Asianet Suvarna News Asianet Suvarna News

ಅವನು ನನ್ನ ಗಂಡ, ಅಲ್ಲ ನನ್ನ ಪತಿ; ಇಬ್ರು ಮಹಿಳೆಯರ ಕಿತ್ತಾಟದಲ್ಲಿ ಹೈರಾಣದ ಪೊಲೀಸರು!

ಇಬ್ಬರು ಮಹಿಳೆಯರು ಪತಿಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ವ್ಯಕ್ತಿಗೆ ಇದು ಮೂರನೇ ಮದುವೆ ಅನ್ನೋದು ತಿಳಿದಿದೆ. ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Two wives fight for her husband and filed complaint mrq
Author
First Published May 19, 2024, 10:07 AM IST

ಹೈದರಾಬಾದ್: ಇಬ್ಬರು ಮಹಿಳೆಯರು ಪತಿಗಾಗಿ ಕಿತ್ತಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣವನ್ನು ಇತ್ಯರ್ಥ ಮಾಡಲು ಪೊಲೀಸರು ಫುಲ್ ಹೈರಾಣು ಆಗಿದ್ದಾರೆ.

ಮೊದಲಿಗೆ ಒಬ್ಬ ಯುವತಿಗಾಗಿ ಇಬ್ಬರು ಗಲಾಟೆ ಮಾಡಿಕೊಳ್ಳುತ್ತಿರುವ ಸುದ್ದಿಗಳು ಬರುತ್ತಿದ್ದವು. ಈಗ ಕಾಲ ಬದಲಾಗಿದ್ದು, ಒಬ್ಬನಿಗಾಗಿ ಇಬ್ಬರು ಯುವತಿಯರು ಕಿತ್ತಾಡಿಕೊಳ್ಳುವ ವಿಡಿಯೋಗಳು ವೈರಲ್ ಆಗತ್ತಿರುತ್ತವೆ. ಹೆಂಡತಿ ಬೇರೊಬ್ಬನ ಜೊತೆಯಲ್ಲಿದ್ದಾಗ ಗಂಡ ರೆಡ್ ಹ್ಯಾಂಡ್‌ ಆಗಿ ಹಿಡಿದು ಥಳಿಸಿದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಅಗಿತ್ತು. 

ಕೆಲವು ಪ್ರಕರಣಗಳಲ್ಲಿ ಗಂಡ ಮತ್ತೊಬ್ಬ ಮಹಿಳೆ ಜೊತೆ ಸಿಕ್ಕಾಗ ಪತ್ನಿ ಥಳಿಸುವ ಪ್ರಕರಣಗಳು ನಡೆದಿವೆ. ಆದ್ರೆ ಇಲ್ಲಿ ಇಬ್ಬರು ಮಹಿಳೆಯರು ಒಬ್ಬ ವ್ಯಕ್ತಿಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆತ ನನ್ನ ಗಂಡ ಅನ್ನೋದು ಇಬ್ಬರು ಮಹಿಳೆಯರ  ವಾದವಾಗಿತ್ತು. ಪತಿಯನ್ನು ತಮ್ಮ ಸುಪರ್ದಿಗೆ ಪಡೆಯಲು  ಇಬ್ಬರು  ಮಹಿಳೆಯರು ಮೇ 17ರಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 

ಏನಿದು ಪ್ರಕರಣ?

ಜೇಡಿಮೆಟರ್ ನಿವಾಸಿಯಾಗಿರುವ ಮಧು ಎಂಬ ವ್ಯಕ್ತಿ ಸುಮಾರು 20 ವರ್ಷಗಳ ಹಿಂದೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಹಜೋರತ್ ಎಂಬವರನ್ನು ಮದುವೆಯಾಗಿದ್ದನು. ಮಧು-ಹಜೋರತ್ ದಂಪತಿಗೆ ಇಬ್ಬರು ಮಕ್ಕಳು ಸಹ ಇವೆ. ಕೆಲ ವರ್ಷಗಳ ಹಿಂದೆ ಹಜೋರತ್ ಅನಾರೋಗ್ಯದಿಂದ ನಿಧನರಾಗುತ್ತಾರೆ. 

ಸೋಶಿಯಲ್ ಮೀಡಿಯಾ ಸ್ನೇಹಿತನಿಂದ ಯುವತಿಯ ಕೊಲೆ: ಹಂತಕನ ಸುಳಿವು ನೀಡಿತ್ತು ಶರ್ಟ್‌ನಲ್ಲಿದ್ದ ಕಲೆ

ಹಜೋರತ್ ನಿಧನದ ಬಳಿಕ 200ರಲ್ಲಿ ಮಧು ಪತ್ನಿಯ ತಂಗಿ 37 ವರ್ಷದ ಹರಿನಾ ಎಂಬಬವನ್ನು ಮದುವೆ ಆಗುತ್ತಾನೆ. ಮದುವೆ ಬಳಿಕ ಹರಿನಾ ಜೊತೆ ಮಧು ದಿಲ್‌ಸುಖ್‌ನಗರದ ಕೋದಂಡರಾಮ್‌ ನಗರದಲ್ಲಿ ವಾಸಿಸಲು ಆರಂಭಿಸಿದ್ದರು. ಮಧು ಸ್ವಿಚ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರೆ, ಹರಿನಾ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದರು.

ಮಧು ಜೀವನದಲ್ಲಿ ಲಾವಣ್ಯ ಪ್ರವೇಶ

ಈ ಸಮಯದಲ್ಲಿ ಮಧು ಬಳಿ ಥೆರಪಿಗಾಗಿ ಲಾವಣ್ಯ ಎಂಬ ಮಹಿಳೆ ಬಂದಿದ್ದಾರೆ. ಇಬ್ಬರ ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿದೆ. ಮನೆಯಲ್ಲಿ ಪತ್ನಿ ಇದ್ದರೂ  ರಹಸ್ಯವಾಗಿ ಲಾವಣ್ಯಳನ್ನು ಮದುವೆಯಾಗಿದ್ದಾನೆ. ಆದ್ರೆ  ಲಾವಣ್ಯಗೆ ಮಗು ಆಗುತ್ತಿದ್ದಂತೆ ಆಕೆಯಿಂದ ಮಧು ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದನು. 

ಐದು ಮಕ್ಕಳಿದ್ದಾರೆಂದು ಚಿಂತೆ ಮಾಡುತ್ತಿದ್ದ ತಂದೆ, ಇಬ್ಬರು ತಂಗಿಯರನ್ನು ಕತ್ತು ಹಿಸುಕಿ ಕೊಂದ ಅಕ್ಕ!

ಇತ್ತ ಪತಿ ಮೂರನೇ ಮದುವೆಯಾಗಿರುವ ವಿಷಯ ಹರಿನಾ ಗಮನಕ್ಕೂ ಬಂದಿದೆ. ಪತಿ ಲಾವಣ್ಯ ಮನೆಗೆ ಹೋಗದಂತೆ ಹರಿನಾ ತಡೆದಿದ್ದಾರೆ. ಪತಿ ಮನೆಗೆ ಬರದಿದ್ದಾಗ ಆತಂಕಗೊಂಡ ಹರಿಕಾ-ಮಧು ನಿವಾಸಕ್ಕೆ ಲಾವಣ್ಯ ಬಂದಿದ್ದಾರೆ. ಈ ವೇಳೆ ಪತಿ ಬೇಕು ಎಂದು ಲಾವಣ್ಯ ಗಲಾಟೆ ಮಾಡಿದ್ದಾರೆ. ಕೊನೆಗೆ ಲಾವಣ್ಯ ಮತ್ತು ಹರಿನಾ ಪತಿಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios