Asianet Suvarna News Asianet Suvarna News

Sidhu Moose Wala ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಪಂಜಾಬ್ ಸಿಂಗರ್, ಕಾಂಗ್ರೆಸ್ ನಾಯಕ ಸಿಧುನನ್ನು ಗುಂಡಿಕ್ಕಿ ಹತ್ಯೆ!

  • ಪಂಜಾಬಿ ಖ್ಯಾತ ಸಿಂಗ್ ರ್ಯಾಪರ್ ಸಿಧು ಮೂಸ್ ವಾಲಾ
  • ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದ ಮೂಸ್ ವಾಲ
  • ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು
Punjabi singer congress leader Sidhu Moosewala shot dead after Govt withdrawn security ckm
Author
Bengaluru, First Published May 29, 2022, 6:50 PM IST

ನವದೆಹಲಿ(ಮೇ.29): ಪಂಜಾಬ್ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲನನ್ನು ದುರ್ಷರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಿಧು ಮೂಸೆ ವಾಲಾ ಹತ್ಯೆಯಾಗಿದ್ದಾರೆ.

ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಹಲವರ ಭದ್ರತೆ ವಾಪಸ್ ಪಡೆದಿದೆ. ಹೀಗೆ ನಿನ್ನೆಯಷ್ಟೇ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿತ್ತು.  ಭದ್ರತೆ ವಾಪಸ್ ಪಡೆದ ಒಂದೇ ದಿನದಲ್ಲಿ ಇದೀಗ ಸಿಧು ಮೂಸೆ ವಾಲಾ ಹತ್ಯೆಯಾಗಿದ್ದಾರೆ. ಇದು ಆಪ್ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಹೇ ಜಗನ್ನಾಥ... ಪುರಿ ದೇಗುಲದ ಎದುರೇ ಅರ್ಚಕನ ಪುತ್ರನ ಕೊಲೆ

ಸಿಧು ಮೂಸೆ ವಾಲಾ ಹತ್ಯೆಗೆ ರಾಜಕೀಯ ನಾಯಕರು, ಪಂಜಾಬ್ ಸಿನಿ ರಂಗದ ದಿಗ್ಗಜರು ಆಘಾತ ವ್ಯಕ್ತಪಡಿಸಿದ್ದಾರೆ. ಹಗಲು ಹೊತ್ತಲ್ಲೆ ಸಿಧು ಮೂಸೆವಾಲ ಹತ್ಯೆ ಆಘಾತತಂದಿದೆ. ಪ್ರತಿಭಾನ್ವಿತ ಹಾಗೂ ಜನರೊಂದಿಗೆ ಹೆಚ್ಚು ಸಂಪರ್ಕಹೊಂದಿದ್ದ ನಾಯಕನಾಗಿದ್ದ ಸಿಧು ನಷ್ಟ ಅಪಾರ ನೋವು ತಂದಿದೆ ಎಂದು ಕಾಂಗ್ರೆಸ್ ನಾಯರ ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಸಿಧು ಮೂಸೆ ವಾಲಾ ಹತ್ಯೆಯನ್ನು ಬಿಜೆಪಿ ನಾಯಕ ಮಜಿಂದರ್ ಸಿಂಗ್ ಸಿರ್ಸಾ ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕರ್ತವ್ಯ ನಿರ್ಲಕ್ಷ್ಯ ಕುರಿತು ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸಿಧು ಮೂಸೆ ವಾಲಾ ಭದ್ರತೆ ವಾಪಸ್ ಪಡೆದು ಹತ್ಯೆಗೆ ಸಿಎಂ ನೇರ ಕಾರಣರಾಗಿದ್ದಾರೆ. ಮೂಸೆವಾಲಾ ಪ್ರಾಣಕ್ಕೆ ಕುತ್ತು ತಂದಿರುವ ಸಿಎಂ ಕರ್ತವ್ಯದ ನಿರ್ಲಕ್ಷ್ಯಕ್ಕಾಗಿ ಭಗವಂತ್ ಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಮಜಿಂದರ್ ಸಿಂಗ್ ಸಿರ್ಸಾ ಆಗ್ರಹಿಸಿದ್ದಾರೆ.

ಕಳೆದ ಪಂಜಾಬ್ ವಿಧಾನಸಭಾ ಚುನಾವಣೆಗೂ ಮೊದಲು ಸಿಧು ಮೂಸೆ ವಾಲಾ ಕಾಂಗ್ರೆಸ್ ಸೇರಿಕೊಂಡಿದ್ದರು. ಬಳಿಕ ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧಿಸಿದ್ದ ಸಿಧು ಸೋಲು ಅನುಭವಿಸಿದ್ದರು. ಆಪ್ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಅಂತರದಿಂದ ಸೋಲು ಕಂಡಿದ್ದರು.

Sandeep Nangal ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್ ಮೇಲೆ ಭೀಕರ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!

ಪಂಜಾಬ್‌ನಲ್ಲಿ ಸಿಧು ಮೂಸ್ ವಾಲಾ ಅತ್ಯಂತ ಜನಪ್ರಿಯ ರ್ಯಾಪ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿಧು ಮೂಸೆ ವಾಲ ಬಿಡುಗಡೆ ಮಾಡಿದ್ದ ಹಾಡು ವಿವಾದಕ್ಕೆ ಕಾರಣವಾಗಿತ್ತು. ಈ ಹಾಡಿನಲ್ಲಿ ಆಪ್ ವಿರುದ್ಧ ಕೆಲ ಪದಗಳನ್ನು ವಾಕ್ಯಗಳನ್ನು ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಸಿಧು ಮೂಸೆವಾಲ ಜೂನ್ 17, 1993ರಲ್ಲಿ ಮಾನ್ಸಾ ಜಿಲ್ಲೆಯ ಮೂಸೆವಾಲ ಗ್ರಾಮದಲ್ಲಿ ಹುಟ್ಟಿದರು. ಸಿಧು ಅಪಾರ ಬೆಂಬಲಿಗರು, ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಇವರ ಎಲ್ಲಾ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ. ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿರುವ ಸಿಧು, ಅತ್ಯಂತ ವಿವಾದಾತ್ಮ ಸಿಂಗರ್ ಆಗಿ  ಗುರುತಿಸಿಕೊಂಡಿದ್ದರು.

ಸಿಧು ಮೂಸೆ ವಾಲ ತಮ್ಮ ಹಾಡುಗಳಲ್ಲಿ ಗನ್, ಹೊಡೆದಾಟ, ಬಡಿದಾಟ, ಕೊಲೆ, ದರೋಡೆಕೋರರ ವೈಭವೀಕರಿಸುತ್ತಿದ್ದರು. ಇದು ಹಲವು ವಿವಾದಕ್ಕೆ ಕಾರಣವಾಗಿದೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ 
ಜಟ್ಟಿ ಜೆನಾಯ್ ಮೊರ್ಹ್ ದಿ ಬಂದೂಕ್ ವಾರ್ಗಿ ಹಾಡು ಭಾರಿ ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಸಿಧು ಮೂಸೆ ವಾಲ ಕ್ಷಮೆಯಾಚಿಸಿದ್ದರು.

Follow Us:
Download App:
  • android
  • ios