Asianet Suvarna News Asianet Suvarna News

ಜೋಶಿಮಠದ 233 ಕುಟುಂಬ ಸ್ಥಳಾಂತರ, ಬಿರುಕುಬಿಟ್ಟಿದೆ 826 ಮನೆ !

ಉತ್ತರಖಂಡದ ಜೋಶಿಮಠದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಂದು ಪ್ರಧಾನಿ ಕಚೇರಿ ಅಧಿಕಾರಿಗಳು ಜೋಶಿಮಠಕ್ಕೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಇತ್ತ 233 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

Prime Minister Office conducted an on site inspection along with senior officials in joshimath ckm
Author
First Published Jan 15, 2023, 10:21 PM IST

ಡೆಹ್ರಾಡೂನ್‌(ಜ.15) : ದೇವಭೂಮಿ ಎಂದೇ ಜನಪ್ರಿಯವಾಗಿರುವ ಉತ್ತರಖಂಡ ಇದೀಗ ಡೇಂಜರ್ ಝೋನ್ ಆಗಿ ಮಾರ್ಪಾಡಾಗಿದೆ. ಇದು ಕೇವಲ ಉತ್ತರಖಂಡದಲ್ಲಿ ಎಂದು ಸಮಾಧಾನಪಡಬೇಕಾಗಿಲ್ಲ. ಕಾರಣ ದಿಕ್ಕು ದೆಸೆಯಿಲ್ಲದ ಅಭಿವೃದ್ಧಿ, ಪರಿಸರಕ್ಕೆ ವಿರುದ್ಧವಾಗಿ ಸಾಗುತ್ತಿರುವ ನಡೆಗಳೇ ಈ ದುರಂತಕ್ಕೆ ಕಾರಣವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕಚೇರಿ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳ ಜೊತೆ ಜೋಶಿಮಠ ಸರ್ವೇ ಮಾಡಿದ್ದಾರೆ. ಜೋಶಿಮಠದ 826 ಮನಗಗಳು ಬಿರುಕು ಬಿಟ್ಟಿದೆ. ಇಧರಲ್ಲಿ 165 ಮನೆಗಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಎಂದು ವರದಿ ನೀಡಲಾಗಿದೆ. ಇಂದು 17 ಕುಟಂಬಳು ಸೇರಿ ಒಟ್ಟು 233 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.  

ಆದಿ ಶಂಕರಾಚಾರ್ಯರ ಪವಿತ್ರ ಕ್ಷೇತ್ರವಾದ ಉತ್ತರಾಖಂಡದ ಜೋಶಿಮಠದಲ್ಲಿ ಉಂಟಾಗಿರುವ ಬಿರುಕುಗಳು ಮತ್ತಷ್ಟುವಿಸ್ತಾರಗೊಂಡಿರುವುದರಿಂದ ಔಲಿ ರೋಪ್‌ವೇ ಬಳಿ ಇರುವ ಹೊಟೆಲ್‌ಗಳು ಒಂದನ್ನೊಂದು ಅಂಟಿಕೊಳ್ಳುವಷ್ಟುವಾಲಿಕೊಂಡಿವೆ.

 

ಜೋಶಿಮಠದ ಕುರಿತು ಹೇಳಿಕೆ ನೀಡುವಂತಿಲ್ಲ: ಸರ್ಕಾರಿ ಅಧಿಕಾರಿಗೆಳಿಗೆ ಕೇಂದ್ರ ತಾಕೀತು

ನಗರದಲ್ಲಿ ಬಿರುಕು ಬಿಟ್ಟಿರುವ ಮನೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇದು 826ಕ್ಕೆ ತಲುಪಿದೆ. ಇದರಲ್ಲಿ 165 ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂದು ಗುರುತಿಸಲಾಗಿದೆ. 233 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಮೊದಲು ವಾಲಿಕೊಂಡಿದ್ದ ಮಲಾರಿ ಮತ್ತು ಮೌಂಟ್‌ ವೀವ್‌ ಹೋಟೆಲ್‌ಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಹೊಟೆಲ್‌ಗಳಿಂದ 100 ಮೀ. ದೂರದಲ್ಲಿರುವ ಸ್ನೋ ಕ್ರೆಸ್ಟ್‌ ಮತ್ತು ಕೊಮೆಟ್‌ ಎಂಬ ಮತ್ತೆರಡು ಹೋಟೆಲ್‌ಗಳು ಭಾನುವಾರ ವಾಲಿಕೊಂಡಿವೆ. ಈ ಮೊದಲು ಈ 2 ಹೊಟೆಲ್‌ಗಳ ನಡುವಿನ ಅಂತರ 4 ಅಡಿಗಳಷ್ಟಿತ್ತು. ಈಗ ಅದು ಕೆಲವೇ ಇಂಚುಗಳಿಗೆ ಕಡಿಮೆಯಾಗಿದೆ. ಔಲಿ ರೋಪ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪವೇ ಈ ದುರಂತ ಸಂಭವಿಸಿದೆ.

ರೋಪ್‌ವೇ ಬಳಿಯಲ್ಲೇ 4 ಇಂಚು ಅಗಲದ 20 ಅಡಿ ಉದ್ದವಿರುವ ಬಿರುಕು ಕಾಣಿಸಿಕೊಂಡಿದೆ ಎಂದು ರೋಪ್‌ವೇ ಎಂಜಿನಿಯರ್‌ ದಿನೇಶ್‌ ಭಟ್‌ ಹೇಳಿದ್ದಾರೆ.ಭೂಕಂಪಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದಾಗಿ ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿದ್ದು, ವಾಸಕ್ಕೆ ಅಯೋಗ್ಯ ನಗರ ಎನಿಸಿಕೊಂಡಿದೆ. ಜೋಶಿಮಠ ಅಲ್ಲದೇ ರಾಜ್ಯದ ಇನ್ನೂ ಹಲವು ಸ್ಥಳಗಳು ಇದೇ ರೀತಿಯ ಭೂ ಕುಸಿತದ ಭೀತಿಗೆ ಒಳಗಾಗಿವೆ. ತೆಹ್ರಿ, ಮನಾ, ಧರಾಸು, ಹರ್ಷಿಲ್‌ ಗೌಚಾರ್‌, ಪಿತೋರ್‌ಗಢ ಮುಂತಾದ ಪ್ರದೇಶಗಳಲ್ಲೂ ಭೂಕುಸಿತ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಜೋಶಿಮಠದಂತೆ ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳಗಳಲ್ಲಿ ಕೈಗೊಂಡಿರುವ ಬೃಹತ್‌ ಕಾಮಗಾರಿಗಳು ಈ ದುರಂತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

ಜೋಶಿಮಠ ಅಲ್ಲದೇ ರಾಜ್ಯದ ಇನ್ನೂ ಹಲವು ಸ್ಥಳಗಳು ಇದೇ ರೀತಿಯ ಭೂ ಕುಸಿತದ ಭೀತಿಗೆ ಒಳಗಾಗಿವೆ. ತೆಹ್ರಿ, ಮನಾ, ಧರಾಸು, ಹರ್ಷಿಲ್‌ ಗೌಚಾರ್‌, ಪಿತೋರ್‌ಗಢ ಮುಂತಾದ ಪ್ರದೇಶಗಳಲ್ಲೂ ಭೂಕುಸಿತ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಜೋಶಿಮಠದಂತೆ ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳಗಳಲ್ಲಿ ಕೈಗೊಂಡಿರುವ ಬೃಹತ್‌ ಕಾಮಗಾರಿಗಳು ಈ ದುರಂತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

Follow Us:
Download App:
  • android
  • ios