Asianet Suvarna News Asianet Suvarna News

ವಿಪಕ್ಷ ಕೂಡಿ ಹಾಕಲು ಸ್ಪೀಕರ್‌ಗೆ ಬೀಗ ಕೊಟ್ಟ ಪಂಜಾಬ್‌ ಸಿಎಂ

ಚರ್ಚೆ ನಡೆಯುವಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿಬಿಡುತ್ತಾರೆ, ಹೀಗಾಗಿ ಅವರ್‍ಯಾರೂ ಹೊರಗೆ ಹೋಗದಂತೆ ಸದನದ ಒಳಗಿನಿಂದ ಬೀಗ ಹಾಕಿ ಎಂದು ಸ್ಪೀಕರ್‌ ಅವರಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಬೀಗದ ಕೀಲಿ ನೀಡಿದ ಘಟನೆ ಸೋಮವಾರ ನಡೆದಿದೆ.

Punjab CM Bhagwant Mann gave lock to the speaker to control opposition party akb
Author
First Published Mar 5, 2024, 10:39 AM IST

ಪಿಟಿಐ ಚಂಡೀಗಢ: ಚರ್ಚೆ ನಡೆಯುವಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿಬಿಡುತ್ತಾರೆ, ಹೀಗಾಗಿ ಅವರ್‍ಯಾರೂ ಹೊರಗೆ ಹೋಗದಂತೆ ಸದನದ ಒಳಗಿನಿಂದ ಬೀಗ ಹಾಕಿ ಎಂದು ಸ್ಪೀಕರ್‌ ಅವರಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಬೀಗದ ಕೀಲಿ ನೀಡಿದ ಘಟನೆ ಸೋಮವಾರ ನಡೆದಿದೆ. ಇದು ವಿಧಾನಸಭೆ ಅಧಿವೇಶನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಮಾ.1ರಂದು ಪಂಜಾಬ್‌ ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಭಾಷಣ ಮಾಡುವ ವೇಳೆ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದ್ದರು. ರಾಜ್ಯಪಾಲರು ಪೂರ್ಣವಾಗಿ ಭಾಷಣ ಓದದೆ ಮಂಡಿಸಲಾಗಿದೆ ಎಂದು ಹೇಳಿದ್ದರು. ವಿಪಕ್ಷಗಳ ಈ ವರ್ತನೆ ಬಗ್ಗೆ ಚರ್ಚೆ ಆಗಬೇಕು ಎಂದು ಮುಖ್ಯಮಂತ್ರಿ ಸೋಮವಾರ ಆಗ್ರಹಿಸಿದರು. ಅದಕ್ಕೆ ಮನ್ನಣೆ ನೀಡಿದ ಸ್ಪೀಕರ್‌ ಕುಲ್ತಾರ್‌ ಸಿಂಗ್‌ ಸಂಧ್ವಾನ್‌ ಅವರು, ಸದನದ ಆರಂಭದಲ್ಲಿ ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯನ್ನು ರದ್ದುಗೊಳಿಸಿ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಸಂಪ್ರದಾಯ ಉಲ್ಲಂಘಿಸಿದರು.

ಪಂಜಾಬ್ ಸಿಎಂ ಆಗಿ ಮರ್ಯಾಮ್ ಆಯ್ಕೆ,ಪಾಕಿಸ್ತಾನದ ಮೊದಲ ಮಹಿಳಾ ಮುಖ್ಯಮಂತ್ರಿ ಹೆಗ್ಗಳಿಕೆ!

ಈ ವೇಳೆ ಸ್ಪೀಕರ್‌ ಅವರಿಗೆ ಲಕೋಟೆಯಲ್ಲಿ ಬೀಗ ಹಾಗೂ ಕೀಲಿಯನ್ನು ಹಸ್ತಾಂತರಿಸಿದ ಭಗವಂತ ಮಾನ್, ಚರ್ಚೆ ಆರಂಭವಾದರೆ ವಿಪಕ್ಷಗಳು ಸಭಾತ್ಯಾಗ ಮಾಡಿಬಿಡುತ್ತವೆ. ಅವರು ಹೊರಹೋಗದಂತೆ ಬೀಗ ಜಡಿಯಿರಿ ಎಂದು ಮನವಿ ಮಾಡಿದರು. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿ ಕೋಲಾಹಲ ಉಂಟಾಯಿತು. ಬಳಿಕ ಸ್ಪೀಕರ್‌ ಕಲಾಪವನ್ನು ಮುಂದೂಡಿದರು. ಇದಾದ ಬಳಿಕವೂ ಆಪ್‌ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಜೈಲಿನಲ್ಲಿರುವ ಬಿಷ್ಣೋಯ್‌ನನ್ನು ಪಂಜಾಬ್ ಸಿಎಂ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್!

Follow Us:
Download App:
  • android
  • ios