ಜೈಲಿನಲ್ಲಿರುವ ಬಿಷ್ಣೋಯ್‌ನನ್ನು ಪಂಜಾಬ್ ಸಿಎಂ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್!
ಕೆನಾಡದಲ್ಲಿನ ಖಲಿಸ್ತಾನಿ ಉಗ್ರ ಸುಖ್‌ದೋಲ್ ಸಿಂಗ್ ಹತ್ಯೆ ಹೊಣೆಹೊತ್ತು ಕೊಂಡಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದಾರೆ. ಹತ್ಯೆಗೂ ಮೊದಲು ನೀಡಿರುವ ಒಂದು ಹೇಳಿಕೆಯಿಂದ ಭಾರಿ ಸಂಚಲನ ಸೃಷ್ಟಿಯಾಗಿದೆ. ಇದೀಗ ಬಿಷ್ಣೋಯ್‌ನನ್ನು ಪಂಜಾಬ್ ಮುಖ್ಯಮಂತ್ರಿ ಮಾಡಿ ಎಂಬ ಕೂಗು ಕೇಳಿಬರುತ್ತಿದೆ.
ನವದೆಹಲಿ(ಸೆ.21) ಖಲಿಸ್ತಾನಿ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಉಗ್ರರಿಗೆ ಜೀವಬೆದರಿಕೆ ಆರಂಭಗೊಂಡಿದೆ. ಕಾರಣ ನಿನ್ನೆ ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಸುಖ್‌ದೋಲ್ ಸಿಂಗ್ ಅಲಿಯಾಸ್ ಸುಖಾ ದುಕೆನೆ ಹತ್ಯೆಯನ್ನು ನಾನೇ ಮಾಡಿಸಿದ್ದೇನೆ ಎಂದು ಭಾರತದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿದರೆ ಖಲಿಸ್ತಾನ ಉಗ್ರರು ಕುಳಿತಲ್ಲೇ ಬೆವರುತ್ತಾರೆ. ಇದೀಗ ಕೆನಡಾದಲ್ಲಿ ಸುಖ್ ದುಕೆನೆ ಹತ್ಯೆ ಹೊಣೆಹೊತ್ತು ಕೊಂಡ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಖಲಿಸ್ತಾನಿಗಳಿಗೆ ಅಪ್ಪ ಎಂದು ಹಲವರು ಕಮೆಂಟ್ ಮಾಡಿದ್ದರೆ, ಪಂಜಾಬ್‌ನ ಮುಖ್ಯಮಂತ್ರಿ ಮಾಡಿದರೆ ಕೆಲವೇ ತಿಂಗಳಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನಿ ಹೋರಾಟ, ಗ್ಯಾಂಗ್‌ವಾರ್ ಅಂತ್ಯಗೊಳ್ಳಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಿಷ್ಣೋಯ್‌ನನ್ನು ಪಂಜಾಬ್ ಮುಖ್ಯಮಂತ್ರಿ ಮಾಡಿ ಟ್ರೆಂಡ್ ಸೃಷ್ಟಿಯಾಗಲು ಈತ ನೀಡಿದ ಹೇಳಿಕೆಯೂ ಕಾರಣವಾಗಿದೆ.
ಲಾರೆನ್ಸ್ ಬಿಷ್ಣೋಯ್ ನೀಡಿದ ಒಂದು ಹೇಳಿಕೆ ಇದೀಗ ಇಡೀ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದೆ. ಇಷ್ಟು ದಿನ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಮುಗಿಬೀಳುತ್ತಿದ್ದ ಹಲವರು ಪಂಜಾಬ್ ಮುಖ್ಯಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ನನ್ನನ್ನು ಗ್ಯಾಂಗ್‌ಸ್ಟರ್, ಭಯೋತ್ಪಾದಕ ಎಂದು ಕರೆಯಬೇಡಿ. ನಾನು ದೇಶದ ವಿರುದ್ದ ಯಾವತ್ತೂ ಕೆಲಸ ಮಾಡಲ್ಲ. ಆದರೆ ದೇಶದ ವಿರೋಧಿಗಳನ್ನು ಯಾವತ್ತೂ ಬಿಡುವುದಿಲ್ಲ. ನಾನು ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ.
ಕೆನಾಡ ಖಲಿಸ್ತಾನಿ ಉಗ್ರ ಸುಖಾ ಹತ್ಯೆ ಹೊಣೆಹೊತ್ತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್!
ದೇಶವನ್ನು ಇಬ್ಬಾಗ ಮಾಡಲು ನಾನು ಬಿಡುವಿದಿಲ್ಲ. ಇದಕ್ಕೆ ನನ್ನ ಸಹಮತವಿಲ್ಲ. ನನ್ನ ಹೋರಾಟ ನಮ್ಮ ಹುಡುಗರು, ನಮ್ಮ ಗ್ಯಾಂಗ್ ಮೇಲೆ ಮುಗಿಬೀಳುವವರ ವಿರುದ್ಧವೇ ಹೊರತು ದೇಶದ ವಿರುದ್ಧ ಅಲ್ಲ. ನನ್ನ ಗ್ಯಾಂಗ್ ವಿರುದ್ಧ ನಿಂತವರ ಕತೆ ಮುಗಿಸುತ್ತೇನೆ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ನಿವೃತ್ತ ಮೇಜರ್ ಗೌರವ್ ಆರ್ಯ ನೀಡಿದ ಹೇಳಿಕೆಯೂ ವೈರಲ್ ಆಗಿದೆ.
ಯುಕೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಖಲಿಸ್ತಾನಿಗಳು ಹೆಜ್ಜೆ ಹೆಜ್ಜೆಗೂ ಭಾರತದ ವಿರುದ್ಧ ಧಿಕ್ಕಾರ, ಖಲಿಸ್ತಾನಿ ಬಾವುಟ ಹಿಡಿದು ಪ್ರತಿಭಟನೆ ಘೋಷಣೆ ಮಾಡುತ್ತಿದ್ದಾರಲ್ಲ, ಅವರನ್ನು ಸ್ವಲ್ಪ ನೋಡಿಕೊಳ್ಳಿ ಎಂದು ಲಾರೆನ್ಸ್ ಬಿಷ್ಣೋಯ್‌ಗೆ ಹೇಳಿದರೆ ಸಾಕು. ವಿದೇಶದಲ್ಲಿ, ಪಂಜಾಬ್‌ನಲ್ಲಿ ಖಲಿಸ್ತಾನಿಗಳ ಸದ್ದಡಗಲಿದೆ. ಲಾರೆನ್ಸ್ ಬಿಷ್ಣೋಯ್ ಅಂದರೆ ಖಲಿಸ್ತಾನಿಗಳು ಬಿಲದೊಳಗೆ ಅವಿತುಕೊಳ್ಳುತ್ತಾರೆ.ಖಲಿಸ್ತಾನಿಗಳ ದಾಳಿ ಮಾತು ಬಿಡಿ ಬಿಲದಿಂದ ಹೊರಗೆ ಬರಲ್ಲ ಎಂದು ಗೌರವ್ ಆರ್ಯ ಹೇಳಿದ್ದರು. ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.
ಕೆನಾಡದಲ್ಲಿನ ಖಲಿಸ್ತಾನಿ ಉಗ್ರ ಸುಖಾ ದುನೆಕೆ ಹತ್ಯೆ, ಬಿಗಡಾಯಿಸಿದ ಸಂಬಂಧ!
ಅಹಮ್ಮದಾಬಾದ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್, ಸಿಂಗರ್ ಸಿಧು ಮೂಸೆವಾಲ ಹತ್ಯೆಯಲ್ಲೂ ಆರೋಪಿಯಾಗಿದ್ದಾನೆ. ಈ ಪ್ರಕರಣಗಳ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ.