ದೇಶ ಶೋಕಾಚರಣೆಯಲ್ಲಿರುವಾಗ ರಾಹುಲ್ ಗಾಂಧಿ ವಿದೇಶದಲ್ಲಿ ಹೊಸ ವರ್ಷ ಪಾರ್ಟಿ, ಬಿಜೆಪಿ ಆರೋಪ!
ಮನ್‌ಮೋಹನ್ ಸಿಂಗ್ ನಿಧನದಿಂದ ದೇಶ ಶೋಕಾಚಾರಣೆಯಲ್ಲಿದೆ. ಆದರೆ ರಾಹುಲ್ ಗಾಂಧಿ ಹೊಸ ವರ್ಷಾಚರಣೆಗೆ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ನವದೆಹಲಿ(ಡಿ.30) ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ನಿಧನ ದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಅಂತ್ಯಸಂಸ್ಕಾರದಲ್ಲಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ, ಸಿಂಗ್ ಮೆಮೋರಿಯಲ್, ಸಿಖ್ ಸಮುದಾಯಕ್ಕೆ ಅಗೌರವ ಸೇರಿದಂತೆ ಹಲವು ಆರೋಪಗಳನ್ನು ಕಾಂಗ್ರೆಸ್ ಮಾಡಿದೆ. ಮನ್‌ಮೋಹನ್ ಸಿಂಗ್ ನಿಧನದ ಕೆಲವೇ ದಿನದಲ್ಲಿ ರಾಹುಲ್ ಗಾಂಧಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ರಾಹುಲ್ ಗಾಂಧಿ ಹೊಸ ವರ್ಷ ಆಚರೆಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಡೀ ದೇಶ ಮನ್‌ಮೋಹನ್ ಸಿಂಗ್ ಶೋಕಾಚರಣೆಯಲ್ಲಿದೆ. ಆದರೆ ರಾಹುಲ್ ಗಾಂಧಿ ಮಾತ್ರ ಹೊಸ ಪಾರ್ಟಿ ಮೂಡ್‌ನಲ್ಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಡಿಸೆಂಬರ್ 26ರ ರಾತ್ರಿ ಮನ್‌ಮೋಹನ್ ಸಿಂಗ್ ನಿಧರಾಗಿದ್ದರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 27 ಕಾರ್ಯಕ್ರಮ ರದ್ದುಗೊಳಿಸಿದ್ದರು. ಇದೇ ವಿಚಾರವನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಾಲ, ಅಮಿತ್ ಮಾಳವಿಯಾ ಪ್ರಸ್ತಾಪಿಸಿದ್ದಾರೆ. ಮನ್‍ಮೋಹನ್ ಸಿಂಗ್ ನಿಧನದಿಂದ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಆದರೆ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಸ ವರ್ಷ ಆಚರಣೆಗೆ ವಿಯೆಟ್ನಾಂ ಪ್ರವಾಸ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕೇರಳ ಮಿನಿ ಪಾಕಿಸ್ತಾನ, ಅದಕ್ಕೆ ರಾಹುಲ್-ಪ್ರಿಯಾಂಕಾ ಗೆಲ್ತಿದ್ದಾರೆ..' ಮಹಾರಾಷ್ಟ್ರ ಮಂತ್ರಿಯ ವಿವಾದಾತ್ಮಕ ಹೇಳಿಕೆ
ರಾಹುಲ್ ಗಾಂಧಿ ವಿದೇಶ ಪ್ರವಾಸ ವಿಚಾರದಲ್ಲಿ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಆರೋಪ ಪ್ರತ್ಯಾರೋಪ ಆರಂಭಗೊಂಡಿದೆ. ರಾಹುಲ್ ಗಾಂಧಿ ಶೋಕಾಚರಣೆ, ದೇಶದ ಗಂಭೀರ ಸಮಸ್ಯೆಗಳು,ಪ್ರಮುಖ ವಿಚಾರಗಳ ಬರುವಾಗ ವಿದೇಶಕ್ಕೆ ತೆರಳಿ ಪಾರ್ಟಿ ಮಾಡುತ್ತಾರೆ. ಈ ವರ್ಷ ಹೊಸದಲ್ಲ. 2008ರ ಮುಂಬೈ ದಾಳಿ ವೇಳೆ ರಾಹುಲ್ ಗಾಂಧಿ ವಿದೇಶದಲ್ಲಿ ರಾತ್ರಿ ಇಡೀ ಪಾರ್ಟಿ ಮಾಡುತ್ತಿದ್ದರು ಎಂದು ಶೆಹಜಾದ್ ಪೂನವಾಲ ಆರೋಪಿಸಿದ್ದಾರೆ.'
ಇತ್ತ ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಮನ್‌ಮೋಹನ್ ಸಿಂಗ್ ಅಂತ್ಯಸಂಸ್ಕಾರ, ಚಿತಾಭಸ್ಮದ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಿದೆ. ಸಿಖ್ ಸಮುದಾಯಕ್ಕೆ ಅಪಮಾನ ಮಾಡಿದೆ. ಇದೀಗ ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುತ್ತಿರುವ ಕುರಿತು ಆತಂಕ ಪಡುತ್ತಿರುವುದೇಕೆ? ರಾಹುಲ್ ಗಾಂಧಿ ವೈಯುಕ್ತಿತವಾಗಿ ತೆರಳಿದ್ದಾರೆ. ಆದರ ಬಗ್ಗೆ ಬಿಜೆಪಿಗೆ ಯಾಕಿಷ್ಟು ತಳಮಳ ಎಂದು ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್ ತಿರುಗೇಟು ನೀಡಿದ್ದಾರೆ. ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ಆರಂಭಗೊಂಡಿದೆ.