ಇಂದು ಕ್ವಾಡ್ ನಾಯಕರ ವರ್ಚುವಲ್ ಸಭೆಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ನಾಯಕರ ಭಾಗಿಇಂಡೋ-ಪೆಸಿಪಿಕ್ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ

ನವದೆಹಲಿ (ಮಾ. 3): ಪ್ರಸಿದ್ಧವಾಗಿ ಕ್ವಾಡ್ (Quad) ಎಂದು ಕರೆಸಿಕೊಳ್ಳುವ ಭಾರತ, ಆಸ್ಟ್ರೇಲಿಯಾ, ಜಪಾನ್ ಹಾಗೂ ಅಮೆರಿಕವನ್ನು ಒಳಗೊಂಡ ಕ್ವಾಡ್ರಲ್ಟೇರಿಯಲ್ ಸೆಕ್ಯುರಿಟಿ ಡೈಲಾಗ್ (Quadrilateral Security Dialogue) ಉಕ್ರೇನ್ (Ukraine) ಹಾಗೂ ರಷ್ಯಾ (Russia) ಬಿಕ್ಕಟ್ಟಿನ ಹಿನ್ನಲೆಯಲ್ಲಿ ವರ್ಚುವಲ್ ಸಭೆಯಲ್ಲಿ ( virtual meeting) ಭಾಗವಹಿಸಲಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನೊಂದಿಗೆ ಇಂಡೋ-ಪೆಸಿಪಿಕ್ ನಲ್ಲಿ (important developments in the Indo-Pacific) ಚೀನಾದ ನಿರಂತರ ಭೀತಿ ಹುಟ್ಟಿಸಿರುವ ಬಗ್ಗೆಯೂ ನಾಯಕರುಗಳು ಚರ್ಚೆಯನ್ನು ನಡೆಸಲಿದ್ದಾರೆ.

ಕ್ವಾಡ್ ಲೀಡರ್ಸ್ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಶೃಂಗಸಭೆಯ ನಂತರ ಈ ನಾಯಕರುಗಳಿಗೆ ತಮ್ಮ ಮಾತುಕತೆಯನ್ನು ಮುಂದುವರಿಸುವ ಅವಕಾಶವನ್ನು ಹೊಂದಿರಲಿದ್ದಾರೆ. ಮೂಲಗಳ ಪ್ರಕಾರ, ಇಂಡೋ-ಪೆಸಿಪಿಕ್ ವಲಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಕ್ವಾಡ್‌ನ ಸಮಕಾಲೀನ ಮತ್ತು ಸಕಾರಾತ್ಮಕ ಕಾರ್ಯಸೂಚಿಯ ಭಾಗವಾಗಿ ಘೋಷಿಸಲಾದ ನಾಯಕರ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಕ್ವಾಡ್ ನಾಯಕರು ಪರಿಶೀಲನೆ ಮಾಡಲಿದ್ದಾರೆ. ಈ ಕ್ವಾಡ್ ಸಭೆಯ ಇದಕ್ಕೂ ಮೊದಲು ನಿಗದಿಯಾಗಿರಲಿಲ್ಲ. 2022ರ ಮೊದಲ ಭಾಗದಲ್ಲಿ ಜಪಾನ್ ನಲ್ಲಿ ಕ್ವಾಡ್ ನ ಮುಂದಿನ ಸಭೆ ನಿಗದಿಯಾಗಿತ್ತು. ಇದರಲ್ಲಿ ಎಲ್ಲಾ ನಾಯಕರುಗಳು ವೈಯಕ್ತಿಕವಾಗಿ ಹಾಜಾರಾಗಲಿದ್ದಾರೆ. ವಿವಿಧ ವೇಳಾಪಟ್ಟಿಯ ಕಾರಣದಿಂದಾಗಿ ಕ್ವಾಡ್ ನಾಯಕರುಗಳು (Quad leaders) ಈವರೆಗೂ ಈ ಸಭೆಯ ದಿನಾಂಕವನ್ನು ನಿಗದಿ ಮಾಡಿಲ್ಲ.

Scroll to load tweet…


ಪ್ರಸ್ತುತ ವರ್ಚುವಲ್ ಶೃಂಗಸಭೆಯ ಮುಖ್ಯ ಕಾರ್ಯಸೂಚಿಯು ಇಂಡೋ-ಪೆಸಿಫಿಕ್‌ನಲ್ಲಿನ ಬೆಳವಣಿಗೆಗಳನ್ನು ಚರ್ಚಿಸುವುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. "ವರ್ಚುವಲ್ ಶೃಂಗಸಭೆಯು ಕ್ವಾಡ್ ನಾಯಕರಿಗೆ ತಮ್ಮ ಮಾತುಕತೆಗಳನ್ನು ನಡೆಸಲು ವೇದಿಕೆಯನ್ನು ಸಿದ್ಧ ಮಾಡಲಿದೆ, ಅವರು ಇಂಡೋ-ಪೆಸಿಫಿಕ್‌ನಲ್ಲಿನ ಪ್ರಮುಖ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ" ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳನ್ನ ಸ್ವಾಗತಿಸಿದ ಸಚಿವ RC
ಉಕ್ರೇನ್ ನ ಮೇಲೆ ರಷ್ಯಾದ ಆಕ್ರಮಣದ ಬೆನ್ನಲ್ಲಿಯೇ ಕ್ವಾಡ್ ನಾಯಕರುಗಳು ವರ್ಚುವಲ್ ಸಭೆಯ ನಡೆಯಲಿದ್ದರೂ, ಮೂಲಗಳ ಪ್ರಕಾರ ಸಭೆಯ ಅಜೆಂಡಾ ಮಾತ್ರ ಇದಾಗಿರುವುದಿಲ್ಲ ಎಂದು ಹೇಳಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾದ ಆಕ್ರಮಣದ ವಿರುದ್ಧ ಖಂಡನಾ ನಿರ್ಣಯದ ವೇಳೆ ಮೂರೂ ಬಾರಿಯೂ ಭಾರತ ಮತದಾನದಿಂದ ಹಿಂದೆ ಉಳಿದಿತ್ತು. ಅದರೆ, ಉಳಿದ ಮೂರು ದೇಶಗಳು ರಷ್ಯಾದ ವಿರುದ್ಧವಾಗಿ ಮತ ಚಲಾಯಿಸಿದ್ದವು. ಇನ್ನೊಂದೆಡೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರವಾಗಿ ಮಾತನಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್ ನಲ್ಲಿ ಹಿಂಸಾಚಾರ ಕೊನೆ ಮಾಡಿ ಶಾಂತಿ ಮಾತುಕತೆಯ ಮಾರ್ಗ ತೆರೆಯುವಂತೆ ಮನವಿ ಮಾಡಿದ್ದರು.

I am Coming To Russia: ಯುದ್ಧ ನಿಲ್ಲಿಸಿ, ಪುಟಿನ್‌ಗೆ ರಾಖಿ ಸಾವಂತ್ ವಾರ್ನಿಂಗ್‌
ನವೆಂಬರ್ 2017 ರಲ್ಲಿ, ಭಾರತ, ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾವು, ಇಂಡೋ-ಪೆಸಿಪಿಕ್ ವಿಭಾಗದಲ್ಲಿ ಚೀನಾ ಅಗಾಧವಾಗಿ ಮಿಲಿಟರಿ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ನಿರ್ಣಾಯಕ ಸಮುದ್ರ ಮಾರ್ಗಗಳನ್ನು ಯಾವುದೇ ಪ್ರಭಾವದಿಂದ ಮುಕ್ತವಾಗಿಡಲು ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ದೀರ್ಘ ಕಾಲದಿಂದ ಮಾತುಕತೆಯ ಹಂತದಲ್ಲಿದ್ದ ಕ್ವಾಡ್ ಅನ್ನು ಆರಂಭಿಸಲಾಗಿತ್ತು. ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ನಡುವೆ ಈ ನಾಲ್ಕು ದೇಶಗಳ ನಾಯಕರ ಸಭೆ ಮಹತ್ವ ಪಡೆದಿದೆ. ಈ ಸಭೆಯನ್ನು ಉಳಿದ ಮೂರು ದೇಶಗಳು ಭಾರತದ ಮೇಲಿನ ಒತ್ತಡ ಹೇರಲು ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ರಷ್ಯಾ ವಿಚಾರವಾಗಿ ಭಾರತ ಸ್ಪಷ್ಟ ನಿಲುವು ಪ್ರದರ್ಶಿಸಬೇಕು ಮತ್ತು ರಷ್ಯಾ ಆಕ್ರಮಣವನ್ನು ಖಂಡಿಸಬೇಕು ಎಂದು ಈಗಾಗಲೇ ಅಮೆರಿಕ ಹಲವು ಬಾರಿ ಹೇಳಿದೆ