚೆಂಟ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಅಂತೀರಾ? 

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಂಬಾನಿ ನಿವಾಸಿ ಸಂಬಂಧಿಗಳು, ಆಪ್ತರು ಆಗಮಿಸುತ್ತಿದ್ದರು. ಮುಕೇಶ್ ಅಂಬಾನಿ ಪತ್ನಿ ನೀತಾ ಎಲ್ಲಾ ಅತಿಥಿಗಳಿಗೂ ಕಿರಿ ಸೊಸೆಯನ್ನು ಪರಿಚಯ ಮಾಡಿಸುತ್ತಿದ್ದರು. ನೀತಾ ಅಂಬಾನಿ ಪರಿಚಯ ಮಾಡಿಸುತ್ತಿರುವಾಗ ಹಿರಿಯರ ಕಾಲು ಮುಟ್ಟಿ ರಾಧಿಕಾ ನಮಸ್ಕಾರ ಮಾಡಿ, ಕುಶಲೋಪಚರಿ ವಿಚಾರಿಸುತ್ತಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ರಾಧಿಕಾ ಮರ್ಚೆಂಟ್ ಸರಳತೆಗೆ ಫಿದಾ ಆಗಿದ್ದಾರೆ. ಈ ವಿಡಿಯೋಗೆ 58 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. 

ನೀತಾ ಅಂಬಾನಿ ಸೇರಿದಂತೆ ಕುಟುಂಬದ ಎಲ್ಲಾ ಮಹಿಳಾ ಸದಸ್ಯರು ಗುಜರಾತಿ ಶೈಲಿಯ ಡಿಸೈನರ್‌ ಬಟ್ಟೆಯನ್ನು ಧರಿಸಿದ್ದರು. ಬುಧವಾರ ನಡೆದ ಸಮಾರಂಭದಲ್ಲಿ ಅಂಬಾನಿ ಹಾಗೂ ಮರ್ಚೆಂಟ್ ಕುಟುಂಬದ ಸಂಬಂಧಿಕರು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಇವರೆಲ್ಲರ ಜೊತೆಯಲ್ಲಿ ಬಾಲಿವುಡ್ ತಾರೆಯರಾದ ಮಾನುಷಿ ಚಿಲ್ಲರ್, ಶಿಖರ್ಮ ಪಹರಿಯಾ, ಜಾಹ್ನವಿ ಕಪೂರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ನೀತಾ ಅಂಬಾನಿ ಸೀರೆ ಶಾಪಿಂಗ್ ನೋಡಿ ಹಿರಿ ಹಿರಿ ಹಿಗ್ಗಿದ ಮಹಿಳೆಯರು! ಕಾರಣ ಕೇಳಿದ್ರೆ ನೀವೂ ಯೆಸ್ ಅಂತೀರಿ!

ಕೆಲವು ದಿನಗಳ ಹಿಂದೆ ಮುಕೇಶ್ ಅಂಬಾನಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಮದುವೆಗೆ ಆಮಂತ್ರಣ ನೀಡಿದ್ದರು. ಈ ವೇಳೆ ಸಿಎಂ ಹೆಗಲ ಮೇಲೆ ಕೈ ಹಾಕಿ ಅನಂತ್ ಅಂಬಾನಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಸಿಎಂ ಹೆಗಲಮೇಲೆ ಕೈ ಹಾಕಿದ್ದ ಫೋಟೋ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೂ ಮುನ್ನ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್‌  ಅವರನ್ನು ಮದುವೆಗೆ ಆಹ್ವಾನಿಸಲಾಗಿತ್ತು. ಮೊದಲ ಆಮಂತ್ರಣ ಪತ್ರಿಕೆಯನ್ನು ಅಂಬಾನಿ ಕುಟುಂಬ ಕಾಶಿ ವಿಶ್ವನಾಥನಿಗೆ ಸಲ್ಲಿಕೆ ಮಾಡಿದೆ.

ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೊಸೆ ರಾಧಿಕಾಗಾಗಿ ನೀತಾ ಅಂಬಾನಿ ಸೀರೆ ಖರೀದಿಸಿದ್ದರು. ಸೀರೆ ಖರೀದಿ ಬಳಿಕ ಅಲ್ಲಿಯ ಚಾಟ್ ಸವಿದು ರೆಸಿಪಿಯನ್ನು ತಿಳಿದುಕೊಂಡಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಕನ್ವೆಕ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. 

ಅಕ್ಕ ಪಕ್ಕ ಕುಳಿತು 31 ರೂಪಾಯಿ ಒಆರ್‌ಎಸ್ ಕುಡಿದ ಕೋಟ್ಯಾಧಿಪತಿಗಳಾದ ಅಂಬಾನಿ-ಶಾರುಖ್!

Latest Videos
Follow Us:
Download App:
  • android
  • ios