Asianet Suvarna News Asianet Suvarna News

ಗಾಂಧಿ ಕುಟುಂಬಕ್ಕೆ ಭೂಹಗರಣ ಸಂಕಷ್ಟ, ಇಡಿ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ವಾದ್ರಾ ಹೆಸರು!

ಹರ್ಯಾಣ ಭೂಹಗರಣ ಇದೀಗ ಗಾಂಧಿ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರು ಉಲ್ಲೇಖಿಸಲಾಗಿದೆ. ಎರಡು ಪ್ರಕರಣಗಳು ಇದೀಗ ಪ್ರಿಯಾಂಕಾ ಹಾಗೂ ಪತಿ ರಾಬರ್ಟ್ ವಾದ್ರಾಗೆ ತೀವ್ರ ಸಂಕಷ್ಟ ತಂದಿದೆ.

Priyanka Gandhi vadra named in ED chargesheet in connections with Haryana Land scam says report ckm
Author
First Published Dec 28, 2023, 1:56 PM IST

ಹರ್ಯಾಣ(ಡಿ.28) ಲೋಕಸಭೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಇದೀಗ ಭೂಹಗರಣ ಪ್ರಕರಣ ತಲೆನೋವಾಗಿ ಪರಿಣಿಸಿದೆ. ಹರ್ಯಾಣದಲ್ಲಿನ ಭೂಹಗರಣ ಪ್ರಕರಣ ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೊರಳಿಗೆ ಸುತ್ತಿಕೊಂಡಿದೆ. 5 ಏಕರೆ ಭೂಮಿಯನ್ನು ಖರೀದಿಸಿ ಮಾರಾಟ ಮಾಡಿರುವುದಲ್ಲಿ ಅಕ್ರಮ ನಡೆದಿದೆ ಎಂದು ಇಡಿ ಅಧಿಕಾರಿಗಳು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕ ಪತಿ ರಾಬರ್ಟ್ ವಾದ್ರಾ ಹೆಸರು ಕೂಡ ಉಲ್ಲೇಖಗೊಂಡಿದೆ ಎಂದು ಮೂಲಗಳು ಹೇಳಿವೆ.

ಹರ್ಯಾಣದ ಫರೀದಾಬಾದ್‌ನಲ್ಲಿ ಪ್ರಿಯಾಂಕಾ ಗಾಂಧಿ 5 ಏಕರೆ ಕೃಷಿ ಜಮೀನನ್ನು 2006ರಲ್ಲಿ ಖರೀದಿಸಿದ್ದಾರೆ. ದೆಹಲಿ ಮೂಲದ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್ಎಲ್ ಪಹ್ವಾ ಬಳಿಯಿಂದ ಈ ಜಮೀನನ್ನು ಪ್ರಿಯಾಂಕ ಗಾಂಧಿ ವಾದ್ರಾ ಖರೀದಿಸಿದ್ದಾರೆ. ಬಳಿಕ 2010ರಲ್ಲಿ ಇದೇ 5 ಏಕರೆ ಕೃಷಿ ಭೂಮಿಯನ್ನು ಮತ್ತದೇ ಹೆಚ್‌ಎಲ್ ಪಹ್ವಾಗೆ ಮಾರಾಟ ಮಾಡಿದ್ದಾರೆ. ಇದೇ ರಿಯಲ್ ಎಜೆಂಟ್‌ನಿಂದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ 2005-06ರಲ್ಲಿ 40.08 ಏಕರೆ ಭೂಮಿಯನ್ನು ಖರೀದಿಸಿದ್ದರು. ಅಮಿಪುರ್ ಗ್ರಾಮದ ಬಳಿ ಇರುವ ಈ ಜಮೀನನ್ನು ಬಳಿಕ 2010ರಲ್ಲಿ ಇದೇ ಹೆಚ್‌ಎಲ್ ಪಹ್ವಾಗೆ ಮಾರಾಟ ಮಾಡಿದ್ದಾರೆ.

ಅಕ್ರಮ ಹಣದಲ್ಲಿ ಲಂಡನ್‌ ಮನೆ ನವೀಕರಿಸಿದ ಸೋನಿಯಾ ಅಳಿಯ: ವಾದ್ರಾ ವಿರುದ್ಧ ಇ.ಡಿ. ಆರೋಪ

ಇದೇ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್‌ಎಲ್ ಪಹ್ವಾ  ಹಾಗೂ ಎನ್ಆರ್‌ಐ ಸಿಸಿ ಥಂಪಿ ಹಲವು ಉದ್ಯಮದಲ್ಲಿ ಜೊತೆಗಾರರಾಗಿದ್ದಾರೆ. ಈ ಸಿಸಿ ಥಂಪಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಸಿಸಿ ಥಂಪಿ ಇದೇ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್‌ಎಲ್ ಪಹ್ವಾ ಬಳಿಯಿಂದ ಭೂಮಿ ಖರೀದಿಸಿದ್ದಾರೆ.2016ರಲ್ಲಿ ಭಾರತ ತೊರೆದಿರುವ ಸಂಜಯ್‌ ಭಂಡಾರಿ ಮೇಲೆ ಅಕ್ರಮ ಹಣ ವರ್ಗಾವಣೆ, ರಕ್ಷಣಾ ಮಧ್ಯವರ್ತಿಯಾಗಿ ಲಂಚ ಪಡೆದ ಆರೋಪ ಸೇರಿದಂತೆ ಹಲವು ಆರೋಪಗಳು ಸಂಜಯ್ ಭಂಡಾರಿ ಮೇಲಿದೆ. ಈ ಆರೋಪಿ ಕೂಡ ಹೆಚ್‌ಎಲ್ ಪಹ್ವಾ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. 

ಕೋರ್ಟ್‌ಗೆ ಸಲ್ಲಿಸಿರುವ ಅಧಿಕೃತ ದಾಖಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅಕ್ರಮದ ಕುರಿತು ಉಲ್ಲೇಖವಾಗಿದೆ. ಇತ್ತೀಚೆಗೆ ರಾಬರ್ಟ್ ವಾದ್ರಾ ವಿರುದ್ಧವೂ ಇಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ದೇಶಭ್ರಷ್ಟ ರಕ್ಷಣಾ ಮಧ್ಯವರ್ತಿ ಸಂಜಯ್‌ ಭಂಡಾರಿ ಅಕ್ರಮ ಹಣದಲ್ಲಿ ಪಾಲು ಪಡೆದಿರುವ ರಾಬರ್ಟ್ ವಾದ್ರಾ ತಮ್ಮ ಲಂಡನ್‌ನಲ್ಲಿರುವ ಮನೆಯನ್ನು ನವೀಕರಿಸಿದ್ದಾರೆ ಅನ್ನೋ ಆರೋಪ ಎದುರಾಗಿದೆ.

I-N-D-I-A ಒಕ್ಕೂಟಕ್ಕೆ ಹೊರೆಯಾದ್ರಾ ಪ್ರಿಯಾಂಕಾ ಗಾಂಧಿ? ಯುಪಿ ಉಸ್ತುವಾರಿ ಜವಾಬ್ದಾರಿ ವಾಪಸ್!

Follow Us:
Download App:
  • android
  • ios