Asianet Suvarna News Asianet Suvarna News

Punjab Elections: ಗೆಲುವಿನ ಕನಸು ಹೊತ್ತಿದ್ದ ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಕೇಜ್ರೀವಾಲ್‌!

* ಪಂಜಾಬ್ ಚುನಾವಣೆಯ ಮತದಾನಕ್ಕೆ ನಾಲ್ಕು ದಿನ

* ಗೆಲುವಿನ ಕನಸು ಹೊತ್ತಿದ್ದ ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಕೇಜ್ರೀವಾಲ್‌

 * ಅಮೃತಸರ ಮೇಯರ್ ಕರ್ಮಜಿತ್ ಸಿಂಗ್ ರಿಂತು ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷಕ್ಕೆ

Punjab assembly polls Amritsar mayor Karamjit Singh Rintu joins Aam Aadmi Party pod
Author
Bangalore, First Published Feb 16, 2022, 1:37 PM IST | Last Updated Feb 16, 2022, 2:27 PM IST

ಚಂಡೀಗಢ(ಫೆ.16): ಪಂಜಾಬ್ ಚುನಾವಣೆಯ ಮತದಾನಕ್ಕೆ ನಾಲ್ಕು ದಿನಗಳ ಮೊದಲು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಅನುಭವಿಸಿದೆ. ಅಮೃತಸರ ಮೇಯರ್ ಕರ್ಮಜಿತ್ ಸಿಂಗ್ ರಿಂತು ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಿಂಟು ಅವರನ್ನು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಮೃತಸರದಲ್ಲಿ ಮತದಾನ ಮಾಡುವ ಮುನ್ನ ಮೇಯರ್ ಎಎಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ನಷ್ಟ ಎಂದು ಪರಿಗಣಿಸಲಾಗಿದೆ.

ಮೇಯರ್ ರಿಂಟು ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಟ್ಟಿಗೆದ್ದಿದ್ದರು. ಅಮೃತಸರದಿಂದ ಟಿಕೆಟ್ ಸಿಗದ ಕಾರಣ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಇದುವರೆಗೂ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ, ಅವರು ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಹೊಡೆತ ನೀಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.

ಅಮೃತಸರ ಉತ್ತರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರೂ ಪಕ್ಷ ಎರಡು ಬಾರಿ ನೀಡಿರಲಿಲ್ಲ

ಕರ್ಮ್ಜಿತ್ ಸಿಂಗ್ ರಿಂಟು ಅಮೃತಸರ ಉತ್ತರದ ಪ್ರಮುಖ ನಾಯಕರಲ್ಲೊಬ್ಬರು. 2012 ರ ಚುನಾವಣೆಯಲ್ಲಿ, ಅನಿಲ್ ಜೋಶಿ ವಿರುದ್ಧ ಅಮೃತಸರ ಉತ್ತರದಿಂದ ಕರ್ಮ್ಜಿತ್ ಸಿಂಗ್ ರಿಂಟು ಅವರಿಗೆ ಟಿಕೆಟ್ ನೀಡಲಾಯಿತು. ಆದರೆ, ನಂತರ ಅನಿಲ್ ಜೋಶಿ ಮೇಯರ್ ರಿಂಟು ಅವರನ್ನು ಸೋಲಿಸಿದರು. ಬಳಿಕ ಜೋಶಿ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. 2017ರಲ್ಲಿ ರಿಂಟು ಮತ್ತೆ ಉತ್ತರದಿಂದ ಟಿಕೆಟ್ ಕೇಳಿದ್ದರು. ಆದರೆ, ಪಕ್ಷ ಅವರನ್ನು ನಿರಾಕರಿಸಿ ಸುನೀಲ್ ದತ್ತಿಗೆ ಟಿಕೆಟ್ ನೀಡಿದೆ. ಈಗ 2022 ರ ಚುನಾವಣೆಯಲ್ಲೂ ರಿಂಟು ಅಮೃತಸರ ಉತ್ತರದಿಂದ ಟಿಕೆಟ್ ಬಯಸಿದ್ದರು. ಈ ಬಾರಿಯೂ ಪಕ್ಷ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ಅಂದಿನಿಂದ ರಿಂಟು ಕಾಂಗ್ರೆಸ್ ವಿರುದ್ಧ ಹೋಗಲು ಮನಸ್ಸು ಮಾಡಿದ್ದಾರರೆ. ಟಿಕೆಟ್ ಘೋಷಣೆಯಾದಾಗಿನಿಂದಲೂ ರಿಂಟು ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು.

ಸೀಟು ಬಿಡಲು ರಿಂಟೂರನ್ನು ಮೇಯರ್ ಮಾಡಿಸಿದ್ದರು

2017 ರ ಚುನಾವಣೆಯಲ್ಲಿ ಅಮೃತಸರ ಉತ್ತರ ಸ್ಥಾನವನ್ನು ಬಿಟ್ಟುಕೊಡಲು ರಿಂಟು ಅವರಿಗೆ ಅಮೃತಸರ ಮೇಯರ್ ಹುದ್ದೆಯನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ನೀಡಿದ್ದರು. ಈ ವರ್ಷ, ಅವರು 2022 ರಲ್ಲಿ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿತ್ತು, ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯದ ನಂತರ ಪರಿಸ್ಥಿತಿ ಮತ್ತೆ ಬದಲಾಯಿತು. ಕ್ಯಾಪ್ಟನ್‌ಗೆ ಆಪ್ತರಾಗಿದ್ದ ಅವರು ಸಿಧು ಜೊತೆ ಅಷ್ಟಾಗಿ ಸಂಬಂಧ ಹೊಂದಿರಲಿಲ್ಲ.

ಪಂಜಾಬ್ ಸಿಎಂ ಆಗ್ತೇನೆ, ಇಲ್ಲವೇ ಸ್ವತಂತ್ರ ದೇಶದ ಪಿಎಂ ಆಗ್ತೇನೆ, ಕೇಜ್ರೀವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪ!

 

ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆಗೆ ಮತದಾನ ನಡೆಯಲಿದೆ. ಚುನಾವಣೆಯ ಭರದಲ್ಲಿ ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಮೀರಿ ಮತದಾರರನ್ನು ಓಲೈಸಲು ಯತ್ನಿಸುತ್ತಿವೆ. ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಈ ಬಾರಿ ಪಂಜಾಬ್‌ನ ಗದ್ದುಗೆಗಾಗಿ ಅದೃಷ್ಟ ಪರೀಕ್ಷೆಗಿಳಿದಿದೆ. ಇದೇ ವೇಳೆ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಹಾಗೂ ಕವಿ ಡಾ.ಕುಮಾರ್ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ನಿರಂತರ ಪ್ರತ್ಯೇಕತಾವಾದದ ನೆರವಿನಿಂದ ಪಂಜಾಬ್ ಮುಖ್ಯಮಂತ್ರಿಯಾಗಲು ಆ ವ್ಯಕ್ತಿ ಬಯಸಿದ್ದರು ಎಂದು ಕೇಜ್ರಿವಾಲ್ ಹೆಸರಿಸದೆ ವಿಶ್ವಾಸ್ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ವಿಶ್ವಾಸ್, ಪಂಜಾಬ್ ಒಂದು ರಾಜ್ಯವಲ್ಲ, ಆದರೆ ಭಾವನೆ ಎಂದು ನಾನು ಯಾವಾಗಲೂ ನಂಬಿದ್ದೇನೆ ಎಂದು ಹೇಳಿದರು. ಪಂಜಾಬಿಯಾತ್ ಒಂದು ಭಾವನೆ. ಇಂತಹ ಪರಿಸ್ಥಿತಿಯಲ್ಲಿ ಇಂತಹ ವ್ಯಕ್ತಿ ಪ್ರತ್ಯೇಕತಾವಾದಿ ಸಂಘಟನೆಗಳ, ಖಲಿಸ್ತಾನಿ ಬೆಂಬಲಿಗರ ಪರ ನಿಲ್ಲುತ್ತಿದ್ದ ಎಂದು ಕಿಡಿ ಕಾರಿದ್ದಾರೆ.

ದೇಶದ ಖ್ಯಾತ ಕವಿ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಬುಧವಾರ ದೆಹಲಿ ಮುಖ್ಯಮಂತ್ರಿ ಮತ್ತು ಅವರ ಮಾಜಿ ಸಹೋದ್ಯೋಗಿ ಅರವಿಂದ್ ಕೇಜ್ರಿವಾಲ್ ಮೇಲೆ ದೊಡ್ಡ ಆರೋಪ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿಗಳ ಬೆಂಬಲಿಗರಾಗಿದ್ದಾರೆ ಎಂದು ಅವರು ಹೇಳಿದರು. ಹಿಂದೊಮ್ಮೆ ಅವರು ತನ್ನ ಬಳಿ ನಾನು ಒಂದೋ ಪಂಜಾಬ್‌ನ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ಮೊದಲ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.

#WATCH | Poet & former AAP leader Kumar Vishwas alleges AAP chief Arvind Kejriwal was supportive of separatists in Punjab

"One day, he told me he would either become CM (of Punjab) or first PM of an independent nation (Khalistan)," Vishwas says. pic.twitter.com/5ccGs9jNn3

— ANI (@ANI) February 16, 2022

ಪ್ರತ್ಯೇಕತಾವಾದಿಗಳ ಸಹಾಯ ಪಡೆಯಲು ಕೇಜ್ರಿವಾಲ್‌ಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಪಂಜಾಬ್ ಒಂದು ರಾಜ್ಯವಲ್ಲ. ಪಂಜಾಬ್ ಒಂದು ಭಾವನೆ. ಪಂಜಾಬಿಗರು ಎಂಬುವುದು ಪ್ರಪಂಚದಾದ್ಯಂತ ಒಂದು ಭಾವನೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದ್ದೆ. ಆಗ ಅವರು ಇಲ್ಲ-ಇಲ್ಲ ನಡೆಯುವುದಿಲ್ಲ ಎಂದು ಹೇಳಿದ್ದರು ಎಂದಿದ್ದಾರೆ.

ಈ ಸೂತ್ರವನ್ನು ಹೇಳಿದ್ದ ಕೇಜ್ರೀವಾಲ್

ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗುವ ಸೂತ್ರವನ್ನೂ ಹೇಳಿದ್ದರು ಎಂದು ಕಿಡಿಕಾರಿದರು. ಆಗ ಕೇಜ್ರಿವಾಲ್ ಅವರು ಭಗವಂತ್ ಮಾನ್ ಮತ್ತು ಎಚ್‌ಎಸ್ ಫೂಲ್ಕಾ ಅವರು ಜಗಳವಾಡುವಂತೆ ಮಾಡುತ್ತೇನೆ, ಬಳಿಕ ನಾನು ಅಲ್ಲಿಗೆ ತಲುಪುತ್ತೇನೆ ಎಂದು ಹೇಳಿದ್ದರು. ಇಂದಿಗೂ ಅವರು ಅದೇ ಹಾದಿಯಲ್ಲಿದ್ದಾರೆ. ನೀವು ಚಿಂತಿಸಬೇಡಿ, ಮುಂದೊಂದು ದಿನ ನಾನು ಸ್ವತಂತ್ರ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೇಜ್ರಿವಾಲ್ ಒಂದು ದಿನ ಹೇಳಿದ್ದರು. ನಾನು ಪ್ರತ್ಯೇಕತಾವಾದದ ಬಗ್ಗೆ ಎಚ್ಚರಿಸಿದ್ದಾಗ, ಹಾಗಾದರೆ, ನಾನು ಸ್ವತಂತ್ರ ದೇಶದ ಪ್ರಧಾನಿಯಾಗುತ್ತೇನೆ" ಎಂದು ಅವರು ಹೇಳಿದ್ದರು ಎಂದು ಆರೋಪಿಸಿದ್ದಾರೆ. 

Latest Videos
Follow Us:
Download App:
  • android
  • ios