ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಮಾತು ಕೇಳಿ ಬರುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ಕೆಫೆ ಶಾಪ್ನ ಶೌಚಾಲಯದಲ್ಲಿ ಗೌಪ್ಯವಾಗಿ ಅಳವಡಿಸಲಾದ ಕ್ಯಾಮರಾವನ್ನು ಮಹಿಳೆಯೋರ್ವಳು ಪತ್ತೆ ಹಚ್ಚಿದ್ದಾಳೆ.

ಇದನ್ನು ತನ್ನ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಸ್ಕ್ರೀನ್‌ಶಾಟ್ ತೆಗೆದು ಶೇರ್ ಮಾಡಿದ್ದಾಳೆ. ಶೌಚಾಲಯದಲ್ಲಿ ಅಳವಡಿಸಿದ್ದ ಕ್ಯಾಮರಾದ ಬಗ್ಗೆ ಕೆಫೆ ಶಾಪ್ ಆಡಳಿತ ಮಂಡಳಿ, ಸಿಬ್ಬಂದಿಗೆ ಗಮನಕ್ಕೆ ತಂದಾಗ, ಮಹಿಳೆ ಮತ್ತು ಅವಳ ಸ್ನೇಹಿತನನ್ನು ಹೊಟೇಲ್‌ನಿಂದ ೧೦ ನಿಮಿಷ ಹೊರನಿಲ್ಲಿಸಿ, ಬಳಿಕ ಕ್ಯಾಮರಾವನ್ನು ಅಲ್ಲಿಂದ ಮಾಯ ಮಾಡಿದ್ದಾರೆ.

ಅಷ್ಟರಲ್ಲಾಗಲೇ ಫೋಟೋ ತೆಗೆ\ದಿದ್ದ ಮಹಿಳೆ ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಗೌಪ್ಯ ಕ್ಯಾಮೆರಾ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.