ಸಿಖ್ಖ್ ಯೋಧರೊಂದಿಗೆ ಪಂಜಾಬ್ ಸಿಎಂ ಡ್ಯಾನ್ಸ್ ಇದು ನನ್ನ ಹ್ಯಾಪಿ ಪ್ಲೇಸ್ ಎಂದ ಮುಖ್ಯಮಂತ್ರಿ

ಚಂಡೀಗಡ(ಜು.23): ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಈ ಹಿಂದೆ ಸೇವೆ ಸಲ್ಲಿಸಿದ್ದ 2 ಸಿಖ್ ರೆಜಿಮೆಂಟ್‌ನ ಜವಾನರೊಂದಿಗೆ ನೃತ್ಯ ಮಾಡಿದ್ದಾರೆ.

ಗುರುವಾರ ತಮ್ಮ 175 ನೇ ರೈಸಿಂಗ್ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಸಿಎಂ ಹಾಜರಿದ್ದರು. ಸಿಂಗ್ ನಂತರ ಈ ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, "ನನ್ನ ಪಾಲ್ಟಾನ್‌ನ ಜವಾನ್‌ಗಳೊಂದಿಗೆ ನನ್ನ ಸಂತೋಷದ ಸ್ಥಳದಲ್ಲಿ" ಎಂದು ಬರೆದಿದ್ದಾರೆ.

ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದ ಡ್ರೋನ್ ಪತ್ತೆ

ವಿಡಿಯೋದಲ್ಲಿ ಸಿಎಂ ಖುಷಿ ಖುಷಿಯಾಗಿ ನಗುಮುಖದಿಂದ ಸೈನಿಕರ ಕೈ ಕುಲುಕಿ ವಿಶ್ ಮಾಡುವುದನ್ನು ಕಾಣಬಹುದು. ಸೈನಿಕರು ಸಿಎಂ ಅವರ ಜೊತೆ ಫೋಟೊ ತೆಗೆಸಿಕೊಂಡು ಖುಷಿಯಾಗಿ ಸಮಯ ಕಳೆದಿದ್ದಾರೆ.

Scroll to load tweet…

ಸಿಎಂ ಅವರನ್ನು ಕಂಡು ಸ್ಥಳದಕ್ಕು ಉತ್ಸಾಹ ತುಂಬಿದ್ದು ಸೈನಿಕರು ಖುಷಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಸಿಎಂ ಅವರು ತಾವೂ ಸೈನಿಕರೊಂದಿಗೆ ಸೇರಿದ್ದು ವೀಶೇಷ.