Asianet Suvarna News Asianet Suvarna News

Punjab Elections: ಸಯಾಮಿ ಅವಳಿಗಳಿಂದ ಪ್ರತ್ಯೇಕ ಮತದಾನ!

ಪಂಜಾಬ್‌ ಚುನಾವಣೆಯ ವೇಳೆ ಭಾನುವಾರ ಅಮೃತಸರದಲ್ಲಿ ಸಯಾಮಿ ಅವಳಿಗಳು ಪ್ರತ್ಯೇಕವಾಗಿ ಮತದಾನ ಮಾಡಿದ್ದಾರೆ. ಮತದಾನದ ಗೌಪ್ಯತೆಯನ್ನು ಕಾಪಾಡಲು ಅವರಿಗೆ ಕಪ್ಪು ಕನ್ನಡಕವನ್ನು ನೀಡಲಾಗಿತ್ತು.

Punjab polls Conjoined twins Sohna Mohna cast 2 votes goggles keep secrecy gvd
Author
Bengaluru, First Published Feb 21, 2022, 5:22 AM IST

ಅಮೃತಸರ (ಫೆ.21): ಪಂಜಾಬ್‌ ಚುನಾವಣೆಯ (Pujab Election) ವೇಳೆ ಭಾನುವಾರ ಅಮೃತಸರದಲ್ಲಿ ಸಯಾಮಿ ಅವಳಿಗಳು (Conjoined Twins) ಪ್ರತ್ಯೇಕವಾಗಿ ಮತದಾನ ಮಾಡಿದ್ದಾರೆ. ಮತದಾನದ ಗೌಪ್ಯತೆಯನ್ನು ಕಾಪಾಡಲು ಅವರಿಗೆ ಕಪ್ಪು ಕನ್ನಡಕವನ್ನು ನೀಡಲಾಗಿತ್ತು. ಅಮೃತಸರದ ಸೋಹನ್‌ ಸಿಂಗ್‌ (Sohan Singh) ಮತ್ತು ಮೋಹನ್‌ ಸಿಂಗ್‌ (Mohan Singh) ಎಂಬ ಸಯಾಮಿ ಅವಳಿಗಳು ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದರು.

ಸೋಹ್ನಾ- ಮೋಹ್ನಾ ಎಂದೇ ಪ್ರಸಿದ್ದರಾಗಿರುವ ಈ ಸಯಾಮಿ ಜೋಡಿ ಇತ್ತೀಚಿಗೆ 2 ಪ್ರತ್ಯೇಕ ಚುನಾವಣಾ ಗುರುತಿನ ಚೀಟಿ ಪಡೆದುಕೊಂಡಿತ್ತು. ಇವರನ್ನು ಇಬ್ಬರು ವ್ಯಕ್ತಿಗಳು ಎಂದು ಪರಿಗಣಿಸಿರುವುದರಿಂದ ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ಕಾಪಾಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಒಬ್ಬರು ಮತ ಹಾಕುವ ಸಮಯದಲ್ಲಿ ಇನ್ನೊಬ್ಬರಿಗೆ ಏನೂ ಕಾಣಿಸದ ಕನ್ನಡಕ ನೀಡಲಾಗಿತ್ತು ಎಂದು ಅವರು ಮತದಾನದ ನಂತರ ಹೇಳಿದರು. 

ಇವರಿಗೆ ಹಾರ ಹಾಕುವ ಮೂಲಕ ಮತಗಟ್ಟೆಯಲ್ಲಿ ಸ್ವಾಗತ ಕೋರಲಾಯಿತು. ಇವರಿಬ್ಬರು ಪಂಜಾಬ್‌ ವಿದ್ಯುತ್‌ ಸರಬರಾಜು ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ 2 ಹೃದಯ, 2 ಜೊತೆ ಕೈಗಳು, 2 ಬೆನ್ನುಮೂಳೆ ಮತ್ತು ಒಂದು ಜೊತೆ ಕಾಲು ಹೊಂದಿದ್ದಾರೆ.

Punjab Elections: ಪಂಜಾಬ್‌ ಶೇ.70, ಯು.ಪಿ ಶೇ61ರಷ್ಟು ಮತದಾನ

ಸೋನು ಸೂದ್ ಮತಗಟ್ಟೆ ಪ್ರವೇಶ ನಿರಾಕರಿಸಿದ ಪಂಜಾಬ್ ಪೊಲೀಸ್, ಕಾರು ಸೀಝ್!: ಪಂಜಾಬ್ ವಿಧಾನಸಭೆ ಚುನಾವಣೆ (Assembly Election) ಭಾರಿ ಸದ್ದು ಮಾಡುತ್ತಿದೆ. ಇಂದು(ಫೆ.20) ಒಂದು ಹಂತದಲ್ಲಿ ಪಂಜಾಬ್ ವಿಧಾನಸಭೆ ಚುನಾವಣಾ(Pujab Election) ಮತದಾನ ನಡೆಯುತ್ತಿದೆ. 117 ಸ್ಥಾನಗಳಿಗೆ ನಡೆಯುತ್ತಿರುವ ಮತದಾನ ಬಹುತೇಕ ಶಾಂತವಾಗಿದೆ. ಇದರ ನಡುವೆ ಮತಗಟ್ಟೆ(Poll booth) ಪ್ರವೇಶಕ್ಕೆ ಯತ್ನಿಸಿದ ಬಾಲಿವುಡ್ ನಟ, ಸಮಾಜ ಸೇವಕ ಸೋನು ಸೂದ್‌ನನ್ನು(Sonu Sood) ಪಂಜಾಬ್ ಪೊಲೀಸರು ತಡೆದಿದ್ದಾರೆ. ಇಷ್ಟೇ ಅಲ್ಲ ಕಾರು ಸೀಝ್ ಮಾಡಿ ಸೂದ್‌ನನ್ನು ವಾಪಸ್ ಕಳುಹಿಸಿದ್ದಾರೆ.

ಮೊಗಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಮೊಗಾ ಕ್ಷೇತ್ರದಿಂದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್(Malavika Sood) ಕಾಂಗ್ರೆಸ್ ಅಭ್ಯರ್ಥಿಯಾಗಿ(Congress Candidate) ಸ್ಪರ್ಧಿಸುತ್ತಿದ್ದಾರೆ. ಜನವರಿ ತಿಂಗಳಿನಿಂದ ಸೋನು ಸೂದ್ ಸಹೋದರಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಸಹೋದರಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು ಮತದಾನದ ವೇಳೆ ಕೆಲ ಪಕ್ಷದ ಎಜೆಂಟರು ಮತಗಟ್ಟೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸೋನು ಸೂದ್ ಮೊಗಾ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ್ದಾರೆ.ಈ ವೇಳೆ ಪೊಲೀಸರು ಸೋನು ಸೂದ್ ತಡೆದಿದ್ದಾರೆ.

ಮತಗಟ್ಟೆಗೆ ಆಗಮಿಸಿದ ಸೋನು ಸೂದ್‌ ಕಾರನ್ನು ಪೊಲೀಸರು ತಡೆದಿದ್ದಾರೆ. ಬಳಿಕ ಈ ರೀತಿಯ ಮತಗಟ್ಟೆ ಪ್ರವೇಶಿಸಲು ಸಾಧ್ಯವಿಲ್ಲ. ಮತಗಟ್ಟೆಗಳಲ್ಲಿ ಹಣ ಹಂಚಿಕೆ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ಕೆಲಸಗಳು ನಡೆಯುತ್ತಿದ್ದರೆ ದೂರು ನೀಡಲು ಅವಕಾಶವಿದೆ. ಆ್ಯಪ್ ಮೂಲಕವೂ ಸುಲಭವಾಗಿ ದೂರು ನೀಡಬಹುದು. ಚುನಾವಣಾ ಆಯೋಗ ತಕ್ಷಣ ತನಿಖೆ ನಡೆಸಲಿದೆ. ಇಲ್ಲಿ ಸೋನು ಸೂದ್ ಅಥವಾ ಇನ್ಯಾರು ಪ್ರವೇಶಿ ಕ್ರಮ ಕೈಗೊಳ್ಳಲು ಅಥವಾ ಈ ಕುರಿತು ಕಾರ್ಯಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮತಗಟ್ಟೆ ಪ್ರವೇಶಕ್ಕೆ ಯತ್ನಿಸಬಾರದು. ಮರಳಬೇಕು ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಸೋನು ಸೂದ್ ಕಾರು ವಶಕ್ಕೆ ಪಡೆದಿದ್ದಾರೆ.

Punjab Elections: ‘ಉಗ್ರ’ ಈಗ 12 ಸಾವಿರ ಸ್ಮಾರ್ಟ್‌ಕ್ಲಾಸ್‌ ತೆರೆದಿದ್ದಾನೆ: ಕೇಜ್ರಿ ವ್ಯಂಗ್ಯ

ಅಕಾಲಿ ದಳ ಸೇರಿದಂತೆ ಕೆಲ ಪಕ್ಷಗಳು ಮತದಾರರಿಗೆ ಹಣ ಹಂಚುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ಚುನಾವಣೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆಯಬಾರದು. ಇದರಿಂದ ಅನ್ಯಾಯವಾಗಲಿದೆ. ಈ ಕುರಿತು ಪರಿಶೀಲಿಸಲು ಆಗಮಿಸಿದ್ದೇನೆ ಎಂದು ಸೋನು ಸೂದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಸೂದ್ ಮತದಾನ ನಡೆಯುವ ವೇಳೆ ಮತಗಟ್ಟೆ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿದಿಸಿದ್ದಾರೆ. ಇಷ್ಟೇ ಅಲ್ಲ ಮನೆಯಿಂದ ಹೊರಬಂದು ಮತಗಟ್ಟೆ ಪ್ರವೇಶಿಸಲು ಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios