Asianet Suvarna News Asianet Suvarna News

ಡಿಎಂಕೆ ಸಂಸದ ಎ. ರಾಜಾಗೆ ಸೇರಿದ 55 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ​ಯನ್ನು ಜಾರಿ ನಿರ್ದೇ​ಶ​ನಾ​ಲಯ (ಇ.​ಡಿ) ಗುರು​ವಾರ ಜಪ್ತಿ ಮಾಡಿಕೊಂಡಿದೆ

Property worth 55 crores belonging to DMK MP A Raja was confiscated akb
Author
First Published Dec 23, 2022, 9:08 AM IST

ಕೊಯ​ಮ​ತ್ತೂ​ರು: ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ​ಯನ್ನು ಜಾರಿ ನಿರ್ದೇ​ಶ​ನಾ​ಲಯ (ಇ.​ಡಿ) ಗುರು​ವಾರ ಜಪ್ತಿ ಮಾಡಿಕೊಂಡಿದೆ. ಎ. ರಾಜಾ ಅವ​ರಿಗೆ ಸೇರಿದ ತಮಿ​ಳು​ನಾ​ಡಿನ ಕೊಯಮತ್ತೂರು ಜಿಲ್ಲೆ​ಯ​ಲ್ಲಿ​ರುವ 45 ಎಕರೆ ಜಾಗ​ವನ್ನು ಅಕ್ರಮ ಹಣ ವರ್ಗಾ​ವಣೆ ಕಾಯ್ದೆ ಅಡಿ​ಯಲ್ಲಿ ಜಪ್ತಿ ಮಾಡಿ​ಕೊ​ಳ್ಳ​ಲಾ​ಗಿದೆ. 2004 ರಿಂದ 2007ರ ಅವ​ಧಿ​ಯಲ್ಲಿ ರಾಜಾ ಕೇಂದ್ರ ಪರಿ​ಸರ ಹಾಗೂ ಅರಣ್ಯ ಸಚಿ​ವ​ರಾ​ಗಿ​ದ್ದಾ​ಗ ಗುರು​ಗ್ರಾ​ಮ ಮೂಲದ ರಿಯಲ್‌ ಎಸ್ಟೇಟ್‌ ಕಂಪ​ನಿ​ಯೊಂದಕ್ಕೆ ಪರಿ​ಸರ ಪರ​ವಾ​ನಗಿ ನೀಡಿದ್ದಕ್ಕೆ ಬದ​ಲಾಗಿ ಈ ಜಾಗ​ವನ್ನು ರಾಜಾ ಅವ​ರಿಗೆ ಸೇರಿದ ಕಂಪ​ನಿಗೆ ಮಾರಾಟ ಮಾಡ​ಲಾ​ಗಿತ್ತು. 

ಪ್ರಸ್ತುತ ಈ ಭೂಮಿ ರಾಜಾ (A Raja)  ಅವ​ರಿಗೆ ಸೇರಿದ ‘ಬೇ​ನಾ​ಮಿ’ ಕಂಪ​ನಿಯ ಹೆಸ​ರಿ​ನ​ಲ್ಲಿ​ದೆ ಎಂದು ಎಂದು ಇ.ಡಿ  (ED) ಹೇಳಿ​ದೆ. ಈ ಕಂಪನಿ ಆರಂಭ​ದಿಂದಲೂ ಯಾವ ವ್ಯವ​ಹಾ​ರ​ದಲ್ಲೂ ತೊಡ​ಗಿ​ಸಿ​ಕೊಂಡಿಲ್ಲ. ಕಂಪ​ನಿಯ ಹೆಸ​ರಲ್ಲಿ ಕೇವ​ಲ 55 ಕೋಟಿ ಮೌಲ್ಯದ 45 ಎಕರೆ ಭೂಮಿ​ಯನ್ನು ಮಾತ್ರ ಅಕ್ರಮ ಹಣ ಬಳಸಿ ಖರೀ​ದಿ​ಸ​ಲಾ​ಗಿ​ದೆ. ಹೀಗಾಗಿ 2007ರಲ್ಲಿ ಅಕ್ರ​ಮ​ವಾಗಿ ಸಂಪಾ​ದಿ​ಸಿದ ಹಣ​ವನ್ನು ಬಳ​ಸುವ ಏಕೈಕ ಉದ್ದೇ​ಶ​ದಿಂದ ರಾಜಾ ತಮ್ಮ ಕುಟುಂಬದ ಸದ​ಸ್ಯರು ಹಾಗೂ ಆಪ್ತರ ಹೆಸ​ರಿ​ನಲ್ಲಿ ಕಂಪನಿ ಸ್ಥಾಪಿ​ಸಿ​ದ್ದಾರೆ ಎಂದು ಇ.ಡಿ ಆರೋ​ಪಿ​ಸಿ​ದೆ. ಈ ಹಿಂದೆ ಎ. ರಾಜಾ ಅವರ 2ಜಿ ಸ್ಪೆಕ್ಟ್ರಂ (2G Spectrum) ತರಂಗಾಂತರ ಹಗ​ರ​ಣ​ದಲ್ಲೂ ಭಾಗಿ​ಯಾಗಿ 2011ರಲ್ಲಿ ಜೈಲು ಸೇರಿ​ದ್ದ​ರು.

ಎ. ರಾಜಾ ಹಳೆಯ 2ಜಿ ಕ್ಷಿಪಣಿ: ಮೋದಿ ಕಿಡಿ

2ಜಿ ಹಗರಣ: ವಿಚಾರಣೆ ಮುಂದಕ್ಕೆ ಕೋರಿದಕ್ಕೆ 16000 ಮರ ನೆಡುವ ಶಿಕ್ಷೆ!

Follow Us:
Download App:
  • android
  • ios