ಕೊರೋನಾ ತಡೆಗಟ್ಟಲು ಚಿನ್ನದ ಮಾಸ್ಕ್, ಶ್ರೀಮಂತನ ಐಡಿಯಾಗೆ ದೂರ ಸರಿಯುತ್ತಾ ವೈರಸ್?

ಆರಂಭದಲ್ಲಿ ಕೊರೋನಾ ವೈರಸ್ 50 ವರ್ಷ ಮೇಲ್ಪಟ್ಟವರಿಗೆ ಬರುತ್ತಿತ್ತು. ಬಳಿಕ ಚಿಕ್ಕ ಮಕ್ಕಳಿಂದ ಹಿಡಿದು, ಎಲ್ಲಾ ವಯಸ್ಕರಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಆದರೆ ಕೊರೋನಾ ಆರಂಭದಿಂದ ಇಲ್ಲೀಯವರೆಗೆ ಶ್ರೀಮಂತ, ಬಡವ ಅನ್ನೋ ಬೇಧಭಾವ ಮಾಡಿಲ್ಲ. ನಿರ್ಲಕ್ಷ್ಯ, ಅಸಡ್ಡೆ, ನಮಗೆಲ್ಲಿ ಅಂತಿದ್ದವರನ್ನು ಹುಡುಕಿಕೊಂಡು ಕೊರೋನಾ ಬಂದಿದೆ. ಇದೀಗ ಇಲ್ಲೊಬ್ಬ ಉದ್ಯಮಿ ತನ್ನ ಶ್ರೀಮಂತಿಕೆಯಿಂದ ಕೊರೋನಾ ಹೊಡೆದೋಡಿಸುವ ಪ್ರಯತ್ನ ಮಾಡಿದ್ದಾನೆ.

Pune Man got himself a mask made of gold worth Rs 2.89 Lakhs prevent coronavirus

ಪುಣೆ(ಜು.03): ಕೊರೋನಾ ವೈರಸ್ ಇಡೀ ಭಾರತವನ್ನೇ ವ್ಯಾಪಿಸಿದೆ.  ಗಲ್ಲಿ ಗಲ್ಲಿಯಲ್ಲೂ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಬಚಾವ್ ಆಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧಾರಣೆ, ಶುಚಿತ್ವ ಸೇರಿದಂತೆ ಕೆಲ ವಿಧಾನಗಳನ್ನು ಪಾಲಿಸಬೇಕು. ಕೊರೋನಾ ವಕ್ಕರಿಸಿದ ಬಳಿಕ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಸ್ಕ್‌ಗಳು ಲಭ್ಯವಿದೆ.

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್.. 

ತರಹೇವಾರಿಯ ಮಾಸ್ಕ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಮೋದಿ ಹೆಸರಿನ ಮಾಸ್ಕ್​ ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್​ ಸೆಟ್ ಮಾಡಿದೆ. ಕೆಲವರಂತೂ ಮಾಸ್ಕ್​ಗಳಿಗೆ ಕರೊನಾ ಮಾಸ್ಕ್​ ಎಂದೇ ಹೆಸರಿಸಿ ವ್ಯಾಪಾರ ಮಾಡ್ತಿದ್ದಾರೆ. ಇನ್ನು ಶ್ರೀಮಂತರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮಾಸ್ಕ್ ಖರೀದಿಸಿ, ಧರಿಸುತ್ತಾರೆ.  ಇಷ್ಟರ ನಡುವೆ ಪುಣೆಯಲ್ಲೊಬ್ಬ ಚಿನ್ನದ ಮಾಸ್ಕ್​ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. 

 

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!.

ಈತನ ಹೆಸರು ಶಂಕರ್. ಈತ  ಪಿಂಪ್ರಿ ಚಿಂಚವಾಡದ ಶಂಕರ್ ಎಂದೆ ಪುಣೆಯಲ್ಲಿ ಪ್ರಸಿದ್ಧಿ. ಇಡೀ ದೇಶದಲ್ಲಿ ಕೋವಿಡ್​ ಸೋಂಕು ರಣಕೇಕೆ ಹಾಕುತ್ತಿರುವಾಗಲೇ ಶಂಕರ್​ ಚಿನ್ನದ ಮಾಸ್ಕ್ ಮಾಡಿಸಿಕೊಡಿದ್ದಾನೆ. ಇನ್ನೂ ಈ ಚಿನ್ನದ ಮಾಸ್ಕ್​ಗೆ ಬರೋಬ್ಬರಿ 2.89 ಲಕ್ಷ ರೂ. ಖರ್ಚು ಮಾಡಲಾಗಿದೆ.  ಶಂಕರ್ ಧರಿಸಿರುವ ಚಿನ್ನದ ಮಾಸ್ಕ್ ತೀರಾ ತೆಳುವಾಗಿದ್ದು, ಸಣ್ಣಸಣ್ಣ ರಂಧ್ರಗಳಿವೆಯಂತೆ. ಉಸಿರಾಟಕ್ಕೆ ತೊಂದರೆ ಆಗದಂತೆ  ರಂಧ್ರಗಳನ್ನು ತೆರೆಯಲಾಗಿದೆ. 

ಉಸಿರಾಟಕ್ಕೆ ರಂಧ್ರ ಮಾಡಲಾಗಿದೆ ನಿಜ. ಆದರೆ ಇದು ಕೊರೋನಾ ತಡೆಗಟ್ಟುವ ಯಾವ ಲಕ್ಷಣಗಳಿಲ್ಲ. ಕೊರೋನಾ ಮಹಾಮಾರಿಗೆ ಶ್ರೀಮಂತಿಕೆ ಮೂಲಕ ಬೆದರಿಕೆ ಹಾಕಿರುವ ಶಂಕರ್ ಪರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Latest Videos
Follow Us:
Download App:
  • android
  • ios