ಮಹಾರಾಷ್ಟ್ರದ ಮಾಜಿ ಆರೋಗ್ಯ ಸಚಿವ ತಾನಾಜಿ ಸಾವಂತ್ ಅವರ ಪುತ್ರ ರಿತುರಾಜ್ ಅವರನ್ನು ಅಪಹರಿಸಲಾಗಿದೆ. ಫೆಬ್ರವರಿ 10 ರಂದು ಸಂಜೆ 5 ಗಂಟೆಗೆ ಕಾರಿನಲ್ಲಿ ಬಂದ ಅಪಹರಣಕಾರರು ರಿತುರಾಜ್‌ನನ್ನು ಅಪಹರಿಸಿದ್ದಾರೆ. ಪುಣೆಯ ಸಿಂಹಗಡ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಸರ್ಕಾರದ ಮಾಜಿ ಆರೋಗ್ಯ ಸಚಿವ ಮತ್ತು ಶಿವಸೇನಾ ಶಾಸಕ ತಾನಾಜಿ ಸಾವಂತ್ ಅವರ ಪುತ್ರ ರಿತುರಾಜ್ ತಾನಾಜಿ ಸಾವಂತ್ ಅವರನ್ನು ಅಪಹರಿಸಿದ ಘಟನೆ ನಡೆದಿದೆ. ಸೋಮವಾರ (ಫೆಬ್ರವರಿ 10) ಸಂಜೆ 5 ಗಂಟೆಗೆ, ಅಪಹರಣಕಾರರು ಕಾರಿನಲ್ಲಿ ಬಂದು ರಿತುರಾಜ್‌ನನ್ನು ಅಪಹರಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ, ಅಪಹರಣ ಪ್ರಕರಣ ಸಂಬಂಧ ಪುಣೆಯ ಸಿಂಹಗಡ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

 ಅಪಹರಣಕಾರರು ರಿತುರಾಜ್ ತಾನಾಜಿ ಸಾವಂತ್ ರನ್ನ ಸ್ವಿಫ್ಟ್ ಕಾರಿನಲ್ಲಿ ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಸಿಂಹಗಢ ರೋಡ್ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಆರೋಪಕ್ಕೆ ಫಡ್ನವಿಸ್‌ ತಿರುಗೇಟು! | CM Devendra Fadnavis | Rahul Gandhi | Suvarna News

ಪುಣೆಯ ನರ್ಹೆ ಪ್ರದೇಶದಿಂದ ತಾನಾಜಿ ಸಾವಂತ್ ಅವರ ಮಗ ನಾಪತ್ತೆಯಾಗಿರುವ ಸುದ್ದಿ ಇದೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಚಿವರ ಮಗ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ, ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ತಾನಾಜಿ ಸಾವಂತ್ ಕಳೆದ ಕೆಲವು ದಿನಗಳಿಂದ ಏಕನಾಥ್ ಶಿಂಧೆ ಮೇಲೆ ಕೋಪಗೊಂಡಿದ್ದರು. ಇದರ ಬೆನ್ನಲ್ಲೇ ಅಪಹರಣವಾಗಿರುವುದು ಈ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ನನ್ನ ಮಗ ಹೇಳದೇ ಹೋಗುವವನಲ್ಲ:

ಮಗನ ಅಪಹರಣದ ಬಗ್ಗೆ ತಾನಾಜಿ ಸಾವಂತ್ ಪ್ರತಿಕ್ರಿಯಿಸಿದ್ದು, ನನ್ನ ಮಗ ರಿತುರಾಜ್ ನನಗೆ ಹೇಳದೆ ಮನೆಯಿಂದ ಹೊರಗೆ ಹೋಗುವುದಿಲ್ಲ. ಆದರೆ, ಅವನು ನನಗೆ ತಿಳಿಸದೆ ವಿಮಾನ ನಿಲ್ದಾಣದಿಂದ ಹೊರಟುಹೋಗಿದ್ದಕ್ಕೆ ನಾನು ಚಿಂತಿತನಾಗಿದ್ದೆ ಮತ್ತು ನಾನು ಅಪಹರಣ ದೂರು ದಾಖಲಿಸಿದ್ದೇನೆ ಆದರೆ ಅವನ ಜೊತೆ ಇಬ್ಬರು ಸ್ನೇಹಿತರಿದ್ದಾರೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.