Asianet Suvarna News Asianet Suvarna News

'ಸಿಧು ದೇಶದ್ರೋಹಿ' ಹೇಳಿಕೆಗೆ ಮಾಜಿ DGP ಗರಂ, ಕ್ಯಾಪ್ಟನ್ ವಿರುದ್ಧ ಗಂಭೀರ ಆರೋಪ!

* ಪಂಜಾಬ್‌ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ

* ಸಿಧು, ಕ್ಯಾಪ್ಟನ್ ಸಂಘರ್ಷ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅಮರಿಂದರ್ ಸಿಂಗ್

* ರಾಜೀನಾಮೆ ಬಳಿಕ ಸಿಧು ವಿರುದ್ಧ ಕಿಡಿ ಕಾರಿ ಕ್ಯಾಪ್ಟನ್

* ಅಮರಿಂದರ್ ಸಿಂಗ್ ವಿರುದ್ಧವೂ ಕೇಳಿ ಬಂತು ಗಂಭೀರ ಆರೋಪ

Punjab ex DGP takes on Amarinder Singh for calling Sidhu anti national pod
Author
Bangalore, First Published Sep 19, 2021, 1:30 PM IST

ಚಂಡೀಗಢ(ಸೆ.19). ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ, ಅವರ ಹಾಗೂ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯಗಳು ಭಾರೀ ಚರ್ಚೆ ಹುಟ್ಟಿಸಿವೆ. ಅವರಿಬ್ಬರ ನಡುವಿನ ಆರೋಪ, ಪ್ರತ್ಯಾರೋಪಳ ಮಧ್ಯೆ ಈ ಮಾತಿನ ಅಮರ ಸದ್ಯ ಮತ್ತೊಂದು ಹಂತಕ್ಕೆ ತಲುಪಿದೆ.  

ಹೌದು ರಾಜೀನಾಮೆ ಬೆನ್ನಲ್ಲೇ ಸಿಧುವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಮತ್ತು ಬಾಜ್ವಾ ಸ್ನೇಹಿತ ಎಂದು ಕರೆದಿದ್ದ ಕ್ಯಾಪ್ಟನ್ ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಆಗಿ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು. ಆದರೀಗ ಇದಕ್ಕೆ ತಿರುಗೇಟು ಎಂಬಂತೆ ಸಿಧು ಅವರ ಬೆಂಬಲಿಗ, 
ಮಾಜಿ ಡಿಜಿಪಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಐಎಸ್ಐ ಏಜೆಂಟ್ ಜೊತೆ 14 ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ನವಜೋತ್ ಸಿಂಗ್ ಸಿಧು ಅವರನ್ನು ದೇಶವಿರೋಧಿ ಎಂದು ಕರೆದ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ 14 ವರ್ಷಗಳಿಂದ ಐಎಸ್ಐ ಏಜೆಂಟ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಾಜಿ ಐಪಿಎಸ್ ಮುಸ್ತಫಾ ಆರೋಪಿಸಿದ್ದಾರೆ.

ಟ್ವೀಟ್ ಮಾಡಿದ ಮಾಜಿ ಐಪಿಎಸ್ ಮೊಹಮ್ಮದ್ ಮುಸ್ತಫಾ

'ಕ್ಯಾಪ್ಟನ್ ಸರ್, ನಾವು ಬಹಳ ಸಮಯದಿಂದ ಕುಟುಂಬ ಸ್ನೇಹಿತರು. ನಾನು ಬಾಯಿ ಬಿಡುವಂತೆ ಮಾಡಬೇಡಿ. ನಿಮಗೆ ಸುಳ್ಳು ಹೇಳುವಲ್ಲಿ, ಮಿತಿ ಮೀರಿದ ಸಾಮರ್ಥ್ಯವಿದೆ ಎಂದು ನನಗೆ ತಿಳಿದಿದೆ. ನವಜೋತ್ ಸಿಂಗ್ ಸಿಧು ದಿನದಿಂದ ದಿನಕ್ಕೆ ರಾಜಕೀಯವಾಗಿ ಎಲ್ಲ ರೀತಿಯಿಂದಲೂ ದಾಳಿಗೊಳಗಾಗುತ್ತಿದ್ದಾರೆ, ಆದರೆ ಅವರ ದೇಶಭಕ್ತಿ/ರಾಷ್ಟ್ರೀಯತೆಯನ್ನು ಪ್ರಶ್ನಿಸುವುದು ನಿಮ್ಮ ಬಾಯಿಂದ ಚೆನ್ನಾಗಿ ಕಾಣುತ್ತಿಲ್ಲ. 

ನೀವೇ 14 ವರ್ಷಗಳಿಂದ ಐಎಸ್‌ಐ ಏಜೆಂಟ್‌ನೊಂದಿಗೆ ಸಂಬಂಧ ಹೊಂದಿದ್ದೀರಿ. ಅವರು ನಿಮ್ಮ ಸರ್ಕಾರಿ ಕೆಲಸದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದರು. ನೀವು ಆವರ ವಿದೇಶಿ ಖಾತೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಕಳುಹಿಸಿದ್ದೀರಿ. ಮತ್ತು ನೀವು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ.

'ನಿಮಗೆ ಗೊತ್ತಿರುವುದು ನನಗೂ ಗೊತ್ತು. ಪ್ರಪಂಚದಿಂದ ಮರೆಮಾಚಿರುವ ವಿಚಾರಗಳೂ ನನಗೆ ತಿಳಿದಿದೆ. ನಿಮ್ಮ ಹಲವು ವರ್ಷಗಳ ಅಕ್ರಮ ಕೆಲಸಗಳಿಗೆ ಪುರಾವೆಯೂ ಇದೆ' ಎಂದು ಎಚ್ಚರಿಸಿದ್ದಾರೆ. 

Follow Us:
Download App:
  • android
  • ios