ಅಕ್ರಮ ಹಣದಲ್ಲಿ ಲಂಡನ್‌ ಮನೆ ನವೀಕರಿಸಿದ ಸೋನಿಯಾ ಅಳಿಯ: ವಾದ್ರಾ ವಿರುದ್ಧ ಇ.ಡಿ. ಆರೋಪ

ಕಾಂಗ್ರೆಸ್‌ ವರಿಷ್ಠ, ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅಕ್ರಮ ಹಣದಿಂದ ಲಂಡನ್‌ನಲ್ಲಿರುವ ತಮ್ಮ ಮನೆ ನವೀಕರಣ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.), ದೇಶಭ್ರಷ್ಟ ರಕ್ಷಣಾ ಮಧ್ಯವರ್ತಿ ಸಂಜಯ್‌ ಭಂಡಾರಿ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

Sonia son in law Robert Vadra London house renovation with illegal money Enforcement Directorate has mentioned in the charge sheet filed against Sanjay Bhandari akb

ನವದೆಹಲಿ: ಕಾಂಗ್ರೆಸ್‌ ವರಿಷ್ಠ, ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅಕ್ರಮ ಹಣದಿಂದ ಲಂಡನ್‌ನಲ್ಲಿರುವ ತಮ್ಮ ಮನೆ ನವೀಕರಣ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.), ದೇಶಭ್ರಷ್ಟ ರಕ್ಷಣಾ ಮಧ್ಯವರ್ತಿ ಸಂಜಯ್‌ ಭಂಡಾರಿ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಬ್ರಿಟನ್‌ನಲ್ಲಿ ನೆಲೆಸಿರುವ ಭಂಡಾರಿ ಅವರಿಗೆ ಸೇರಿದ ಅಕ್ರಮ ಹಣದಲ್ಲಿ ವಾದ್ರಾ ಪಾಲು ಪಡೆದುಕೊಂಡಿದ್ದಾರೆ. ಅದೇ ಹಣದಿಂದ ಲಂಡನ್‌ನ ತಮ್ಮ ಮನೆ ನವೀಕರಿಸಿ ಅಲ್ಲಿ ತಂಗಿದ್ದರು ಎಂದು ಹೊಸದಾಗಿ ಇ.ಡಿ. ಹೇಳಿದೆ. ಈ ಪ್ರಕರಣದಲ್ಲಿ ಹಿಂದೆ ವಾದ್ರಾ ಹೆಸರು ಪ್ರಸ್ತಾಪವಾಗಿದ್ದರೂ, ಚಾರ್ಜ್‌ಶೀಟಲ್ಲಿ ಅವರ ಹೆಸರಿನ ಉಲ್ಲೇಖ ಇದೇ ಮೊದಲು.

ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು

ಏನಿದು ಪ್ರಕರಣ?:

2016ರಲ್ಲಿ ಭಾರತ ತೊರೆದು ಹೋದ ಭಂಡಾರಿ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಇ.ಡಿ., 2017ರಲ್ಲಿ ಈತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಚೆರುವತ್ತೂರ್‌ ಚಾಕುಟ್ಟಿ ಥಂಪಿ ಮತ್ತು ಸುಮಿತ್‌ ಚಧಾ ಅವರ ವಿರುದ್ಧವೂ ಪ್ರಕರಣ ದಾಖಲಿಸಿತ್ತು. 2020ರಲ್ಲಿ ಥಂಪಿಯನ್ನು ಬಂಧಿಸಿದ್ದ ಇ.ಡಿ. ಉಳಿದ ಆರೋಪಿಗಳಿಗೂ ನೋಟಿಸ್‌ ಜಾರಿ ಮಾಡಿತ್ತು.

ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಥಂಪಿ, ರಾಬರ್ಟ್‌ ವಾದ್ರಾ ಅವರ ಆತ್ಮೀಯನಾಗಿದ್ದು, ಇವರಿಬ್ಬರ ನಡುವೆ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದೆ. ಈ ಹಿಂದೆ ಇ.ಡಿ. ವಾದ್ರಾ ವಿಚಾರಣೆ ನಡೆಸಿತ್ತು.

ರಾಬರ್ಟ್‌ ವಾದ್ರಾಗೆ ಬಿಗ್‌ ರಿಲೀಫ್‌, ಡಿಎಲ್‌ಎಫ್‌ ಲ್ಯಾಂಡ್‌ ಡೀಲ್‌ನ ದಾಖಲೆಗಳು ಪ್ರವಾಹದ ನೀರಿನಿಂದ ನಾಶ!

Latest Videos
Follow Us:
Download App:
  • android
  • ios