ವಯನಾಡಿನ ಕಲ್ಲು ಮಣ್ಣು ಅವಶೇಷಗಳಡಿ ಉಸಿರಾಡುತ್ತಿದೆ ಜೀವ, ರೇಡಾರ್‌ನಲ್ಲಿ ನಾಡಿಮಿಡಿತ ಪತ್ತೆ!

ವಯನಾಡು ದುರಂತ ಸ್ಥಳದಲ್ಲಿ ಸೇನೆ ಸೇರಿದಂತೆ ರಕ್ಷಣಾ ತಂಡಗಳು ಸತತ ಕಾರ್ಯಾಚರಣೆ ನಡೆಸುತ್ತಿದೆ. ಕಲ್ಲು ಮಣ್ಣು,ಕೆಸರಿಡಿಯಲ್ಲಿರುವ ಮನೆ ಅವಶೇಷಗಳಲ್ಲಿ ಜನ ಸಿಲುಕಿಕೊಂಡಿರುವ ಸಿಗ್ನಲ್ ಪತ್ತೆಯಾಗಿದೆ. ಸೇನಾ ರೇಡಾರ್‌ನಲ್ಲಿ ಹಲವು ಅವಶೇಷಗಳಡಿಯಲ್ಲಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. 
 

Radar received pulse signal from underground debris during Wayanad Landslide Rescue operation ckm

ವಯನಾಡ್(ಆ.02) ಹಚ್ಚ ಹಸಿರು, ನೀರು, ಜಲಪಾತ, ಬೆಟ್ಟ ಗುಡ್ಡಗಳಿಂದ ಕಂಗೊಳಿಸುತ್ತಿದ್ದ ವಯನಾಡು ಭೂಕುಸಿತ ಹಾಗೂ ಪ್ರವಾಹದಿಂದ ಸ್ಮಶಾನದಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಸಮರೋಪಾದಿಯಲ್ಲಿ ರಕ್ಷಣಾಕಾರ್ಯಗಳು ನಡೆಯುತ್ತಿದೆ. ಇದೀಗ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಲಾಗಿದೆ. ಕಾರಣ ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್‌ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ದುರಂತ ಸ್ಥಳದ ಹಲವು ಭಾಗದಲ್ಲಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ಹೀಗಾಗಿ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಹಾಗೂ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ತ್ವರಿತಗೊಳಿಸಿದೆ. ಇದೀಗ ಸಿಗ್ನಲ್ ಪತ್ತೆಯಾದ ಕಡೆಯಲ್ಲಿ ಶೋಧಕಾರ್ಯ ಆರಂಭಿಸಲಾಗಿದೆ.

ವಯನಾಡಿನ ಮುಂಡಕ್ಕೈನಲ್ಲಿ ರೇಡಾರ್ ತಪಾಸಣೆ ಆರಂಭಿಸಲಾಗಿದೆ. ಮನೆಗಳು, ಕಟ್ಟಡಗಳು ಇದ್ದ ಜಾಗದಲ್ಲಿ ಇದೀಗ ಕಲ್ಲು ಮಣ್ಣು ಕೆಸರು ತುಂಬಿಕೊಂಡಿದೆ. ಈ ಭಾಗದಲ್ಲಿ ರೆಡಾರ್ ಮೂಲಕ ಜನ ಸಿಲುಕಿದ್ದಾರೋ ಅನ್ನೋದನ್ನು ಪತ್ತೆಹಚ್ಚಲಾಗುತ್ತಿದೆ. ಈ ವೇಳೆ ಕೆಲ ಮನೆಗಳ ಅವಶೇಷಗಳಡಿಯಲ್ಲಿ ಜನ ಉಸಿರಾಡುತ್ತಿರುವ ಸಿಗ್ನಲ್ ಪತ್ತೆಯಾಗಿದೆ. ಸಿಗ್ನಲ್ ಪತ್ತೆಯಾದ ಸ್ಥಳಗಳನ್ನು ಗುರಿತಿಸಲಾಗಿದೆ. ಈ ಸ್ಥಳಗಳಲ್ಲಿ ಇದೀಗ ಎನ್‌ಡಿಆರ್‌ಎಫ್ ತಂಡ ಮಣ್ಣು, ಕಲ್ಲುಗಳನ್ನು ಸರಿಸಿ, ಮನೆ ಅವಶೇಷಗಳನ್ನು ಕೊರೆಯುವ ಪ್ರಯತ್ನ ಮಾಡಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಎಚ್ಚರಿಕೆ: ದುರಂತ ಬೆನ್ನಲ್ಲೇ ಲಾ ನಿನಾ ಮಾರುತ!

ಕೆಲ ಮನೆಗಳ ಭಾಗದಲ್ಲಿ ಈಗಲೂ ಉಸಿರಾಡುತ್ತಿರುವ ಸಿಗ್ನಲ್ ಪತ್ತೆಯಾಗಿದೆ. ಹೀಗಾಗಿ ಮನೆಗಳ ಅಡಿಯಲ್ಲಿ ಹಲವರು ಸಿಲುಕಿದ್ದಾರೆ. ಭೂಕುಸಿತದಲ್ಲಿ ಅವಶೇಷ, ಕಲ್ಲು ಬಂಡೆಗಳಲ್ಲಿ ಹಲವರು ಸಿಲುಕಿದ್ದಾರೆ. ರೇಡಾರ್‌ನಲ್ಲಿ ಪಲ್ಸ್ ಪತ್ತೆಯಾಗಿದೆ. ನಾಡಿ ಮಿಡಿತದ ಸಿಗ್ನಲ್ ಸಿಕ್ಕಿದೆ. ಸಿಗ್ನಲ್ ಪತ್ತೆಯಾಗಿರುವ ಅಡಿಯಲ್ಲಿ ಜೀವಗಳಿರುವ ಸೂಚನೆ ಸ್ಪಷ್ಟವಾಗಿದೆ. ಹೀಗಾಗಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ಧಭಾಗ ನಶಿಸಿರುವ ಮನೆ, ಕಟ್ಟಡದ ಭಾಗದಲ್ಲಿನ ತಪಾಸಣೆ ವೇಳೆ ಹೆಚ್ಚಿನ ನಾಡಿ ಮಿಡಿತಗಳು ಪತ್ತೆಯಾಗಿದೆ ಎಂದು ವಯನಾಡು ಉಪಜಿಲ್ಲಾಧಿಕಾರಿ ಹೇಳಿದ್ದಾರೆ. ಇದೀಗ ಈ ಭಾಗಕ್ಕೆ ಆಗಮಿಸಿರುವ ಜನರನ್ನು ಸುರಕ್ಷತಾ ಕಾರಣಗಳಿಗಾಗಿ ದೂರ ಸರಿಸಲಾಗಿದೆ. ಇದೇ ವೇಳೆ ಪಕ್ಕದ ಬೆಟ್ಟಗಳಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಪ್ರಾಣ ಉಳಿಸಿಕೊಳ್ಳಲು ಬೆಟ್ಟ ಹತ್ತಿರುವ ಸಾಧ್ಯತೆ ಇರುವ ಕಾರಣ ಕಾಡುಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ.

ವಯನಾಡ್ ದುರಂತಕ್ಕೆ ಮಿಡಿದ ರಶ್ಮಿಕಾ ಮಂದಣ್ಣ, ಪರಿಹಾರ ನಿಧಿಗೆ 10 ಲಕ್ಷ ರೂ ದೇಣಿಗೆ!

ವಯನಾಡು ಭೂಕುಸಿತ ದುರಂತದಲ್ಲಿ ಮಡಿದವರ ಸಂಖ್ಯೆ 200 ದಾಟಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ರಕ್ಷಣಾ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಟ್ಟು ಬಿಡದೆ ಮಳೆ ಕೂಡ ಸುರಿಯುತ್ತಿದೆ. ಒಂದೆಡೆ ಆಪ್ತರನ್ನು ಕಳೆದುಕೊಂಡವರ ಆಕ್ರಂದನ ಮುಗಲು ಮುಟ್ಟಿದೆ. ಕಣ್ಣೆದೆರೆದು ಕುಟುಂಬಸ್ಥರು ಕೊಚ್ಚಿಕೊಂಡು ಹೋದ ಬೀಕರತೆಯನ್ನೂ ಅರಗಿಸಿಕೊಳ್ಳಲಾಗದೆ ಹಲವರು ಅಸ್ವಸ್ಥಗೊಂಡಿದ್ದಾರೆ.

Latest Videos
Follow Us:
Download App:
  • android
  • ios