ಪ್ಯಾಲೆಸ್ತೀನ್ ಬಳಿಕ ಬಾಂಗ್ಲಾ ಹಿಂದೂಗಳ ಪರ ಸಂಸದೆ ಪ್ರಿಯಾಂಕಾ ಗಾಂಧಿ ಬ್ಯಾಗ್
ಪ್ಯಾಲೆಸ್ತೀನ್ ಹೆಸರಿರುವ ಬ್ಯಾಗ್ ಜೊತೆ ಸದನಕ್ಕೆ ಬಂದು ವಿವಾದ ಸೃಷ್ಟಿಸಿದ್ದ ವಯನಾಡು ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂಸತ್‌ಗೆ ಬಾಂಗ್ಲಾದೇಶದ ಹಿಂದೂಗಳ ಪರ ಬರಹವಿರುವ ಬ್ಯಾಗ್ ಹಿಡಿದು ಬಂದು ಮತ್ತೆ ಸುದ್ದಿಯಾಗಿದ್ದಾರೆ.
ನವದೆಹಲಿ (ಡಿ.18): ಪ್ಯಾಲೆಸ್ತೀನ್ ಹೆಸರಿರುವ ಬ್ಯಾಗ್ ಜೊತೆ ಸದನಕ್ಕೆ ಬಂದು ವಿವಾದ ಸೃಷ್ಟಿಸಿದ್ದ ವಯನಾಡು ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂಸತ್‌ಗೆ ಬಾಂಗ್ಲಾದೇಶದ ಹಿಂದೂಗಳ ಪರ ಬರಹವಿರುವ ಬ್ಯಾಗ್ ಹಿಡಿದು ಬಂದು ಮತ್ತೆ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಿಯಾಂಕಾ ಸೇರಿದಂತೆ ವಿಪಕ್ಷದ ಸಂಸದರು ‘ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲೋಣ’ ಎನ್ನುವ ಬ್ಯಾಗ್ ಹಿಡಿದು ಗಮನ ಸೆಳೆದರು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸಿ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದರು ಪ್ರತಿಭಟನೆಗಳನ್ನು ಕೂಗಿದರು.
ರೈತರಿಗಾಗಿ ಬೆಂಗಳೂರು ಕಂಪನಿಯಿಂದ ‘ಕಿಸಾನ್ ಕವಚ: ರೈತರು ಗದ್ದೆಗಳಲ್ಲಿ ಬೆಳೆಗಳಿಗೆ ಕ್ರಿಮಿನಾಶಕಗಳ ಸಿಂಪಡನೆ ಮಾಡುವ ಸಂದರ್ಭದಲ್ಲಿ ಕ್ರಿಮಿನಾಶಕಗಳಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರ ಬೆಂಗಳೂರು ಮೂಲದ ಕಂಪನಿ ತಯಾರಿಸಿದ, ‘ಕಿಸಾನ್ ಕವಚ’ ಉಡುಗೆಯೊಂದನ್ನು ಲೋಕಾರ್ಪಣೆಗೊಳಿಸಿದೆ. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಈ ಬಾಡಿ ಸೂಟ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಮೂಲದ ಬ್ರಿಕ್ - ಇನ್‌ಸ್ಟೆಮ್ ಸಂಸ್ಥೆಯು ಸೆಪಿಯೋ ಹೆಲ್ತ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದಲ್ಲಿ ರೈತರಿಗಂತಲೇ ಈ ಉಡಪು ಸಿದ್ಧಗೊಳಿಸಿದೆ. ಇದರ ಬೆಲೆ 4 ಸಾವಿರ ರು. ಆಗಿದ್ದು, ಇದನ್ನು ಹತ್ತಿಯಿಂದ ರೈತರು 150 ಸಲ ಮರುಬಳಕೆ ಮಾಡಬಹುದು.
ಇದು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿ: ಲೋಕಸಭೆಯಲ್ಲಿ ಮಂಡನೆಯಾದ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸಂವಿಧಾನ ವಿರೋಧಿ ಎಂದು ಕರೆದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದ್ದಾರೆ. ಮಾತನಾಡಿದ ಪ್ರಿಯಾಂಕಾ, ‘ಈ ಸಂವಿಧಾನ ವಿರೋಧಿ ಮಸೂದೆಯು ನಮ್ಮ ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ನಾವು ಇದನ್ನು ವಿರೋಧಿಸುತ್ತೇವೆ’ ಎಂದರು. ದೇಶಾದ್ಯಂತ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಈ ಮಸೂದೆಯನ್ನು ಬಿಜೆಪಿ ಬೆಂಬಲಿಸಿದರೆ, ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಕಾಂಗ್ರೆಸ್ ರೈತರಿಗೆ ಏನೂ ಮಾಡಲ್ಲ, ಮಾಡೋಕೂ ಬಿಡಲ್ಲ: ಪ್ರಧಾನಿ ಮೋದಿ
ಪಾಕ್ ಶರಣಾಗತಿ ಚಿತ್ರ ಸೇನಾ ಕಚೇರಿಯಿಂದ ತೆರವು: ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸೋಲನುಭವಿಸಿದ ಪಾಕಿಸ್ತಾನ ಭಾರತ ಸೇನೆಯ ಎದುರು ಶರಣಾದ ಫೋಟೋವನ್ನು ಸೇನಾ ಮುಖ್ಯ ಕಚೇರಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. 1971ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಯೋಧರ ಕುರಿತು ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಸೋಮವಾರ ವಿಜಯ ದಿವಸವಾಗಿದ್ದು, ಅದೇ ದಿನ ಭಾರತೀಯ ಸೇನೆಯ ಮುಂದೆ ಪಾಕಿಸ್ತಾನ ಶರಣಾದ ಚಿತ್ರವನ್ನು ಸೇನೆಯ ಮುಖ್ಯ ಕಚೇರಿಯಿಂದ ತೆಗೆದುಹಾಕಲಾಗಿದೆ. ಇದು ಇತಿಹಾಸ ಅಳಿಸುವ ಕುತಂತ್ರ’ ಎಂದು ಎಂದರು. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಲು ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿದ್ದರ ನೆನಪಾರ್ಥ ಪ್ರತಿ ವರ್ಷ ಡಿ.16ರನ್ನು ವಿಜಯ ದಿವಸ ಎಂದು ಆಚರಿಸಲಾಗುತ್ತದೆ.