ಕಣದಲ್ಲಿದ್ದಾರೆ ಮಾಜಿ ಸರ್ಕಾರಿ ಮುಖ್ಯ ಅಧಿಕಾರಿಗಳು | ಇ. ಶ್ರೀಧರನ್, ಅಣ್ಣಾಮಲೈ, ರತ್ನಪ್ರಭಾ ಸ್ಪರ್ಧೆ | ಅಣ್ಣಾಮಲೈ, ಮೆಟ್ರೋ ಶ್ರೀಧರನ್‌ಗೆ ಮುನ್ನಡೆ

ದೆಹಲಿ(ಮೇ.02): ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಬಾರಿ ಮುಖ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರೋ ಮಾಜಿ IPS ಅಧಿಕಾರಿ ಸಿಂಗಂ ಅಣ್ಣಾಮಲೈ, ಮೆಟ್ರೋ ಮ್ಯಾನ್ ಇ. ಶ್ರೀಧರನ್, ನಿವೃತ್ತ IAS ಅಧಿಕಾರಿ ರತ್ನಪ್ರಭಾ ಅವರ ಕಡೆ ಮತದಾರರ ಒಲವು ಹೇಗಿದೆ ನೋಡೋಣ

ಕೆ. ಅಣ್ಣಾಮಲೈ ಅವರು ಅರವಿಕುರಿಚಿಯಿಂದ ಸ್ಪರ್ಧಿಸುತ್ತಿದ್ದರೆ, ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‌ನಿಂದ ಸ್ಪರ್ಧಿಸಿದ್ದು, ರತ್ನಪ್ರಭಾ ಅವರು ತಿರುಪತಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಪಂಚರಾಜ್ಯ ಚುನಾವಣಾ ಫಲಿತಾಂಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್.ಇಲಾಂಗೊ (ಡಿಎಂಕೆ), ಅಣ್ಣಾಮಲೈ (ಬಿಜೆಪಿ), ಮೊಹದ್ ಹನೀಫ್ ಸಹೀಲ್ (ಎಂಎನ್‌ಎಂ), ಅನಿಷಾ ಪರ್ವೀನ್ (ಎನ್‌ಟಿಕೆ), ಪಿಎಸ್‌ಎನ್‌ತಂಗವೇಲ್ (ಎಎಂಎಂಕೆ) 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅರಾವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳು. ಅಣ್ಣಾಮಲೈ ಅವರು ಅರವಿಕುರಿಚಿಯಲ್ಲಿ ಮುನ್ನಡೆಯಲ್ಲಿದ್ದರೆ, ಮೆಟ್ರೋ ಶ್ರೀಧರನ್ ಅವರು ಪಾಲಕ್ಕಾಡ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

"

ಕೇರಳದಲ್ಲಿ ಬಿಜೆಪಿ ಟ್ರಿಕ್ ವರ್ಕೌಟ್ ಆಗಿದ್ದು ಫೇಮಸ್ ಮೆಟ್ರೋ ಮ್ಯಾನ್‌ಗೆ ಟಿಕೆಟ್ ಕೊಟ್ಟ ಬಿಜೆಪಿ ನಿರೀಕ್ಷೆ ಹುಸಿಯಾಗಿಲ್ಲ. ಸಿಪಿಐ (ಎಂ) ನ ಸಿ.ಪಿ.ಪ್ರಮೋದ್, ಕಾಂಗ್ರೆಸ್‌ನಿಂದ ಶಫಿ ಪರಂಬಿಲ್, ಬಿಜೆಪಿಯ ಇ.ಶ್ರೀಧರನ್ ಸ್ಪರ್ಧಿಸಿದ್ದಾರೆ. 

2016 ರ ಚುನಾವಣೆಯಲ್ಲಿ ಈಗಿನ ಶಾಸಕ ಶಫಿ ಪರಂಬಿಲ್ (ಕಾಂಗ್ರೆಸ್) ಸುಮಾರು 17,000 ಬಹುಮತವನ್ನು ಗಳಿಸಿದ್ದರೂ, ಬಿಜೆಪಿಗೆ ವಿಧಾನಸಭಾ ಸ್ಥಾನದಲ್ಲಿ ಈ ಬಾರಿ ಹೆಚ್ಚಿನ ಭರವಸೆ ಇದೆ. ಪಾಲಕ್ಕಾಡ್ ಪುರಸಭೆಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಗಳನ್ನು ಹೆಚ್ಚಿಸಿ ಭರವಸೆಮೂಡಿಸುತ್ತಿದೆ.