Asianet Suvarna News Asianet Suvarna News

Punjab Elections: ಪಂಜಾಬ್‌ ಶೇ.70, ಯು.ಪಿ ಶೇ61ರಷ್ಟು ಮತದಾನ

ಪಂಜಾಬ್‌ನ ಎಲ್ಲಾ 117 ಕ್ಷೇತ್ರ ಮತ್ತು ಉತ್ತರ ಪ್ರದೇಶದಲ್ಲಿ 3ನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು. ಸಣ್ಣ-ಪುಟ್ಟಗೊಂದಲ ಮತ್ತು ವಾಗ್ವಾದ ಹೊರತುಪಡಿಸಿ, ಶಾಂತಿಯುತ ಮತದಾನವಾಗಿದೆ. 

Assembly polls Nearly 70 per cent voting in Punjab more than 61 per cent in UP gvd
Author
Bengaluru, First Published Feb 21, 2022, 5:11 AM IST

ಚಂಡೀಗಢ/ಲಖನೌ (ಫೆ.21): ಪಂಜಾಬ್‌ನ ಎಲ್ಲಾ 117 ಕ್ಷೇತ್ರ ಮತ್ತು ಉತ್ತರ ಪ್ರದೇಶದಲ್ಲಿ 3ನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು. ಸಣ್ಣ-ಪುಟ್ಟಗೊಂದಲ ಮತ್ತು ವಾಗ್ವಾದ ಹೊರತುಪಡಿಸಿ, ಶಾಂತಿಯುತ ಮತದಾನವಾಗಿದೆ. ಪಂಜಾಬ್‌ನಲ್ಲಿ ಶೇ.70ರಷ್ಟು ಮತ್ತು ಉತ್ತರ ಪ್ರದೇಶದಲ್ಲಿ ಶೇ.61ರಷ್ಟು ಮತದಾನವಾಗಿದೆ.

ಪಂಜಾಬ್‌ನಲ್ಲಿ ಇಬ್ಬರು ತೃತೀಯ ಲಿಂಗಿಗಳು, 93 ಮಹಿಳೆಯರು ಸೇರಿದಂತೆ ಒಟ್ಟಾರೆ 1304 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಅವರ ಸೋಲು-ಗೆಲುವಿನ ಭವಿಷ್ಯವು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ ವಶದಲ್ಲಿರುವ ಪಂಜಾಬ್‌ನಲ್ಲಿ, ಈ ಬಾರಿ ಆಮ್‌ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಚುನಾವಣಾ ಸಮೀಕ್ಷೆಗಳು ಹೇಳಿವೆ. ಇನ್ನು ದಶಕಗಳಿಂದ ಕಾಂಗ್ರೆಸ್‌ನ ನಾಯಕತ್ವ ವಹಿಸಿದ್ದ ಅಮರೀಂದರ್‌ ಸಿಂಗ್‌ ಪಕ್ಷ ಬಿಟ್ಟು ಬಿಜೆಪಿ ಜೊತೆ ಕೈಜೋಡಿಸಿ ಕಣಕ್ಕೆ ಇಳಿದಿದ್ದಾರೆ. ಇನ್ನು ಕಾಂಗ್ರೆಸ್‌, ಹಾಲಿ ಸಿಎಂ ಚನ್ನಿ ಮತ್ತು ರಾಜ್ಯಾಧ್ಯಕ್ಷ ಸಿಧು ಅವರ ತಿಕ್ಕಾಟದಲ್ಲಿ ಬಸವಳಿದಿದೆ. ಹೀಗೆ ನಾನಾ ಕಾರಣದಿಂದಾಗಿ ಪಂಜಾಬ್‌ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ.

Punjab Election ಸೋನು ಸೂದ್ ಮತಗಟ್ಟೆ ಪ್ರವೇಶ ನಿರಾಕರಿಸಿದ ಪಂಜಾಬ್ ಪೊಲೀಸ್, ಕಾರು ಸೀಝ್!

ಯುಪಿ: ಇನ್ನು ಉತ್ತರಪ್ರದೇಶದಲ್ಲಿ ಶೇ.57ರಷ್ಟುಮತದಾನವಾಗಿದೆ. ಈ ಜಿಲ್ಲೆಗಳಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತ ಈ ಸಲ ಕಡಿಮೆ ಮತದಾನವಾಗಿದೆ. 2017ರಲ್ಲಿ ಈ ಕ್ಷೇತ್ರಗಳಲ್ಲಿ ಶೇ.62.21ರಷ್ಟುಮತದಾನವಾಗಿತ್ತು. ಈ ವೇಳೆ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌, ಅಖಿಲೇಶ್‌ ಯಾದವ್‌, ಅವರ ಪತ್ನಿ ಡಿಂಪಲ್‌ ಯಾದವ್‌, ಚಿಕ್ಕಪ್ಪ ಶಿವಪಾಲ್‌ ಯಾದವ್‌, ರಾಮಗೋಪಾಲ್‌ ಯಾದವ್‌, ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌, ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್‌ ಸಿಂಗ್‌ ಸೇರಿದಂತೆ ಇತರರು ತಮ್ಮ ಹಕ್ಕು ಚಲಾಯಿಸಿದರು.

10 ಮಂದಿ ಸೆರೆ: ಎಟಾವಾ ಜಿಲ್ಲೆಯಲ್ಲಿ ವಿಧಾನಸಭೆ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಮಾಡಲು ಯತ್ನಿಸಿದ 10 ಮಂದಿಯನ್ನು ಬಂಧಿಸಲಾಗಿದೆ. ಮತ್ತೊಂದೆಡೆ ಬಿಜೆಪಿ ಕಾರ‍್ಯಕರ್ತರು ತಮ್ಮ ಮತಗಟ್ಟೆಯ ಏಜೆಂಟ್‌ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಸ್‌ಪಿ ನಾಯಕರು ದೂರಿದ್ದಾರೆ.

‘ಉಗ್ರ’ ಈಗ 12 ಸಾವಿರ ಸ್ಮಾರ್ಟ್‌ಕ್ಲಾಸ್‌ ತೆರೆದಿದ್ದಾನೆ: ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಉಗ್ರನೆಂದು ಯಾರನ್ನು ಕರೆಯುತ್ತೀರೋ ಅವನೇ ಬಾಬಾ ಸಾಹೇಬ್‌ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಕನಸನ್ನು ಈಡೇರಿಸಲು ಬಡವರ ಹಾಗೂ ಶ್ರೀಮಂತರ ಮಕ್ಕಳು ಒಟ್ಟಿಗೆ ಸೇರಿ ಶಿಕ್ಷಣ ಪಡೆಯುವಂತ 12,430 ಸ್ಮಾರ್ಟ್‌ ಕ್ಲಾಸ್‌ಗಳನ್ನು ತೆರೆದಿದ್ದಾನೆ’ ಎಂದು ವ್ಯಂಗ್ಯವಾಡಿದ್ದಾರೆ.

Punjab Elections: ಪ್ರಮುಖ ಸಿಖ್ ನಾಯಕರ ಭೇಟಿಯಾದ ಮೋದಿ

ಕೇಜ್ರಿ ಮೇಲೆ ಸಿಖ್‌ ಪ್ರತ್ಯೇಕವಾದಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನನ್ನ ವಿರೋಧಿಗಳು ಭ್ರಷ್ಟರು. ದೇಶವೂ ಇಂದಿಗೂ ಇವರೆದುರು ತಲೆ ಬಾಗುವುದಿಲ್ಲ. ಅಂಬೇಡ್ಕರ್‌, ಭಗತ್‌ ಸಿಂಗ್‌ ಕನಸುಗಳನ್ನು ಈಡೇರಿಸಲು ಬದ್ಧವಾಗಿರುವ ಆಪ್‌ ಸರ್ಕಾರ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಇತರ ರಾಜ್ಯಗಳಿಗೂ ಒದಗಿಸಲಿದೆ. ಬಿಜೆಪಿ, ಕಾಂಗ್ರೆಸ್‌ ಅಥವಾ ಯಾವುದೇ ಪಕ್ಷದ ಆಡಳಿತವಿರುವ ರಾಜ್ಯಗಳು ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸಲು ಬಯಸಿದರೆ ನಾವು ಅವರಿಗೆ ಸೇವೆಯನ್ನು ಒದಗಿಸಲಿದ್ದೇವೆ’ ಎಂದರು.

ಮಾಜಿ ಆಪ್‌ ನಾಯಕ ಕುಮಾರ್‌ ವಿಶ್ವಾಸ ಕೇಜ್ರಿವಾಲ್‌ ಸಿಖ್ಖ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುವ ಮೂಲಕ ಪ್ರತ್ಯೇಕ ರಾಷ್ಟ್ರದ ಮೊದಲ ಪ್ರಧಾನಿಯಾಗಬೇಕೆಂದಿದ್ದರು ಎಂದು ಹೇಳಿದ್ದರು. ಪಂಜಾಬ್‌ ಸಿಎಂ ಚರಣಜೀತ್‌ ಸಿಂಗ್‌ ಚನ್ನಿ ಸೇರಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಈ ಕುರಿತು ತನಿಖೆಗೆ ಆಗ್ರಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದರ ವಿರುದ್ಧ ತನಿಖೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದರು.

Follow Us:
Download App:
  • android
  • ios