Asianet Suvarna News Asianet Suvarna News

ನೌಕಾಪಡೆ ಬ್ಯಾಂಡ್‌ನಲ್ಲಿ ಮೂಡಿಬಂತು ಬಾಲಿವುಡ್ ಸಾಂಗ್‌ : ಬ್ಯಾಂಡ್ ಸದ್ದಿಗೆ ಯೋಧರ ಸಖತ್ ಸ್ಟೆಪ್ಸ್

 

  • ಗಣರಾಜೋತ್ಸವಕ್ಕೆ ಭರ್ಜರಿ ಸಿದ್ಧತೆ
  • ನೌಕಾಪಡೆ ಬ್ಯಾಂಡ್‌ನಲ್ಲಿ ಮೂಡಿಬಂತು ಬಾಲಿವುಡ್ ಸಾಂಗ್‌
  • ಬ್ಯಾಂಡ್ ಸದ್ದಿಗೆ ಯೋಧರ ಸಖತ್ ಸ್ಟೆಪ್ಸ್
Indian Navy Bands Amazing Performance on republic day Rehearsal akb
Author
Bangalore, First Published Jan 24, 2022, 11:28 AM IST

ನವದೆಹಲಿ: ಗಣರಾಜೋತ್ಸವಕ್ಕೆ ಎರಡೇ ದಿನ ಬಾಕಿ ಇದ್ದು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಸೇನೆಯು ಕೂಡ ಕವಾಯತಿನ ಅಭ್ಯಾಸದಲ್ಲಿ ತೊಡಗಿದೆ. ಅಭ್ಯಾಸದ ವೇಳೆ ಬಾಲಿವುಡ್‌ನ ಹಾಡೊಂದಕ್ಕೆ ಭಾರತೀಯ ನೌಕಾಪಡೆ ಬ್ಯಾಂಡ್‌ಗೆ ಯೋಧರು ಹೆಜ್ಜೆ ಹಾಕಿದ್ದು, ಈ ವಿಡಿಯೋ ನೋಡಿದರೆ ರೋಮಾಂಚನವಾಗುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತೀಯ ನೌಕಾಪಡೆಯ ನೇವಿ ಬ್ಯಾಂಡ್ ಅದ್ಭುತವಾದುದು. ಈಗ ಬಾಲಿವುಡ್‌ ಸಿನಿಮಾ ಹಾಡಾದ 'ಮೊನಿಕಾ ಓ ಮೈ ಡಾರ್ಲಿಂಗ್‌' ಹಾಡನ್ನು ಬ್ಯಾಂಡ್‌ ಮೂಲಕ ನುಡಿಸಿದ್ದು, ಇದಕ್ಕೆ ಯೋಧರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.  1967 ರ ಕ್ಯಾರವಾನ್‌ (Caravan) ಸಿನಿಮಾದ ಹಾಡು ಇದಾಗಿದ್ದು, ಆರ್‌ ಡಿ ಬರ್ಮನ್ (RD Burman) ಮತ್ತು ಆಶಾ ಭೋಂಸ್ಲೆ (Asha Bhosle) ಅವರ ಪ್ರಸಿದ್ಧ ಕಂಠಸಿರಿಯಲ್ಲಿ  ಪಿಯಾ ತು ಅಬ್ ತೋ ಆಜಾ (ಮೋನಿಕಾ, ಓ ಮೈ ಡಾರ್ಲಿಂಗ್) ಹಾಡು ಮೂಡಿ ಬಂದಿತ್ತು. ಈ ಹಾಡನ್ನು ಈಗ ನೌಕಾಪಡೆ ಬ್ಯಾಂಡ್‌ನಲ್ಲಿ ಹೊರಸೂಸಿದ್ದು, ಜೊತೆಗೆ ಯೋಧರು ಅದಕ್ಕೆ ಹೆಜ್ಜೆ ಹಾಕುತ್ತಿರುವುದು ನೋಡಲು ಸೊಗಸಾಗಿದೆ. 

 

ಜನವರಿ 26 ರಂದು ಗಣರಾಜ್ಯೋತ್ಸವ ನಡೆಯಲಿದ್ದು, ರಾಜಪಥ್‌ನಲ್ಲಿ ಭರ್ಜರಿಯಾಗಿ ತಾಲೀಮು ನಡೆಯುತ್ತಿದೆ. ಈ ವಿಡಿಯೋವನ್ನು ಭಾರತ ಸರ್ಕಾರದ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ವಿಡಿಯೋದಲ್ಲಿ ಭಾರತೀಯ ನೌಕಾಪಡೆ ಯೋಧರು ಸಮವಸ್ತ್ರ ಧರಿಸಿದ್ದು, ಕೈಯಲ್ಲಿ ರೈಫಲ್‌ ಹಿಡಿದು ವಿಜಯ ಚೌಕ್‌ನಲ್ಲಿ ಈ ಬಾಲಿವುಡ್ ಹಾಡಿಗೆ ಅಭ್ಯಾಸ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಕೈಯಲ್ಲಿ ರೈಫಲ್‌ ಹಿಡಿದು ಜೊತೆಗೆ ಚಪ್ಪಾಳೆಯನ್ನು ತಟ್ಟುತ್ತಾ ಯೋಧರು ಈ ಬ್ಯಾಂಡ್‌ ಸದ್ದಿಗೆ ಹೆಜ್ಜೆ ಹಾಕುತ್ತಿದ್ದಾರೆ. 

Republic Day 2022 ಸ್ತಬ್ಧಚಿತ್ರ ತಿರಸ್ಕಾರ ವಿವಾದ, ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯಗಳಿಗೆ ಕೇಂದ್ರದ ಸ್ಪಷ್ಟನೆ!

ಎಂಥಹಾ ದೃಶ್ಯ, ಈ ವಿಡಿಯೋ ನಿಮಗೆ ಖಂಡಿತವಾಗಿ ರೋಮಾಂಚನವನ್ನುಂಟು ಮಾಡಲಿದೆ . ನೀವು 73ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಸಾಕ್ಷಿಯಾಗಲು ನಮ್ಮ ಜೊತೆ ಪಾಲ್ಗೊಳ್ಳುವಿರೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 2.25 ನಿಮಿಷದ ಈ ವಿಡಿಯೋವನ್ನು  ಇದುವರೆಗೂ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಟ್ವಿಟ್ಟರ್‌ ಬಳಕೆದಾರರು, ವಾಹ್‌, ಲವ್ಲಿ, ಸೂಪರ್ಬ್‌ ಎಂದೆಲ್ಲಾ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು? 

ಕೆಲದಿನಗಳ ಹಿಂದೆ  ಭಾರತೀಯ ನೌಕಾಪಡೆಯ INS ರಣ್‌ವೀರ್‌ ನೌಕೆಯಲ್ಲಿ ದಿಢೀರ್ ಸ್ಫೋಟ(Explosion) ಸಂಭವಿಸಿ ಮೂವರು ನೌಕಾಪಡೆ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು.(Death) ಮುಂಬೈನ(Mumbai) ಡಾಕ್‌ಯಾರ್ಡ್‌ನಲ್ಲಿ ಈ ಘಟನೆ ನಡೆದಿತ್ತು. ಭಾರತೀಯ ನೌಕಾಪಡೆಯ(Indian Navy) ನೌಕೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ನೌಕೆಯಲ್ಲಿದ್ದಇತರ ಸಿಬ್ಬಂದಿಯ ರಕ್ಷಣೆಗೆ ತೊಡಗಿದ್ದರು. ಆದರೆ ಸ್ಫೋಟಕ ತೀವ್ರತೆದೆ ಮೂವರು ಅಧಿಕಾರಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿತ್ತು.

Follow Us:
Download App:
  • android
  • ios