ನೀತಾ ಅಂಬಾನಿ ಸೀರೆ ಶಾಪಿಂಗ್ ನೋಡಿ ಹಿರಿ ಹಿರಿ ಹಿಗ್ಗಿದ ಮಹಿಳೆಯರು! ಕಾರಣ ಕೇಳಿದ್ರೆ ನೀವೂ ಯೆಸ್ ಅಂತೀರಿ!
ವಾರಣಾಸಿಯ ಬಟ್ಟೆ ಮಳಿಗೆಗೆ ತೆರಳಿದ್ದ ನೀತಾ ಅಂಬಾನಿ ಸೀರೆ ಖರೀದಿ ಮಾಡಿದ್ದರು. ನೀತಾ ಅಂಬಾನಿ ಸಹ ನಮ್ಮ ರೀತಿಯೇ ಶಾಪಿಂಗ್ ಮಾಡುತ್ತಾರೆ ಎಂದು ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಮುಂಬೈ: ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ, ರಿಲಯನ್ಸ್ ಇಂಡಸ್ಟ್ರಿ ಫೌಂಡೇಶನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಪಿಂಗ್ ಮಾಡಿದ್ದರು. ಸೊಸೆಯಾಗಿ ವಾರಣಾಸಿಯಿಂದ ನೀತಾ ಅಂಬಾನಿ ಸೀರೆ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರವಷ್ಟೇ ಕಿರಿಯ ಪುತ್ರ ಅನಂತ್ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಕಾಶಿ ವಿಶ್ವನಾಥನಿಗೆ ಸಲ್ಲಿಕೆ ಮಾಡಲು ನೀತಾ ಅಂಬಾನಿ ಇಲ್ಲಿದೆ ಆಗಮಿಸಿದ್ದರು. ಬೋಲೇನಾಥನಿಗೆ ಆಮಂತ್ರಣ ಸಲ್ಲಿಕೆ ಮಾಡಿದ ಬಳಿಕ ವಾರಣಾಸಿಯಲ್ಲಿ ಚಾಟ್ ಸವಿದು, ಅದನ್ನು ಹೇಗೆ ಸಿದ್ಧಪಡಿಸಲಾಗುತ್ತೆ ಎಂಬುದರ ಬಗ್ಗೆಯೂ ಅಡುಗೆಭಟ್ಟರಿಂದ ಮಾಹಿತಿ ಪಡೆದುಕೊಂಡಿದ್ದರು. ಇದೇ ರೀತಿ ಮುಂಬೈ ನಿವಾಸದಲ್ಲಿಯೂ ಚಾಟ್ ತಯಾರಿಸಲಾಗುತ್ತೆ ಎಂದು ಹೇಳಿದ್ದರು. ಆ ಬಳಿಕ ವಾರಣಾಸಿಯ ಬಟ್ಟೆ ಮಳಿಗೆಗೆ ತೆರಳಿದ್ದ ನೀತಾ ಅಂಬಾನಿ ಸೀರೆ ಖರೀದಿ ಮಾಡಿದ್ದರು. ಸೀರೆ ಖರೀದಿ ಮಾಡುವ ಹಾಗೂ ಬಟ್ಟೆ ಮಳಿಗೆಯ ಸಿಬ್ಬಂದಿಯ ಜೊತೆಗಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು.
ಈ ವಿಡಿಯೋ ನೋಡಿದ ಸಾಮಾನ್ಯ / ಮಧ್ಯಮ ವರ್ಗದ ಮಹಿಳೆಯರು ಹಿರಿ ಹಿರಿ ಹಿಗ್ಗಿದ್ದಾರೆ. ನೀತಾ ಅಂಬಾನಿ ಸಹ ನಮ್ಮ ರೀತಿಯೇ ಶಾಪಿಂಗ್ ಮಾಡುತ್ತಾರೆ ಎಂದು ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಶಾಪಿಂಗ್‌ಗೆ ಹೋದ ಸಂದರ್ಭದಲ್ಲಿ ಸಾಮಾನ್ಯವಾಗಿ ಮಹಿಳೆಯರು, ಇದೇ ಡಿಸೈನ್‌ನಲ್ಲಿ ಬೇರೆ ಬಣ್ಣ ತೋರಿಸಿ, ಇದೇ ಬಣ್ಣದಲ್ಲಿ ಬೇರೆ ಡಿಸೈನ್ ತೋರಿಸಿ ಎಂದು ಕೇಳೋದು ಸಹಜ. ಅದರಲ್ಲಿಯೂ ಸೀರೆ ಖರೀದಿ ಸಂದರ್ಭದಲ್ಲಿ ಮೇಲಿನ ಎರಡು ಮಾತುಗಳು ಸಾಮಾನ್ಯವಾಗಿರುತ್ತವೆ.
ಅಕ್ಕ ಪಕ್ಕ ಕುಳಿತು 31 ರೂಪಾಯಿ ಒಆರ್‌ಎಸ್ ಕುಡಿದ ಕೋಟ್ಯಾಧಿಪತಿಗಳಾದ ಅಂಬಾನಿ-ಶಾರುಖ್!
ಮಹಿಳೆಯರು ಖುಷಿ ಆಗ್ತಿರೋದ್ಯಾಕೆ?
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೀರೆ ಖರೀದಿ ವೇಳೆ ನೀತಾ ಅಂಬಾನಿ ಇದೇ ಡಿಸೈನ್‌ನಲ್ಲಿ ಬೇರೆ ಬಣ್ಣದ ಸೀರೆ ತೋರಿಸುವಂತೆ ಕೇಳುತ್ತಾರೆ. ನಂತರ ಈ ಸೀರೆಯಲ್ಲಿ ಪಕ್ಷಿಗಳ ಡಿಸೈನ್ ಇಲ್ಲದ ಬೇರೆ ಸೀರೆ ತೋರಿಸಿ ಎಂದು ಅಂಗಡಿ ಸಿಬ್ಬಂದಿಗೆ ಕೇಳುತ್ತಾರೆ. ಈ ಸಂಭಾಷಣೆಯನ್ನು ಗಮನಿಸಿರುವ ನೆಟ್ಟಿಗರು ನೀತಾ ಅಂಬಾನಿ ಎಷ್ಟೇ ಶ್ರೀಮಂತರಾದ್ರೂ, ಸಾಮಾನ್ಯ ಮಹಿಳೆಯರಂತೆ ಆ ಎರಡೂ ಪ್ರಶ್ನೆ ಕೇಳಿದ್ದಾರೆ ನೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಗಿ ವೈರಲ್ ಆಗುತ್ತಿದ್ದು, ತರೇಹವಾರಿ ಕಮೆಂಟ್ ಬರುತ್ತಿವೆ.
ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ನೀತಾ ಅಂಬಾನಿ, 10 ವರ್ಷಗಳ ನಂತರ ಕಾಶಿಗೆ ಬಂದಿದ್ದೇನೆ. ಹಿಂದೂ ಸಂಪ್ರದಾಯದಂತೆ ಕಾಶಿ ವಿಶ್ವನಾಥನಿಗೆ ಆಮಂತ್ರಣ ಸಲ್ಲಿಕೆ ಮಾಡಿದ್ದೇವೆ. ಇಲ್ಲಿಯ ಕರಕುಶಲ ಮಹಿಳೆಯರ ಜೊತೆ ನಮಗೆ ಅವಿನಾಭವ ಸಂಬಂಧವಿದೆ. ಕಾಶಿ ಕ್ಷೇತ್ರಕ್ಕೆ ಬಂದಿರೋದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದರು.
ಅಂಬಾನಿ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್ ಗಳಿಗೆ ಆಮಂತ್ರಣವಿಲ್ಲ ಏಕೆ!?
ಕಾಶಿ ವಿಶ್ವನಾಥನಿಗೆ ಮೊದಲ ಆಮಂತ್ರಣ ಪತ್ರಿಕೆ
ಅಂಬಾನಿ ಕುಟುಂಬ ಮೊದಲ ಆಮಂತ್ರಣ ಪತ್ರಿಕೆಯನ್ನು ಕಾಶಿ ವಿಶ್ವನಾಥನಿಗೆ ಸಲ್ಲಿಕೆ ಮಾಡಿದ್ದಾರೆ. ಮುಖೇಶ್ ಅಂಬಾನಿ ಪತ್ನಿ, ರಿಲಯನ್ಸ್ ಇಂಡಸ್ಟ್ರಿ ಫೌಂಡೇಶನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಕಾಶಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಕನ್ವೆಕ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.