* 3-4 ದಿನಗಳ ಕಾಲ ಲಖನೌನಲ್ಲೇ ನೆಲೆಯೂರಲಿರುವ ಪ್ರಿಯಾಂಕಾ* ಕಾಂಗ್ರೆಸ್‌ ಬಲವರ್ಧನೆ: ನಾಳೆಯಿಂದ ಪ್ರಿಯಾಂಕಾ ಉ.ಪ್ರ. ಯಾತ್ರೆ* ರಾಜ್ಯ ಕಾಂಗ್ರೆಸ್‌ ಸದಸ್ಯರು, ಜಿಲ್ಲೆ ಮತ್ತು ನಗರಗಳ ಅಧ್ಯಕ್ಷರ ಜೊತೆ ಸಭೆ

ನವದೆಹಲಿ(ಜು.13): ಮುಂದಿನ ವರ್ಷ ಎದುರಾಗಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪಕ್ಷದ ಬಲವರ್ಧನೆಗಾಗಿ ತಂತ್ರ ರೂಪಿಸಲು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜು.14ರಂದು ಲಖನೌಗೆ ಆಗಮಿಸಲಿದ್ದಾರೆ. ಆ ಬಳಿಕ ರಾಜ್ಯದ ಇತರೆ ಭಾಗಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3-4 ದಿನಗಳ ಕಾಲ ಲಖನೌನಲ್ಲೇ ನೆಲೆಯೂರಲಿರುವ ಪ್ರಿಯಾಂಕಾ ಅವರು, ರಾಜ್ಯ ಕಾಂಗ್ರೆಸ್‌ ಸದಸ್ಯರು, ಜಿಲ್ಲೆ ಮತ್ತು ನಗರಗಳ ಅಧ್ಯಕ್ಷರ ಜೊತೆ ಸಭೆ ನಡೆಸಲಿದ್ದಾರೆ ಎಂದು ಎಂದು ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿ ಪಕ್ಷವನ್ನು ಗಟ್ಟಿಯಾಗಿ ನೆಲೆಯೂರಿಸುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಅವರು, ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಮುಖಂಡರ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಮೂಲಭೂತ ವಸ್ತುಗಳ ಬೆಲೆ ಏರಿಕೆ, ಕೊರೋನಾ ವೈರಸ್‌ ಸೃಷ್ಟಿಸಿದ ಭೀಕರ ಪರಿಸ್ಥಿತಿ, ಪಂಚಾಯತ್‌ ಚುನಾವಣೆಯಲ್ಲಿ ನಡೆದ ಗಲಭೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.