ಕಾಂಡೋಮ್ ಆರ್ಡರ್‌ನಲ್ಲಿ ಬೆಂಗಳೂರು ನಂ.1, ರಾತ್ರಿ 10 ರಿಂದ 11ರ ಹೊತ್ತಲ್ಲೇ ಹೆಚ್ಚು ಬೇಡಿಕೆ!
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಈ ವರ್ಷದ ಕೆಲ ಆರ್ಡರ್ ಅಂಕಿ ಅಂಶ ಬಹಿರಂಗಪಡಿಸಿದೆ. ಈ ಪೈಕಿ ಬೆಂಗಳೂರು ಕಾಂಡೋಮ್ ಆರ್ಡರ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ರಾತ್ರಿ 10 ರಿಂದ 11 ಗಂಟೆಯ ಆರ್ಡರ್‌ನಲ್ಲಿ ಕಾಂಡೋಮ್ ಸಂಖ್ಯೆ ಹೆಚ್ಚು ಎಂದು ಸ್ವಿಗ್ಗಿ ಹೇಳಿದೆ. ಈ ಅಂಕಿ ಅಂಶದಲ್ಲಿ ಹಲವು ಕುತೂಹಲ ಮಾಹಿತಿ ಬಹಿರಂಗವಾಗಿದೆ.
ನವದೆಹಲಿ(ಡಿ.29) ಹೊಸ ವರ್ಷಕ್ಕೆ ಇನ್ನು ಕೆಲವೇ ದಿನ ಮಾತ್ರ. 2024ಕ್ಕೆ ಗುಡ್ ಬೈ ಹೇಳಲು ಎಲ್ಲರು ಸಜ್ಜಾಗಿದ್ದಾರೆ. ಇದರ ನಡುವೆ 2024ರ ಸಾಲಿನ ಕೆಲ ಅಂಕಿ ಅಂಶಗಳು ಬಹಿರಂಗವಾಗಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್ ಮೂಲಕ ಯಾವ ಆಹಾರಕ್ಕೆ ಹೆಚ್ಚು ಬೇಡಿಕೆ ಇತ್ತು? ಯಾವ ವಸ್ತುಗಳು ಹೆಚ್ಚು ಆರ್ಡರ್ ಮಾಡಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಪೈಕಿ ಕಾಂಡೋಮ್ ಆರ್ಡರ್‌ನಲ್ಲಿ ದೇಶದ ಇತರ ನಗರಗಳ ಹಿಂದಿಕ್ಕಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹೇಳಿದೆ.
2024ರಲ್ಲಿ ಬೆಂಗಳೂರು ಅತೀ ಹೆಚ್ಚು ಕಾಂಡೋಮ್ ಆರ್ಡರ್ ಮಾಡಿದ ನಗರ. ವಿಶೇಷ ಅಂದರೆ ರಾತ್ರಿ 10 ರಿಂದ 11 ಗಂಟೆ ಸಮಯದಲ್ಲಿ ಹಲವು ಫ್ಲೇವರ್ ಕಾಂಡೋಮ್ ಬೇಡಿಕೆ ಹೆಚ್ಚು ಎಂದು ಸ್ವಿಗ್ಗಿ ಹೇಳುತ್ತಿದೆ. ರಾತ್ರಿ ಸಮಯದಲ್ಲಿ ಮಸಾಲೆ ಚಿಪ್ಸ್, ಕುರುಕುರೆ ಹಾಗೂ ಕಾಂಡೋಮ್ ಈ ಮೂರು ವಸ್ತುಗಳು ಹೆಚ್ಚು ಆರ್ಡರ್ ಆಗಿವೆ. ಈ ಪೈಕಿ ಕಾಂಡೋಮ್ ಹೆಚ್ಚು ಆರ್ಡರ್ ಮಾಡಿರುವುದು ಬೆಂಗಳೂರು ಎಂದು ಸ್ವಿಗ್ಗಿ ಅಂಕಿ ಅಂಶ ಹೇಳುತ್ತಿದೆ.
ಕಣ್ಣಾಲಿ ತೇವಗೊಳಿಸಿದ ಜೊಮ್ಯಾಟೋ ಡೆಲಿವರಿ ಬಾಯ್ ಬದುಕು, ಏನಾಯ್ತು ರಾತ್ರಿ 3 ಗಂಟೆಗೆ?
ಸ್ವಿಗ್ಗಿಯ 140 ಆರ್ಡರ್ ಪೈಕಿ ಒಂದು ಕಾಂಡೋಮ್ ಆಗಿರುತ್ತದೆ ಎಂದಿದೆ. ಅಷ್ಟರಮಟ್ಟಿಗೆ ಜನರು ಕಾಂಡೋಮ್ ಆರ್ಡರ್ ಮಾಡಿದ್ದಾರೆ. ಬೆಂಗಳೂರು ಬಳಿಕ ದೆಹಲಿ, ಹೈದರಾಬಾದ್ ಕೂಡ ಕಾಂಡೋಮ್ ಸೇರಿದಂತೆ ರಾತ್ರಿ ವೇಳೆಯ ಆರ್ಡರ್‌ನಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಬೆಂಗಳೂರು ಜನ ಹೆಚ್ಚು ಸುರಕ್ಷತೆ ಕಾಳಜಿ ಹೊಂದಿದ್ದಾರೆ ಎಂದು ಹಲವು ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ದೆಹಲಿ ಹಾಗೂ ಡೆಹ್ರಡೂನ್ ಅತೀ ಹೆಚ್ಚು ವಸ್ತುಗಳನ್ನು ಆರ್ಡರ್ ಮಾಡಿದೆ. ಈ ಎರಡು ನಗರಗಳು ಗೋಧಿ ಹಿಟ್ಟು, ಹಾಲು, ಮೊಸರು, ಅಡುಗೆ ಎಣ್ಣೆ ಸೇರಿದಂತೆ ಅಡುಗೆ ಪದಾರ್ಥಗಳನ್ನು ಹೆಚ್ಚು ಆರ್ಡರ್ ಮಾಡಿದೆ. ವಿಶೇಷ ಅಂದರೆ ಬರೋಬ್ಬರಿ 20 ಲಕ್ಷ ರೂಪಾಯಿ ಮೊತ್ತದಷ್ಟು ಅಡುಗೆ ವಸ್ತುಗಳನ್ನು ದೆಹಲಿ ಹಾಗೂ ಡೆಹ್ರಡೂನ್ ಮಾಡಿದೆ. ಇನ್ನು ಈ ವರ್ಷ ಆರ್ಡರ್ ಮಾಡಿದ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಆರ್ಡರ್ ವಸ್ತುಗಳ ಪೈಕಿ ಹಾಲು, ಮೊಸರು, ದೋಸಾ ಬ್ಯಾಟರ್, ಚಿಪಿಸ್ ಹಾಗೂ ಸಾಫ್ಟ್ ಡ್ರಿಂಕ್ಸ್.
ಮುಂಬೈ ನಿವಾಸಿಗಳು ಈ ವರ್ಷ 15,00,000 ರೂಪಾಯಿ ಮೌಲ್ಯದ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳ ಆಹಾರ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ. ಡಿಸೆಂಬರ್ 1 ರ ಸಂಜೆ 7 ರಿಂದ 8 ಗಂಟೆ ಅಂದರೆ ಒಂದು ಗಂಟೆಯಲ್ಲಿ 4,500 ಕೆಜಿ ಈರುಳ್ಳಿ ಆರ್ಡರ್ ಆಗಿದೆ. ಅತೀ ವೇಗವಾಗಿ ಡೆಲಿವರಿ ಮಾಡಿದ ಹೆಗ್ಗಳಿಗೆ ಕೊಚ್ಚಿ ಪಾತ್ರವಾಗಿದೆ. ಕೊಚ್ಚಿಯಲ್ಲಿ ಒಂದು ಡೆಲಿವರಿಯನ್ನು ಆರ್ಡರ್ ಮಾಡಿದ ಕೇವಲ 89 ಸೆಕೆಂಡ್‌ನಲ್ಲಿ ವಿತರಣೆ ಮಾಡಲಾಗಿದೆ. ಇನ್ನು ಅತೀ ಕಡಿಮೆ ಮೌಲ್ಯದ ಆರ್ಡರ್ ವರ್ಷದಲ್ಲಿ 3 ರೂಪಾಯಿ ಪೆನ್ಸಿಲ್ ಎಂದು ಸ್ವಿಗ್ಗಿ ಹೇಳಿದೆ.
ನೀನು ಮತ್ತು ನಾನು, ಸ್ವಿಗ್ಗಿ ಷೇರುಪೇಟೆ ಪ್ರವೇಶವನ್ನು ವಿನೂತನವಾಗಿ ಸ್ವಾಗತಿಸಿದ ಜೊಮ್ಯಾಟೋ!
ಅಹಮ್ಮದಾಬಾದ್‌ನ ವ್ಯಕ್ತಿಯೊಬ್ಬರು ಒಂದೇ ಆರ್ಡರ್ ಮೂಲಕ ಗರಿಷ್ಠ ಮೊತ್ತ ಖರ್ಚು ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದೇ ಆರ್ಡರ್‌ನಲ್ಲಿ 8,32,032 ರೂಪಾಯಿ ಪಾವತಿಸಿದ್ದಾರೆ. ಧಾಂತೆರಸ್ ದಿನದಲ್ಲಿ ಚಿನ್ನದ ನಾಣ್ಯಗಳನ್ನು ಆರ್ಡರ್ ಮಾಡಿದ್ದರು. ಇನ್ನು ಹೈದರಾಬಾದ್ ವ್ಯಕ್ತಿಯೊಬ್ಬರು ಕೇವಲ ಒಂದೇ ತಿಂಗಳಲ್ಲಿ ಮಾವಿನ ಹಣ್ಣು ಖರೀದಿಗೆ ಬರೋಬ್ಬರಿ 35,000 ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹೇಳಿದೆ.