Asianet Suvarna News Asianet Suvarna News

ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್: ಸುಳ್ಳು ಹಬ್ಬಿಸಿದ್ದ ಪ್ರಿಯಾಂಕಾ, Twitterನಲ್ಲಿ ಶಾಕಿಂಗ್ ಉತ್ತರ!

* ಸೆಂಟ್ರಲ್ ವಿಸ್ಟಾ ಯೋಜನೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಉತ್ತರ

* ಸುಳ್ಳು ಅಂಕಿ ಅಂಶ ಕೊಟ್ಟ ಕಾಂಗ್ರೆಸ್‌ಗೆ ಉತ್ತರ

* ಸರ್ಕಾರ ಕೊಟ್ಟ ದಾಖಲೆಗೂ, ಕಾಂಗ್ರೆಸ್‌ ಹಬ್ಬಿಸಿದ ಮಾಹಿತಿಗೂ ಭಾರೀ ವ್ಯತ್ಯಾಸ

Priyanka Gandhi Spreaded fake News On Central Vista Project pod
Author
Bangalore, First Published Jul 29, 2021, 5:03 PM IST
  • Facebook
  • Twitter
  • Whatsapp

ನವದೆಹಲಿ(ಜು.29): ಸೆಂಟ್ರಲ್ ವಿಸ್ಟಾ ಯೋಜನೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಕೇಂದ್ರ ಸರ್ಕಾರವನ್ನು ಮುತ್ತಿಗೆ ಹಾಕುತ್ತಿದ್ದ ಕಾಂಗ್ರೆಸ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯಕ್ಕೊಳಗಾಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ, ಪಿ.ಚಿದಂಬರಂವರೆಗೆ ಈ ಯೋಜನೆಗೆ 20,000 ಕೋಟಿ ರೂ. ವೆಚ್ಚವಾಗುತ್ತದೆ ಎಂದು, ಸರ್ಕಾರ ಈ ಯೋಜನೆಗೆ ಸುಮಾರು 1,289 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಪ್ರಿಯಾಂಕಾ ಗಾಂಧಿಗೆ ಸಿಕ್ತು ಈ ಉತ್ತರ

ಪ್ರಿಯಾಂಕಾ ಗಾಂಧಿ ಈ ಯೋಜನೆ ಸಂಬಂಧ ಮೇ 10 ರಂದು ಟ್ವೀಟ್ ಮಾಡಿದ್ದು, ಇದರಲ್ಲಿ ಎರಡೂ ಯೋಜನೆಗಳ ವೆಚ್ಚ 20,000 ಕೋಟಿ ರೂ. ಆಗುತ್ತದೆ ಎಂದಿದ್ದರು. ಆದರೆ ಯೋಜನೆಯ ವೆಚ್ಚ ಸುಮಾರು 1,289 ಕೋಟಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಸುಳ್ಳು ಮಾಹಿತಿ ಹರಡಿದ್ದ ಪಕ್ಷ ಸದ್ಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಟ್ವಿಟ್ಟರ್‌ನಲ್ಲಿ@SocialTamashaದಲ್ಲಿ ಈ ಬಗ್ಗೆ ಉತ್ತರಿಸಲಾಗಿದ್ದು, ಸೆಂಟ್ರಲ್ ವಿಸ್ಟಾದಲ್ಲಿ 20 ಸಾವಿರ ಕೋಟಿಗಳಷ್ಟು ಸುಳ್ಳನ್ನು ಹರಡುವವರೇ, ನಿಮ್ಮ ಮುಖಕ್ಕೆ ಮಸಿ ಬಳಿದಿದೆ ಎಂದು ಪ್ರಿಯಾಂಕಾ ಗಾಂಧಿಯನ್ನು ಟ್ಯಾಗ್ ಮಾಡಲಾಗಿದೆ.

ಅಂಕಿ ಅಂಶವನ್ನು ತಿಳಿಸಿದ ಸರ್ಕಾರ 

ಸುಮಾರು 971 ಕೋಟಿ ರೂ. ಖರ್ಚು ಮಾಡುವ ಮೂಲಕ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಕ್ಟೋಬರ್ 2022 ರೊಳಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಅದೇ ಸಮಯದಲ್ಲಿ, ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು 608 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಇದನ್ನು ನವೆಂಬರ್ 2021 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.

ಈ ಎರಡು ಯೋಜನೆಗಳಿಗೆ ಇದುವರೆಗೆ 238 ಕೋಟಿ ರೂ. ಅಂದರೆ ಹೊಸ ಸಂಸತ್ತಿನ ಕಟ್ಟಡಕ್ಕಾಗಿ ಮತ್ತು ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿಗಾಗಿ 63 ಕೋಟಿ ರೂ. 2021-22ರ ಆರ್ಥಿಕ ವರ್ಷಕ್ಕೆ ಈ 2 ಯೋಜನೆಗಳಿಗೆ ಆಗುವ ಅಂದಾಜು ವೆಚ್ಚ 1,289 ಕೋಟಿ ರೂ.

Follow Us:
Download App:
  • android
  • ios