9 ತಿಂಗಳ ನಂತರ ಪುರಿ ಜಗನ್ನಾಥನ ದರ್ಶನ
ಕೊರೋನಾ ಆತಂಕದ ಕಾರಣ ಬಂದ್ ಆಗಿದ್ದ ದೇವಾಲಯ/ ಪುರಿ ಜಗನ್ನಾಥ ದೇವಾಲಯ ದರ್ಶನಕ್ಕೆ ಮುಕ್ತ/ ಒಂಭತ್ತು ತಿಂಗಳು ನಂತರ ಭಕ್ತರ ಪ್ರವೇಶಕ್ಕೆ ಅವಕಾಶ/ ಸಕಲ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳು
ಭುವನೇಶ್ವರ (ಡಿ 23) ಕೊರೊನಾ ಆತಂಕದ ಕಾರಣ ಕಳೆದ 9 ತಿಂಗಳಿಂದ ಮುಚ್ಚಲಾಗಿದ್ದ, ಪುರಿ ಜಗನ್ನಾಥ ದೇವಾಲಯ ಇಂದು ಬಾಗಿಲು ತೆರೆದಿದೆ. ಜನವರಿ ಮೂರಕ್ಕೆ ಸಾರ್ವಜನಿಕರಿಗೆ ದರ್ಶನ ಅವಕಾಶ ಮಾಡಿಕೊಡಲಾಗುತ್ತದೆ.
ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಧಿಕಾರಿ ಕೃಷನ್ ಕುಮಾರ್, ಕೋವಿಡ್-19 ಶಿಷ್ಚಾರಗಳನ್ನು ಪಾಲಿಸಿಕೊಂಡು ಹಂತಹಂತವಾಗಿ ದೇವಸ್ಥಾನದ ಬಾಗಿಲು ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಮೊದಲಿತೆ ದೇವಾಲಯದ ಜವಾಬ್ದಾರಿ ಹೊತ್ತಿರುವ ಕುಟುಂಬದ ಜನರಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಹೇಗೆ ಇರಲಿದೆ?
ಪ್ರಸಿದ್ಧ ಯಾತ್ರಾಸ್ಥಳ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶವನ್ನು ಮಾರ್ಚ್ 25ರಂದು ಬಂದ್ ಮಾಡಲಾಗಿತ್ತು. ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುತ್ತಿದ್ದರೂ ಕೂಡ ದೇವಸ್ಥಾನಕ್ಕೆ ತೆರಳಲು ಜನರಿಗೆ ಅವಕಾಶವಿರಲಿಲ್ಲ ಹೊಸ ವರ್ಷವಾಗಿದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ . ಈ ಕಾರಣಕ್ಕೆ ಜನವರಿ 1 ಹಾಗೂ 2 ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಜನವರಿ 3 ರಂದು ದೇವಸ್ಥಾನದ ಬಾಗಿಲು ತೆರೆದಿರಲಿದೆ.
48 ಗಂಟೆಯೊಳಗಾಗಿ ಪಡೆದ ಕೊವಿಡ್ ನೆಗೆಟಿವ್ ವರದಿಯನ್ನು ಭಕ್ತರು ಹೊಂದಿರಬೇಕು. ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಲು ಅನುಮತಿ ಇದೆ. 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತಿದ್ದು ಹಂತ ಹಂತವಾಗಿ ಹೆಚ್ಚಿನ ಜನರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
ಭಕ್ತರ ಸುಗಮ ದರ್ಶನಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಮಾಡಲಾಗಿದ್ದು ದೇವಾಲಯದ ಸಿಂಜಹದ್ವಾರ ಮೂಲಕ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಉಳಿದ ದ್ವಾರಗಳ ಮೂಲಕ ನಿರ್ಗಮನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.