Asianet Suvarna News Asianet Suvarna News

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಅನಾರೋಗ್ಯ: ದೆಹಲಿಯ ಆಸ್ಪತ್ರೆಗೆ ದಾಖಲು

ಪಂಜಾಬ್‌ನಲ್ಲಿ ಪೊರಕೆ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಹಾಗೂ ಇತ್ತೀಚೆಗಷ್ಟೇ ವೈದ್ಯೆಯೊಬ್ಬರನ್ನು ಎರಡನೇ ಮದುವೆಯಾಗಿ ಸುದ್ದಿಯಾಗಿದ್ದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂಜಾಬ್‌ ಸಿಎಂ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

punjab cm bhagwant mann unwell hospitalised in new delhi
Author
Bangalore, First Published Jul 21, 2022, 11:09 AM IST

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ ಹಾಗೂ ಆ ರಾಜ್ಯದ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅನಾರೋಗ್ಯಕ್ಕೊಳಗಾಗಿದ್ದಾರೆ. ಈ ಹಿನ್ನೆಲೆ ಅವರನ್ನು ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯ ಸರಿತಾ ವಿಹಾರ್‌ ಪ್ರದೇಶದಲ್ಲಿರುವ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಪಂಜಾಬ್‌ ಸಿಎಂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಇತ್ತೀಚೆಗಷ್ಟೇ ವೈದ್ಯೆಯನ್ನು ಎರಡನೇ ಮದುವೆಯಾಗಿ ಸುದ್ದಿಯಾಗಿದ್ದ ಪಂಜಾಬ್‌ ಸಿಎಂ ಹಾಗೂ ಆಪ್‌ ನಾಯಕ ಭಗವಂತ್‌ ಮಾನ್‌ ಅವರ ಹೊಟ್ಟೆಯಲ್ಲಿ ಸೋಂಕುಂಟಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಿಎಂ ಮಾನ್‌ ವಧುವಾದ 16 ವರ್ಷ ಕಿರಿಯ ಗುರುಪ್ರೀತ್: ಇಲ್ಲಿವೆ ಭಗವಂತ್ ಮದುವೆ ಫೋಟೋಸ್‌

ಪಂಜಾಬ್‌ ಪೊಲೀಸರನ್ನು ಹಾಡಿ ಹೊಗಳಿದ್ದ ಭಗವಂತ್‌ ಮಾನ್‌
ಪಂಜಾಬ್‌ ರಾಜ್ಯದಲ್ಲಿ ಇಬ್ಬರು ಗ್ಯಾಂಗ್‌ಸ್ಟರ್‌ಗಳ ವಿರುದ್ಧ ನಡೆದ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಸ್ಥಳೀಯ ಪೊಲೀಸರನ್ನು ಹೊಗಳಿದ್ದರು. ಅಮೃತಸರದ ಭಕ್ನಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಂಜಾಬ್‌ ಗಾಯಕ ಸಿಧು ಮೂಸೇವಾಲಾರನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಂಕಿತ ಗ್ಯಾಂಗ್‌ಸ್ಟರ್‌ಗಳನ್ನು ಗುಂಡೇಟಿನಿಂದ ಹತ್ಯೆಗೈಯಲಾಗಿದೆ. 

ಸುಮಾರು ಐದು ಗಂಟೆಗಳ ಕಾಲ ಪಂಜಾಬ್‌ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ಜಗ್‌ರೂಪ್‌ ಸಿಂಗ್‌ ರೂಪಾ ಹಾಗೂ ಮನ್‌ಪ್ರೀತ್‌ ಸಿಂಗ್‌ರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ವರದಿ ಮಾಡಿದ್ದರು. ಅಲ್ಲದೆ, ಈ ಎನ್‌ಕೌಂಟರ್‌ ವೇಳೆ ಒಂದು ಎಕೆ - 47 ಹಾಗೂ ಒಂದು ಪಿಸ್ತೂಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿತ್ತು

ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರ ರಾಜಧಾನಿಯಲ್ಲಿ ಹೇಳಿಕೆ ನೀಡಿದ್ದ ಭಗವಂತ್‌ ಮಾನ್‌, ಆಮ್‌ ಆದ್ಮಿ ಪಕ್ಷ ನೇತೃತ್ವದ ಪಂಜಾಬ್‌ ಸರ್ಕಾರ ಗ್ಯಾಂಗ್‌ಸ್ಟರ್‌ಗಳು ಹಾಗೂ ಸಮಾಜ ವಿರೋಧಿ ಅಂಶಗಳ ವಿರುದ್ಧ ಯುದ್ಧ ಸಾರುತ್ತಿದೆ ಎಂದಿದ್ದರು. 

ಇನ್ನೊಂದೆಡೆ, ಜುಲೈ 7ರಂದು ಪಂಜಾಬ್‌ ಸಿಎಂ ಭಗವಂತ್ ಮಾನ್‌ ಡಾ. ಗುರ್‌ಪ್ರೀತ್‌ ಕೌರ್‌ರನ್ನು ವಿವಾಹವಾಗಿದ್ದರು. ಸಿಖ್‌ ಸಂಪ್ರದಾಯದಂತೆ ನಡೆದ ಈ ಸರಳ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆಯಾದ ಭಗವಂತ್‌ ಮಾನ್‌ ಅವರ ನಡೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. 

ಪಂಜಾಬ್‌ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಎಪಿ ಅಧಕಾರ ಹಿಡಿದಿದೆ. 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ ರಾಜ್ಯದಲ್ಲಿ ಈ ವರ್ಷ ನಡೆದ ಚುನಾವಣೆಯಲ್ಲಿ ಎಎಪಿ ಭರ್ಜರಿ ಬಹುಮತ ಗಳಿಸಿತ್ತು.

117 ಕ್ಷೇತ್ರಗಳ ಪೈಕಿ 92 ಸೀಟುಗಳನ್ನು ಆಪ್‌ ವಶಪಡಿಸಿಕೊಂಡಿದ್ದರೆ, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕೇವಲ 18 ಸ್ಥಾನಗಳಿಗೆ ಕುಸಿದಿತ್ತು. ಬಳಿಕ ಮಾರ್ಚ್‌ 16ರಂದು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಭಗವಂತ್‌ ಮಾನ್‌ ಪ್ರಮಾಣ ವಚನ ಸ್ವೀಕರಿಸಿದ್ದರು. 

ಅಲ್ಲದೆ, ಸಿಎಂ ಆಗುವ ಮುನ್ನ ಅವರು ಎರಡು ಬಾರಿ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇಂದಿನಿಂದ ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ

ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಗಿದ್ದ ಭಗವಂತ್‌ ಮಾನ್‌
ಪಂಜಾಬ್‌ ಸಿಎಂ ಭಗವಂತ್‌ ಮಾನ್‌ 2011ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದು, ಅದಕ್ಕೂ ಮುನ್ನ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಗಿಯೂ ಹೆಸರುವಾಸಿಯಾಗಿದ್ದರು. 

ಅಲ್ಲದೆ, 2014ರಲ್ಲಿ ಅರವಿಂದ್ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಸೇರಿದ್ದ ಭಗವಂತ್ ಮಾನ್‌ ಬಳಿಕ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. 2014 ಹಾಗೂ 2019ರಲ್ಲಿ - ಹೀಗೆ ಎರಡು ಬಾರಿ ಪಂಜಾಬ್‌ನ ಸಂಗ್ರೂರ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಗೆದ್ದು ಅವರು ಸಂಸದರಾಗಿದ್ದರು. 

Follow Us:
Download App:
  • android
  • ios