* ಕೊರೋನಾ ಸಂಕಷ್ಟದ ಮಧ್ಯೆ ಭಾರತ ಹಾಗೂ ಜಪಾನ್‌ ಸ್ನೇಹಕ್ಕೆ ಮೋದಿ ಒತ್ತು* ಉಭಯ ದೇಶಗಳ ನಡುವಿನ ಸಂಬಂಧ ಮನ್ನಷ್ಟು ಬಲಪಡಿಸುವಂತೆ ಕರೆ* ಕೈಜಾನ್ ಅಕಾಡೆಮಿ ಮತ್ತು ಜಪಾನೀಸ್ ಜೆನ್ ಗಾರ್ಡನ್ ಅಕಾಡೆಮಿ ಉದ್ಘಾಟಿಸಿ ಮೋದಿ ಮಾತು 

ಅಹಮದಾಬಾದ್(ಜೂ.,28): ಕೊರೋನಾ ಸಂಕಷ್ಟದ ಮಧ್ಯೆ ಭಾರತ ಹಾಗೂ ಜಪಾನ್‌ ಸ್ನೇಹ ಹಾಗೂ ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಹೆಚ್ಚು ಮಹತ್ವದ್ದು ಎಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಸಂಬಂಧ ಮನ್ನಷ್ಟು ಬಲಪಡಿಸುವಂತೆ ಕರೆ ನೀಡಿದ್ದಾರೆ. 

ಜಪಾನಿನಲ್ಲಿ ಜನರ ಒಂಟಿತನ ನಿವಾರಣೆಗೆ ಸಚಿವ ಹುದ್ದೆ ಸೃಷ್ಟಿ!

ಅಹಮದಾಬಾದ್‌ ಮ್ಯಾನೇಜ್ಮೆಂಟ್ ಅಸೋಸಿಯೇಷನ್‌ನಲ್ಲಿ ನಿರ್ಮಿಸಲಾಗಿರುವ ಕೈಜಾನ್ ಅಕಾಡೆಮಿ ಮತ್ತು ಜಪಾನೀಸ್ ಜೆನ್ ಗಾರ್ಡನ್ ಅಕಾಡೆಮಿಯನ್ನು, ಭಾನುವಾರ ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿ ಮಾತನಾಡಿದ ಪಿಎಂ ಮೋದಿ ‘ಜೆನ್ ಗಾರ್ಡನ್ ಮತ್ತು ಕೈಜಾನ್ ಅಕಾಡೆಮಿ ಭಾರತ ಮತ್ತು ಜಪಾನ್ ನಡುವಿನ ಸಂಬಂಧಗಳ ಸ್ವಾಭಾವಿಕತೆ ಮತ್ತು ಆಧುನಿಕತೆಯ ಸಂಕೇತ. ಇದು ಜಪಾನ್‌ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಬಲಪಡಿಸಲಿದೆ ಎಂದಿದ್ದಾರೆ. 

Scroll to load tweet…

ಇದೇ ಸಂದರ್ಭದಲ್ಲಿ ಜಪಾನ್‌ ಪ್ರಧಾನಿ ಯೋಶಿಹೈಡ್ ಸುಗಾ ಬಗ್ಗೆ ಉಲ್ಲೇಖಿಸಿದ ಮೋದಿ 'ಸುಗಾ ಓರ್ವ ದಿಟ್ಟ ವ್ಯಕ್ತಿ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಭಾರತ-ಜಪಾನ್‌ ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಇನ್ನಷ್ಟು ಅಗತ್ಯವಾಗಿದೆ. ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ, ನಮ್ಮ ಸ್ನೇಹ ಮತ್ತು ಸಂಬಂಧ ದಿನದಿಂದ ದಿನಕ್ಕೆ ಬಲಗೊಳ್ಳುವುದು ಸಮಯದ ಅಗತ್ಯವಾಗಿದೆ ಎಂದಿದ್ದಾರೆ.