Asianet Suvarna News Asianet Suvarna News

Puppy Viral Video: ಪುಟ್ಟ ನಾಯಿಗೆ ದೇಸಿ ಸ್ಟೈಲ್ ಸ್ವಾಗತ

ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ಇಲ್ಲೊಂದು ಪುಟ್ಟ ನಾಯಿಮರಿಯನ್ನು ಕುಟುಂಬ ಎಷ್ಟು ಕ್ಯೂಟ್ ಆಗಿ ವೆಲ್‌ಕಮ್(Welcome) ಮಾಡಿದೆ ನೋಡಿ

Pup gets full desi welcome at home in adorable viral video dpl
Author
Bangalore, First Published Nov 27, 2021, 4:58 PM IST

ಶ್ವಾನಗಳನ್ನು ತುಂಬಾ ಪ್ರೀತಿಸುವವರಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರಿಗೂ ನಾಯಿ ಸಾಕೋ ಹವ್ಯಾಸವಿರುತ್ತದೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್‌, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ. ಈಗ ಕುಟುಂಬವೊಂದು ಪುಟ್ಟ ಪಪ್ಪಿಯನ್ನು ಮನೆಗೆ ಸ್ವಾಗತಿಸೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಯಾರನ್ನಾದರೂ ಮನೆಗೆ ಸ್ವಾಗತಿಸುವಾಗ ನಡೆಸುವ ದೇಸಿ ಪದ್ಧತಿಯು ಸುಂದರವಾದ ಭಾವನಾತ್ಮಕ ಮತ್ತು ರೋಮಾಂಚಕವಾದ ಭಾರತೀಯ ಆಚರಣೆಗಳಲ್ಲಿ ಒಂದಾಗಿದೆ. ಆರತಿ ಎತ್ತಿ ಮನೆಗೆ ಸ್ವಾಗತಿಸುವ ಪದ್ಧತಿ ಭಾರತದ ಬಹುತೇಕ ಎಲ್ಲ ಕಡೆಗಳಲ್ಲಿಯೂ ಇದೆ. ಆದ್ದರಿಂದ ಮನೆಗೆ ತಂದ ಪುಟ್ಟ ನಾಯಿಮರಿಯನ್ನು ಸಂಪೂರ್ಣ ದೇಸಿ ಸ್ಟೈಲ್‌ನಲ್ಲಿ ಸ್ವಾಗತಿಸಲಾಗಿದೆ. ಈ ಕ್ಯೂಟೆಸ್ಟ್ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ರಿಯೋನಿಮೇಶ್ ಎಂಬ ಖಾತೆಯಿಂದ ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಹುಡುಗಿಯೊಬ್ಬಳು ತನ್ನ ತೋಳುಗಳಲ್ಲಿ ಮುದ್ದಾದ ಗೋಲ್ಡನ್ ರಿಟ್ರೈವರ್ ನಾಯಿಯನ್ನು ಹಿಡಿದಿರುವುದು ಕಾಣಬಹುದು. ಅವಳು ಅದನ್ನು ಹಿಡಿದಾಗ ಅವಳ ತಂದೆ ಅದರ ಪುಟ್ಟ ಪಂಜಗಳ ಮೇಲೆ ತಿಲಕ ಹಾಕಿದರು. ಅದರ ಮುಂದೆ ಒಂದು ದೀಪ ಹಾಗೂ ಸ್ವಲ್ಪ ಅಕ್ಕಿಯೊಂದಿಗೆ 'ಆರತಿ ' ಎತ್ತಿದ್ದಾರೆ. ನಂತರ ಹುಡುಗಿ ನಾಯಿ ಮರಿಯನ್ನು ನಿಧಾನವಾಗಿ ಮನೆಯೊಳಗೆ ಬಿಟ್ಟಿದ್ದಾರೆ.

ಪ್ರವಾಹದಿಂದ ತನ್ನ ಮರಿ ರಕ್ಷಿಸಿದ ಶ್ವಾನ

ಗೋಲ್ಡನ್ ರಿಟ್ರೈವರ್ ಒಂದು ಮಧ್ಯಮ-ಗಾತ್ರದ ನಾಯಿಯಾಗಿದ್ದು, ಬೇಟೆಯಾಡುವ ಮತ್ತು ಶೂಟಿಂಗ್ ಪಾರ್ಟಿಗಳ ಸಮಯದಲ್ಲಿ ಗ್ರೌಸ್ ಮತ್ತು ಪಾರ್ಟ್ರಿಡ್ಜ್‌ನಂತಹ ಗುಂಡು ಹಾರಿದ ಎತ್ತರದ ಆಟದ ಪಕ್ಷಿಗಳನ್ನು ಹಿಂಪಡೆಯಲು ಇದನ್ನು ಬೆಳೆಸಲಾಗುತ್ತದೆ. 'ರಿಟ್ರೈವರ್' ಎಂಬ ಹೆಸರು ಈ ನಾಯಿಗಳ ಮೃದುವಾದ ಬಾಯಿಯಿಂದ ಹಾನಿಯಾಗದಂತೆ ಶಾಟ್ ಆಟವನ್ನು ಹಿಂಪಡೆಯುವ ಸಾಮರ್ಥ್ಯವನ್ನು ಸೂಚಿಸುತ್ತದೆ.

Follow Us:
Download App:
  • android
  • ios