ಲಕ್ನೋ[ಫೆ.20]: ಉತ್ತರ ಪ್ರದೇಶದ ಒಂದು ಶಾಲೆಯ ಮುಖ್ಯ ಶಿಕ್ಷಕ ವಿದ್ಯಾರ್ಥಿಗಳಿಗೆ ನಕಲು ಮಾಡುವ ವಿಧಾನ ಹೇಳಿಕೊಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಉತ್ತರ ಪ್ರದೇಶದ ಪ್ರೌಢ ಶಿಕ್ಷಣ ಪರೀಕ್ಷೆ ಮಂಗಳವಾರದಂದು ಆರಂಭವಾಗಿವೆ. ಹೀಗಿರುವಾಗ ಲಕ್ನೋದಿಂದ 300 ಕಿ. ಮೀಟರ್ ದೂರದಲ್ಲಿರುವ ಮವೂ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಯ ಮ್ಯಾನೇಜರ್ ಕಂ ಪ್ರಿನ್ಸಿಪಾಲ್ ಪ್ರವೀಣ್ ಮಲ್ ರವರ ವಿಡಿಯೋ ಒಂದು ವೈರಲ್ ಆಗಿದೆ. 

ಹೌದು ಇಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಪ್ರವೀಣ್ ಮಲ್, ಕೆಲ ಧಿಕಾರಿಗಳೆದುರೇ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂನಲ್ಲಿ ನಕಲು ಮಾಡುವ ವಿಧಾನ ಹೇಳಿಕೊಟ್ಟಿದ್ದಾರೆ. ವಿದ್ಯಾರ್ಥಿಯೋರ್ವ ಮುಖ್ಯಮಂತ್ರಿ ಆದಿತ್ಯನಾಥ್ ಗೆ ದೂರು ನೀಡುವ ಪೋರ್ಟಲ್ ನಲ್ಲಿ ಈ ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದ್ದು, ಇದರ ಬೆನ್ನಲ್ಲೇ ಈ ಶಿಕ್ಷಕನನ್ನು ಬಂಧಿಸಲಾಗಿದೆ. 

ಎರಡು ನಿಮಿಷ ಅವಧಿಯ ಈ ವಿಡಿಯೋದಲ್ಲಿ 'ನಮ್ಮ ಯಾವೊಬ್ಬ ವಿದ್ಯಾರ್ಥಿ ಕೂಡಾ ಯಾವತ್ತೂ ಫೇಲ್ ಆಗುವುದಿಲ್ಲ ಎಂದು ನಾನು ಸವಾಲೆಸೆಯಬಲ್ಲೆ. ಹೀಗಾಗಿ ಅವರು ಹೆದರುವ ಅವಶ್ಯಕತೆ ಇಲ್ಲ. ನೀವು ಪರಸ್ಪರ ಮಾತನಾಡಬಹುದು ಹಾಗೂ ಪೇಪರ್ ಕೂಡಾ ವಿನಿಮಯ ಮಾಡಿಕೊಳ್ಳಬಹುದು. ನಿಮ್ಮ ಸರ್ಕಾರಿ ಶಾಲಾ ಪಕರೀಕ್ಷಾ ಕೇಂದ್ರದ ಶಿಕ್ಷಕರು ನನ್ನ ಮಿತ್ರರು. ಹೀಗಾಗಿ ನೀವು ಸಿಕ್ಕಿ ಬಿದ್ದು ಎರಡೇಟು ಕೊಟ್ಟರೂ ಭಯ ಪಡಬೇಡಿ' ಎಂದಿದ್ದಾರೆ.

ಅಲ್ಲದೇ 'ಯಾವುದೇ ಪ್ರಶ್ನೆಯ ಉತ್ತರ ಖಾಲಿ ಬಿಡಬೇಡಿ. ಉತ್ತರ ಪತ್ರಿಕೆಯಲ್ಲಿ 100 ರೂ. ನೋಟು ಇಟ್ಟು ಬಿಡಿ. ಟೀಚರ್ ಕಣ್ಮುಚ್ಚಿ ಅಂಕ ನೀಡುತ್ತಾರೆ. ನೀವು 4 ಅಂಕದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ, ಮನಸ್ಸಿಗೆ ಹೊಳೆದಂತೆ ಬರೆದರೆ 3 ಮಾರ್ಕ್ ಪಡೆಯಬಹುದು. ಜೈ ಹಿಂದ್' ಎಂದು ಭಾಷಣ ಮುಗಿಸಿದ್ದಾರೆ.

ಆದರೀಗ ಅವರ ಈ ಭಾಚಷಣ ಹಾಗೂ ಸಲಹೆಯಿಂದ ನೌಕರಿ ಕಳೆದುಕೊಂಡಿದಷ್ಟೇ ಲ್ಲದೇ, ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದೊದಗಿದೆ. 

#NewsIn100Seconds ಪ್ರಮುಖ ಹೆಡ್‌ಲೈನ್ಸ್

"