ಭಾರತ ಮತ್ತು ಫ್ರಾನ್ಸ್ ಗೆಳೆತನಕ್ಕೆ ಸಾಕ್ಷಿಯಾಗುವಂತ ಬೆಳವಣಿಗೆಯೊಂದು ಇತ್ತೀಚೆಗೆ ನಡೆದಿದೆ. ಟರ್ಕಿ ಅಧ್ಯಕ್ಷ ರೆಸೆಪ್ ಟೈಯಿಪ್ ಎರ್ಡೊಗಾನ್ ಫ್ರೆಂಚ್ ಅಧ್ಯಕ್ಷ ಇಮಾನ್ಯೂಲ್ ಮಾರ್ಕೊನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಸಂದರ್ಭ ಭಾರತ ಮಾಕ್ರೋನ್ ಬೆಂಬಲಕ್ಕೆ ನಿಂತಿದೆ.

ಇಸ್ಲಾಮಿಕ್ ಸಪರೇಟಿಸಂ ಎಂದು ಹೇಳಿದ ನಂತರ ಟರ್ಕಿ ಅಧ್ಯಕ್ಷ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಅಂತರರಾಷ್ಟ್ರೀಯ ಸಂವಹನದ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ ಇಮಾನ್ಯೂಲ್ ಮಾರ್ಕೊನ್ ಅವರ ವಿರುದ್ಧ ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ  ವೈಯಕ್ತಿಕ ದಾಳಿ ನಡೆಸುವುದನ್ನು ನಾವು ಬಲವಾಗಿ ವಿವರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರವಾದಿ ಮುಹಮ್ಮದ್ ಕಾರ್ಟೂನ್ ತೋರಿಸಿದ ಶಿಕ್ಷಕನ ತಲೆ ಕಡಿದವ ಶೂಟೌಟ್!

ಪ್ಯಾರಿಸ್‌ನ ಉಪನಗರದಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯ ಚಿತ್ರ ತೋರಿಸಿದ ಶಾಲಾ ಶಿಕ್ಷಕನ ಶಿರಚ್ಛೇದ ಮಾಡಿದ ನಂತರ ಈ ಎಲ್ಲ ಬೆಳವಣಿಗೆಗಳು ನಡೆದಿವೆ. 47 ವರ್ಷದ ಶಿಕ್ಷಕನನ್ನು 18 ವರ್ಷದ ಚೆಚೆನ್ ಮುಸ್ಲಿಂ ಕೊಲೆ ಮಾಡಿದ್ದ.

ಫ್ರೆಂಚ್ ಶಿಕ್ಷಕನ ಸಾವಿನ ರೀತಿ ಜಗತ್ತನ್ನು ಬೆಚ್ಚಿಬೀಳಿಸಿದೆ. ಕ್ರೂರ ಭಯೋತ್ಪಾದಕ ದಾಳಿಯನ್ನು ಭಾರತ ವಿರೋಧಿಸುತ್ತದೆ ಎಂದಿರುವ ಭಾರತ ವಿದೇಶಾಂಗ ಸಚಿವಾಲಯ ಮೃತ ಶಿಕ್ಷಕಕನ ಕುಟುಂಬ ಮತ್ತು ಫ್ರಾನ್ಸ್ ಜನರಿಗೆ ಸಂತಾಪ ಸೂಚಿಸಿದೆ. ವಾರದ ಆರಂಭದಲ್ಲಿ ಟ್ವಿಟರ್‌ನಲ್ಲಿ #StandWithFrance ಟ್ರೆಂಡ್ ಆಗಿತ್ತು. ಫ್ರಾನ್ಸ್ ಮತ್ತು ಭಾರತ ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತದೆ.