ಬೆಂಗಳೂರು, (ಜುಲೈ.04): ವೈದ್ಯಕೀಯ ಸಮೂಹಕ್ಕೆ ದೋಷಪೂರಿತ ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ವಿತರಣೆ ಮಾಡಿರುವ ಕುರಿತ ದೂರಿನ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಟಾಸ್ಕ್ ಫೋರ್ಸ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್,  ನೀಡಿರುವ ಪಿಪಿಇ ಕಿಟ್ ಸರಿಯಾಗಿರಲಿಲ್ಲ ಎಂದು ಮಾಹಿತಿ ಬಂದಿತ್ತು. ಇದು ಸರ್ಕಾರದ ಗಮನಕ್ಕೆ ಬಂದ ತಕ್ಷಣ ನಾನು ಕ್ರಮ ತೆಗೆದುಕೊಳ್ಳಲಾಗಿದ್ದು,  ತನಿಖೆಗೆ ಸೂಚನೆ ನೀಡಿದ್ದೇನೆ‌. ಈ ಬಗ್ಗೆ ನಮ್ಮ ಇಲಾಖೆಯ ನಿರ್ದೇಶಕರಿಗೆ ತನಿಖೆಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಹೆಸರಲ್ಲಿ ಸರ್ಕಾರ ಕೋಟಿ-ಕೋಟಿ ಲೂಟಿ: ಎಳೆ-ಎಳೆಯಾಗಿ ಬಿಚ್ಚಿಟ್ಟ ಉಗ್ರಪ್ಪ

ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಆರೋಪ ಸಾಬೀತಾದಲ್ಲಿ ಕಿಮ್ಸ್ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದಿದ್ದಾರೆ. 

ಕೋವಿಡ್ ಸೋಂಕು ವಿರುದ್ಧ ವೈದ್ಯರು ಮುಂಚೂಣಿಯಲ್ಲಿದ್ದು, ಹೋರಾಡುತ್ತಿದ್ದಾರೆ. ವೀರ ಯೋಧರ ಸುರಕ್ಷತೆಗಾಗಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

'ಕೋವಿಡ್ ವಿರುದ್ಧ ನಮ್ಮ ವೈದ್ಯರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೀರಯೋಧರು. ಅವರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ರಾಜ್ಯಸರ್ಕಾರ ಕೈಗೊಂಡಿದೆ. ಕಿಮ್ಸ್ ನಲ್ಲಿ ವೈದ್ಯರಿಗೆ ದೋಷಪೂರಿತ ಪಿಪಿಇ, ಎನ್95 ಮಾಸ್ಕ್ ಕುರಿತ ದೂರಿನ ಬಗ್ಗೆ ನಾನೀಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ಆರೋಪ ಸಾಬೀತಾದಲ್ಲಿ ಆಡಳಿತ ಮಂಡಳಿ ಹೊಣೆಗಾರರಾಗುತ್ತಾರೆ' ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.