ಲಖನೌ (ಫೆ.21): ಹಗಲಿರುಳನ್ನೂ ಲೆಕ್ಕಿಸದೆ ನಮ್ಮ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿರುವ ಯೋಧರು ಸಹ ರೈತನ ಮಕ್ಕಳೇ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. 

ಅಲ್ಲದೆ 3 ಕೃಷಿ ಕಾಯ್ದೆಗಳ ವಿರುದ್ಧ ಅಷ್ಟೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ, ಅವುಗಳನ್ನು ಹಿಂಪಡೆಯಲು ಮುಂದಾಗದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಳೇ ನೀತಿ ಕಥೆಗಳಲ್ಲಿ ಬರುವ ಸೊಕ್ಕಿನ ಅಥವಾ ಅಹಂಕಾರಿಯ ರಾಜ ಎಂದು ಟೀಕಿಸಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ಮೋದಿ ಮುಂದೆ ಕೆಲ ಮಹತ್ವದ ಬೇಡಿಕೆ ಇಟ್ಟ ಸಿಎಂ

 ಉತ್ತರ ಪ್ರದೇಶದ ಮುಜಾಫ್ಫರನಗರದಲ್ಲಿ ಶನಿವಾರ ಕಾಂಗ್ರೆಸ್‌ ಏರ್ಪಡಿಸಿದ್ದ ಕಿಸಾನ್‌ ಮಹಾಪಂಚಾಯತ್‌ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ವಾದ್ರಾ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌, ವಿದ್ಯುತ್‌ ದರ ಏರಿಕೆಯಾಗುತ್ತಿದೆ. ಆದರೆ ರೈತರ ಕಬ್ಬು ಬೆಳೆಗಳ ಬೆಲೆ ಮಾತ್ರ ಏರಿಕೆಯಾಗುತ್ತಿಲ್ಲ. 

ನೂತನ ಕೃಷಿ ಕಾಯ್ದೆ ಜಾರಿಯಿಂದ ಎಪಿಎಂಸಿ ಮತ್ತು ರೈತರ ಬೆಳೆಗಳಿಗೆ ಸಿಗುತ್ತಿರುವ ಬೆಂಬಲ ಬೆಲೆ(ಎಂಎಸ್‌ಪಿ) ರದ್ದಾಗಲಿದೆ ಎಂದು ದೂರಿದರು.