ಬಾರಾಮುಲ್ಲಾ ಕ್ಷೇತ್ರಕ್ಕ ನಾಳೆ ಮತದಾನ ನಡೆಯಲಿದ್ದು, ಶನಿವಾರ ರಾತ್ರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀನಗರ: ಬಾರಾಮುಲ್ಲಾ ಕ್ಷೇತ್ರದ ಲೋಕಸಭಾ ಚುನಾವಣೆ ಎರಡು ದಿನದ ಮುನ್ನವೇ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ರಾತ್ರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿರುವ ಉಗ್ರರು, ಗುಂಡಿನ ದಾಳಿ ನಡೆಸಿದ್ದಾರೆ. ಶೋಪಿಯಾನ್ ಪ್ರದೇಶದಲ್ಲಿ ಮಾಜಿ ಸರ್ಪಂಚ್‌ ಮೇಲೆ ಗುಂಡಿನ ದಾಳಿ ನೆಡಸಲಾಗಿದೆ. ಅನಂತ್‌ನಾಗ್‌ನಲ್ಲಿ ರಾಜಸ್ಥಾನ ಮೂಲದ ದಂಪತಿ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯಲ್ಲಿ ಮಾಜಿ ಸರ್‌ಪಂಚ್‌ ಸಾವನ್ನಪ್ಪಿದ್ದಾರೆ. ಐಜಾಜ್ ಶೇಖ್ ಗುಂಡಿನ ದಾಳಿಗೆ ಬಲಿಯಾದ ನಾಯಕ. ಐಜಾಜ್ ಶೇಖ್ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಶನಿವಾರ ಶೋಪಿಯಾನ್ ವ್ಯಾಪ್ತಿಯ ಹಿರ್ಪೋರಾದಲ್ಲಿ ರಾತ್ರಿ ಸುಮಾರು 10.30ರ ವೇಳೆ ಐಜಾಜ್ ಶೇಖ್ ಅವರನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಐಜಾಜ್ ಶೇಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶೇಖ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ಐಜಾಜ್ ಶೇಖ್ ಕಲ್ಲುತೂರಾಟ ನಡೆಸುತ್ತಿದ್ದರು.ಬದಲಾದ ಸನ್ನಿವೇಶದಲ್ಲಿ ಪಿಎಂ ಮೋದಿ ಅಭಿಮಾನಿಯಾಗಿ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಪ್ರವಾಸಿಗರ ಮೇಲೆ ಗುಂಡಿನ ದಾಳಿ

ಪಹಲ್ಗಾಮ ಪ್ರದೇಶದಲ್ಲಿ ಪ್ರವಾಸಿ ದಂಪತಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ದಂಪತಿ ಅನಂತ್‌ನಾಗ್ ಯನ್ನಾರ್ ಬಳಿಯ ಹೊರವಲಯದ ಟೆಂಟ್‌ನಲ್ಲಿ ಉಳಿದುಕೊಂಡಿದ್ದರು. ದಂಪತಿಯನ್ನು ಫರ್ಹಾ ಮತ್ತು ತಬ್ರೇಜ್ ಎಂದು ಗುರುತಿಸಲಾಗಿದೆ. ಇಬ್ಬರು ರಾಜಸ್ಥಾನದ ಜೈಪುರ ನಿವಾಸಿಗಳು ಎಂದು ವರದಿಯಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದೆ. 

ಸೋಶಿಯಲ್ ಮೀಡಿಯಾ ಸ್ನೇಹಿತನಿಂದ ಯುವತಿಯ ಕೊಲೆ: ಹಂತಕನ ಸುಳಿವು ನೀಡಿತ್ತು ಶರ್ಟ್‌ನಲ್ಲಿದ್ದ ಕಲೆ

ಮೊದಲು ಅನಂತ್‌ನಾಗ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದಿದೆ. ಇದಾದ ಒಂದು ಗಂಟೆಯ ನಂತರ ರಾಜಕೀಯ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಗುಂಡಿನ ದಾಳಿ ನಡೆದಿರೋದನ್ನು ಎಕ್ಸ್ ಖಾತೆಯಲ್ಲಿ ಖಚಿತಪಡಿಸಿಕೊಂಡಿದ್ದಾರೆ.

Scroll to load tweet…

ಶೋಧ ಕಾರ್ಯಾಚರಣೆ ಆರಂಭ

ಗುಂಡಿನ ದಾಳಿ ನಡೆದ ಅನಂತ್‌ನಾಗ್ ಮತ್ತು ಶೋಫಿಯಾನ್ ಪ್ರದೇಶಗಳಲ್ಲಿ ಕಾಶ್ಮೀರದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಎಲ್ಲಾ ರಸ್ತೆಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

Scroll to load tweet…

ಅನಂತ್‌ನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಯುತ್ತಿದೆ. ಬಾರಮುಲ್ಲಾ ಕ್ಷೇತ್ರಕ್ಕೆ ಮೇ 20 ರಂದು ಮತದಾನ ನಡೆಯಲಿದೆ. ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಬಿಜೆಪಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಈ ದಾಳಿಯನ್ನು ಖಂಡಿಸಿವೆ.

ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ!

ಮಾಜಿ ಸಿಎಂ, ಮೆಹಬೂಬಾ ಮುಫ್ತಿ ಈ ದಾಳಿಯನ್ನು ಖಂಡಿಸಿದ್ದಾರೆ. ಮೆಹಬೂಬಾ ಮುಫ್ತಿ ಅನಂತ್‌ನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಒಮರ್ ಅಬ್ದುಲ್ಲಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.